ಹಮಾಲಿ ಕಾರ್ಮಿಕರ ಸಂಘಟಿತ ಹೋರಾಟದಿಂದ ಸಮಸ್ಯೆಗೆ ಪರಿಹಾರ
ತರೀಕೆರೆ ಜುಲೈ.4
ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಹಮಾಲಿ ಕಾರ್ಮಿಕರು ಜೀವನ ಸಾಗಿಸುವುದು ಕಷ್ಟಕರವಾಗಿದೆ ಎಂದು ಜಿಲ್ಲಾ ಹಮಾಲಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ, ಕ.ದ. ಸಂ.ಸ.ರಾಜ್ಯ ಸಂಘಟನಾ ಸಂಚಾಲಕ ತರೀಕೆರೆ ಎನ್ ವೆಂಕಟೇಶ್ ಹೇಳಿದರು. ಅವರು ಇಂದು ಜಿಲ್ಲಾ ಹಮಾಲಿ ಕಾರ್ಮಿಕರ ಸಂಘದ ಕಚೇರಿಯಲ್ಲಿ ನಡೆದ ಅಂತರ್ ಜಿಲ್ಲಾ ಮಟ್ಟದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. 1985 –86ರಲ್ಲಿ ಜಿಲ್ಲಾ ಹಮಾಲಿ ಕಾರ್ಮಿಕರ ಸಂಘವನ್ನು ತರೀಕೆರೆಯಲ್ಲಿ ಸಂಘಟಿಸಲಾಯಿತು ನಂತರ ಚಿಕ್ಕಮಗಳೂರು, ಮೂಡಿಗೆರೆ, ಕಡೂರು,ಹೊಸದುರ್ಗ, ಭದ್ರಾವತಿ, ಶಿವಮೊಗ್ಗದಲ್ಲಿ ಸಂಘಟನೆ ಮಾಡಲಾಯಿತು.

ನಂತರ ಹಮಾಲಿ ಕಾರ್ಮಿಕರ ನ್ಯಾಯಯುತ ಹಮಾಲಿ ದರವನ್ನು ನಿಗದಿಪಡಿಸಲಾಯಿತು ಹಮಾಲರೆಲ್ಲ ಒಂದೇ ಕುಟುಂಬದವರು ಒಂದೇ ವೃತ್ತಿಯನ್ನು ಅವಲಂಬಿಸಿರುತ್ತಾರೆ ಹಮಾಲರು ಸಂಘಟಿತ ಹೋರಾಟದಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜ್ಯ ಹಮಾಲಿ ಕಾರ್ಮಿಕರ ಸಂಘದ ಕಾರ್ಯದರ್ಶಿ ದಾವಣಗೆರೆಯ ಸತೀಶ್ ರವರು ಮಾತನಾಡಿ ರಾಜ್ಯದಲ್ಲಿರುವ 220 ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋಧಾಮಗಳಲ್ಲಿ ಹಮಾಲರು ಕೆಲಸ ಮಾಡುತ್ತಿದ್ದು ಅವರಿಗೆ 2014ರಿಂದ ಇಎಸ್ಐ ಮತ್ತು ಪಿಎಫ್ ಮಾಡಿಸಬೇಕೆಂದು ಸರ್ಕಾರ ಆದೇಶ ಜಾರಿಗೊಳಿಸಿದ್ದರು, ಹೆಚ್ಚು ಕಡೆ ಎಲ್ಲಿಯೂ ಸಹ ಈ ಸೌಲಭ್ಯ ಹಮಾಲರಿಗೆ ಲಭ್ಯವಾಗಿಲ್ಲ ಆದ್ದರಿಂದ ದಿನಾಂಕ 10-.07.-2023 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಸತ್ಯಾಗ್ರಹವನ್ನು ರಾಜ್ಯ ಸಂಘ ಏರ್ಪಡಿಸಿದೆ ಎಲ್ಲಾ ಹಮಾಲಿ ಕಾರ್ಮಿಕರು ಭಾಗವಹಿಸಿ ಹಮಾಲರಿಗೆ ಕೆಲಸದ ಭದ್ರತೆ ಹಾಗೂ ಪ್ರತಿನಿತ್ಯ 8 ಗಂಟೆಗಳ ಕಾಲ ಕೆಲಸದ ಸಮಯ ನಿಗದಿ ಮತ್ತು ಸರ್ಕಾರದ ಆದೇಶದಂತೆ ಪ್ರತಿ ಕ್ವಿಂಟಲ್ ದವಸ ಧಾನ್ಯ ಆನ್ ಲೋಡಿಂಗ್, ಮತ್ತು ಲೋಡಿಂಗ್ ಗೆ 19 ರೂಪಾಯಿ ಕೊಡಲು ಸರ್ಕಾರದ ಆದೇಶದಂತೆ ಎಲ್ಲಾ ಗುತ್ತಿಗೆದಾರರು 19 ರೂಪಾಯಿ ಹಮಾಲಿ ದರ ನೀಡಬೇಕು ಏಕೆಂದರೆ,ಅನ್ನ ಭಾಗ್ಯ ಯೋಜನೆ ಜಾರಿಗೆ ಬಂದು ಹತ್ತು ವರ್ಷ ಆಗುತ್ತಿದೆ ,ಈ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ನಡೆಯುವ ಪ್ರತಿಭಟನೆಗೆ ಕರೆ ನೀಡಿದರು. ಕಡೂರು ಹಮಾಲಿ ಕಾರ್ಮಿಕರ ಸಂಘದ ಅಧ್ಯಕ್ಷ ಹರೀಶ್ ಭದ್ರಾವತಿ ಸಂಘದ ಜಗದೀಶ್ ತರೀಕೆರೆ ಸಂಘದ ಕೆ ರಾಜು, ಪಿ ನಾರಾಯಣ, ಎ ಶ್ರೀನಿವಾಸ್ ಹಾಗೂ ನೂರಾರು ಜನ ಹಮಾಲಿ ಕಾರ್ಮಿಕರು ಈ ಸಭೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ