ಎಡಿಗುಡ್ಡ ಗೊಲ್ಲರಹಟ್ಟಿ — ಟಾಟಾ ಏಸ್ ಡಿಕ್ಕಿ ಬಾಲಕಿ ಮೃತ ಮಾನವೀಯತೆ ಮೆರೆದ ಶಾಸಕರಿಂದ ವೈಯಕ್ತಿಕ ಪರಿಹಾರ.
ಎಡಿಗುಡ್ಡ ಗೊಲ್ಲರಹಟ್ಟಿ ಜುಲೈ.4

ವಿಜಯನಗರ ಜಿಲ್ಲೆಯ ಕೂಡ್ಲಿಗಿ: ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಅಮರ ದೇವರ ಗುಡ್ಡ ಗೊಲ್ಲರಹಟ್ಟಿ ಗ್ರಾಮದಲ್ಲಿ, 4ನೇ ಜುಲೈ ರಂದು ಜರುಗಿದ ಟಾಟಾ ಏಸ್ ಆಟೋ ಡಿಕ್ಕಿಯಾದ ಪರಿಣಾಮ ಅಪಘಾತದಲ್ಲಿ. ಬಾಲಕಿ ಸೃಷ್ಟಿ(9) ತಂದೆ ಶ್ರೀನಿವಾಸ್, ಸಾವನ್ನಪ್ಪಿರುವ ದುರ್ಘಟನೆ ಜರುಗಿದೆ. ವಿಷಯ ತಿಳಿದ ತಕ್ಷಣವೇ ಕ್ಷೇತ್ರದ ಶಾಸಕರಾದ ಡಾll ಎನ್.ಟಿ.ಶ್ರೀನಿವಾಸ್ ರವರು, ಮೃತ ಬಾಲಕಿಯ ಕುಟುಂಬಕ್ಕೆ ವೈಯಕ್ತಿಕವಾಗಿ (₹25.000)ಇಪ್ಪತ್ತೈದು ಸಾವಿರ ರುಪಾಯಿಗಳ ನಗದು ಹಣವನ್ನು ಪರಿಹಾರವಾಗಿ ನೀಡಿದ್ದಾರೆ. ನಗದು ಪರಿಹಾರ ಹಣವನ್ನು ಘಟನೆ ಜರುಗಿ ಕೆಲವೇ ತಾಸಿನಲ್ಲಿ, ಶಾಸಕರ ಆಪ್ತರು ಮೃತ ಬಾಲಕಿಯ ಪೋಷಕರಿಗೆ ತಲುಪಿಸಿದ್ದಾರೆ. ಅವರು ಸದ್ಯ ಸದನದಲ್ಲಿ ಭಾಗಿಯಾಗಿದ್ದು ಆದರೂ ಕೂಡ, ಇಂತಹ ತುರ್ತು ಅಥವಾ ಗಂಭೀರ ಸಂದರ್ಭದಲ್ಲಿ ಶಾಸಕರು ತಕ್ಷಣ ನೊಂದವರಿಗೆ ಸ್ಪಂಧಿಸಿದ್ದಾರೆ. ಆಪ್ತರ ಮೊಬೈಲ್ ಸಂಪರ್ಕದಿಂದ ಸುದ್ದಿ ತಿಳಿದ ಶಾಸಕರು, ಮೃತ ಬಾಲಕಿ ಕುಟುಂಬ ಸದಸ್ಯರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ. ಕುಟುಂಬ ಸದಸ್ಯರಿಗೆ ಹಾಗೂ ಮೃತ ಬಾಲಕಿಯ ಪೋಷಕರಿಗೆ, ಶಾಸಕರು ಸಾಂತ್ವಾನ ಹೇಳಿದ್ದಾರೆ ಮತ್ತು ತಕ್ಷಣ ನೊಂದ ಕುಟುಂಬಕ್ಕೆ ವೈಯಕ್ತಿಕ ಪರಿಹಾರವಾಗಿ 25 ಸಾವಿರ₹ ಹಣ ತಲುಪಿಸುವಂತೆ ತಮ್ಮ ಆಪ್ತರಿಗೆ ಸೂಚಿಸಿದ್ದಾರೆ. ಮೃತ ಬಾಲಕಿ ಮನೆಗೆ ಶನಿವಾರ ಭೇಟಿ ಮಾಡಲಿರುವ ಶಾಸಕರು ಸದನ ಕಲಾಪಗಳು ಮುಗಿದ ನಂತರದ ದಿನವಾದ, ಶನಿವಾರದಂದು ಶಾಸಕರು ಎಡಿ ಗುಡ್ಡ ಗೊಲ್ಲರ ಹಟ್ಟಿಗೆ ಧಾವಿಸಲಿದ್ದಾರೆ. ಗೊಲ್ಲರಹಟ್ಟಿಯಲ್ಲಿರುವ ಮೃತ ಬಾಲಕಿ ಮನೆಗೆ ತೆರಳಿ, ಬಾಲಕಿಯ ಪೋಷಕರಿಗೆ ಹಾಗೂ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಲಿದ್ದಾರೆ. ಶಾಸಕರ ಅನುಪಸ್ಥಿತಿ ಹಿನ್ನಲೆ ಪರಿಹಾರದ ನಗದು ಹಣ ನೀಡಿದ ಆಪ್ತರು ಬಾಲಕಿಯ ಕುಟುಂಬಕ್ಕೆ ನಗದು ಹಣವನ್ನು ಶಾಸಕರ ಸೂಚನೆಯಂತೆ, ಅವರ ಆಪ್ತರು ಶಾಸಕರ ಅನುಪಸ್ಥಿಯಲ್ಲಿ. ಅವರು ಶಾಸಕರ ಪರವಾಗಿ ಬಾಲಕಿ ಮನೆಗೆ ತೆರಳಿದ್ದು, ನೊಂದ ಪೋಷಕರಿಗೆ ಸಾಂತ್ವಾನ ಹೇಳಿದ್ದಾರೆ. ಮತ್ತು ₹ಇಪ್ಪತ್ತೈದು ಸಾವಿರ ನಗದು ಹಣವನ್ನು, ಬಾಲಕಿ ಕುಟುಂಬಕ್ಕೆ ಶಾಸಕರ ವೈಯಕ್ತಿಕ ಪರಿಹಾರವಾಗಿ ನೀಡಿದ್ದಾರೆ.ಶೀಘ್ರ ಪರಿಹಾರ ಕಲ್ಪಿಸುವಂತೆ ಶಾಸಕರಿಂದ ತಾಕೀತು ಘಟನೆಯಿಂದ ನೊಂದ ಕುಟುಂಬಕ್ಕೆ, ಸಂಬಂಧಪಟ್ಟ ಇಲಾಖೆಗಳಿಂದ ದೊರಕಬೇಕಿರುವ ಪರಹಾರವನ್ನು. ಮೃತ ಬಾಲಕಿ ಕುಟುಂಬಕ್ಕೆ ಶೀಘ್ರವೇ ಭರಿಸುವಂತೆ, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಶಾಸಕರು ತಾಕೀತು ಮಾಡಿದ್ದಾರೆ.ಸಂಬಂಧಿಸಿದಂತೆ ಮೃತ ಬಾಲಕಿ ಸೃಷ್ಟಿ ಕುಟುಂಬಕ್ಕೆ ಬೇಗನೆ, ಪರಿಹಾರ ಒದಗಿಸಿಕೊಡಬೇಕೆಂದು ಅಧಿಕಾರಿಗಳಿಗೆ ಶಾಸಕರು ದೂರವಾಣಿ ಮೂಲಕ ಸಂಪರ್ಕಿಸಿ ಆದೇಶಿಸಿದ್ದಾರೆ.

ಈ ಸಂದರ್ಭದಲ್ಲಿ ಮೃತ ಬಾಲಕಿಯ ಕುಟುಂಬದ ಎರ್ರಿಸ್ವಾಮಿ,ಯಜಮಾನ ಚಿತ್ತಪ್ಪ, ಮಾರವಾಡಿ ಚಿತ್ತಪ್ಪ, ಸಣ್ಣಯ್ಯ, ದಳವಾಯಿ ನಾಗರಾಜ ಹಾಗೂ ಕೆಲ ಗ್ರಾಮದ ಮುಖಂಡರಿದ್ದರು. ಶಾಸಕರ ಆಪ್ತ ಸಹಾಯಕ ಗೊಂಬಿ ಮರುಳಸಿದ್ದಪ್ಪ ಸೇರಿದಂತೆ, ಶಾಸಕರ ಆತ್ಮಿಯರು ಹಾಗೂ ಹಿತೈಷಿಗಳಾದ ತಾಪಂ ನಿವೃತ್ತ ಅಧಿಕಾರಿ ಜಿ.ಎಂ.ಬಸಣ್ಣ, ನಿವೃತ್ತ ಶಿಕ್ಷಕ ಓಬಣ್ಣ, ವಾಲ್ಮೀಕಿ ಸಮಾಜದ ಯುವ ಮುಖಂಡರಾದ ಕಡ್ಡಿ ಮಂಜುನಾಥ, ಗ್ಯಾಸ್ ವೆಂಕಟೇಶ, ಮಲ್ಲಿಕಾರ್ಜುನ. ಮತ್ತಿತರರು ಹಾಗೂ ಗ್ರಾಮಸ್ಥರು ಇದ್ದರು.ಈ ಮೂಲಕ ಶಾಸಕರು ನೊಂದವರ ಕಣ್ಣೀರು ಹೊರೆಸುವಲ್ಲಿ, ಅವರು ಪ್ರಾಮುಖ್ಯತೆ ತೋರಿದ್ದಾರೆ ಮತ್ತು ಸಾಂತ್ವಾನ ಹೇಳಿದ್ದಾರೆ. ಅವರು ಸದನದ ಕಾರ್ಯಕಲಾಪದಲ್ಲಿ ಭಾಗಿಯಾಗಿದ್ದು, ತಮ್ಮ ಆದ್ಯ ಕೆಲಸಗಳ ಒತ್ತಡದ ಪರಿಸ್ಥಿತಿಯಲ್ಲಿಯೂ ಕೂಡ. ಅತ್ತ್ಯಲ್ಪ ಕಾಲ ಬಿಡುವು ಮಾಡಿಕೊಂಡು ಮೃತ ಬಾಲಕಿಯ ಕುಟುಂಬಕ್ಕೆ, ಅವರೇ ಸ್ವತಃ ದೂರವಾಣಿಯಲ್ಲಿ ಸಂಪರ್ಕಿಸಿ ಸಾಂತ್ವಾನ ಹೇಳಿದ್ದಾರೆ. ಘಟನೆ ಜರುಗಿ ಕೆಲ ತಾಸಿನಲ್ಲಿಯೇ, ಅವರ ಆಪ್ತರನ್ನು ನೊಂದವರಲ್ಲಿಗೆ ಕಳುಹಿಸಿ ನಗದು ಹಣ ತಲುಪಿಸಿದ್ದಾರೆ. ಸರ್ಕಾರದಿಂದ ಅಥವಾ ಕೆಲ ಮೂಲಗಳಿಂದ ಮೃತ ಬಾಲಕಿಯ ಕುಟುಂಬಕ್ಕೆ, ಸಲ್ಲ ಬೇಕಾಗಿರುವ ಪರಿಹಾರ ಶೀಘ್ರ ಒದಗಿಸುವಂತೆ. ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಶಾಸಕರು, ತಾಕೀತು ಮಾಡಿ ಆದೇಶಿಸಿದ್ದಾರೆ. ಇದು ಮಾದರಿ ಶಾಸಕರಾದ ಡಾ” ಎನ್.ಟಿ.ಶ್ರೀನಿವಾಸ್ ರವರ, ಮಾನವೀಯ ಮೌಲ್ಯಗಳನ್ನೊಳಗೊಂಡ ನಡೆಗೆ ಸಾಕ್ಷಿಯಾಗಿದೆ. ಅವರ ಈ ಹಿರಿಮೆಗೆ ಕೂಡ್ಲಿಗಿ ಪಟ್ಟಣದ ನಾಗರಿಕರು ಮಾತ್ರವಲ್ಲ, ಕ್ಷೇತ್ರದ ಸಮಸ್ತ ಜನತೆ ಶಾಸಕರನ್ನು ಅಭಿನಂದಿಸಿದ್ದಾರೆ. ಮಾತ್ರವಲ್ಲ ನೆರೆ ಹೊರೆಯ ತಾಲೂಕುಗಳ ಗಣ್ಯರಿಂದ ಸಾರ್ವಜನಿಕರಿಂದ, ಶಾಸಕರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನಿ. ಕೂಡ್ಲಿಗಿ