ಪಾರದರ್ಶಕ ಮತ್ತು ನ್ಯಾಯ ಸಮ್ಮತ ಮತದಾನ ಜರುಗಿಸಲು – ಜಿಲ್ಲಾಧಿಕಾರಿ ಟಿ ಬೂಬಾಲನ ಸೂಚನೆ.

ವಿಜಯಪುರ ಮೇ.06

ಜಿಲ್ಲೆಯ ಯಾವುದೇ ಮತಗಟ್ಟೆಯಲ್ಲಿ ಕೂಡ ಪಿ.ಆರ್‌.ಒ ಹೊರತು ಪಡಿಸಿ ಯಾವುದೇ ಅಧಿಕಾರಿಯಾಗಲಿ, ಸಿಬ್ಬಂದಿ ಮತ್ತು ಮತದಾರರಿಗೆ ಮೊಬೈಲ್ ತೆಗೆದು ಕೊಂಡು ಒಯ್ಯಲು ಅವಕಾಶವಿರುವುದಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರವಿವಾರ ಸಂಜೆ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳೊಂದಿಗೆ ಮತದಾನ ಸಿದ್ದತೆ ಕುರಿತು ವಿಡಿಯೋ ಸಂವಾದ ಸಭೆ ನಡೆಸಿ ಮಾತನಾಡಿದ ಅವರು, ಮತಗಟ್ಟೆಯಲ್ಲಿ ಪಿ.ಆರ್‌.ಒ ಮಾತ್ರ ಮೊಬೈಲ್ ಒಯ್ಯತಕ್ಕದ್ದು ಮತ್ತು ಅದನ್ನು ಕೂಡಾ ಸೈಲೆಂಟ್ ಮೂಡನಲ್ಲಿ ಇರಿಸಬೇಕು ಎಂದರು.ಮೇ.7 ರಂದು ಮುಕ್ತ, ನಿಷ್ಪಕ್ಷಪಾತ, ಪಾರದರ್ಶಕ ಮತ್ತು ನ್ಯಾಯಸಮ್ಮತ ಮತದಾನ ಜರುಗಿಸಲು , ಚುಣಾವಣೆ ಕರ್ತವ್ಯಕೆ ನೇಮಕಗೊಂಡಿರುವ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಆಯೋಗ ಸೂಚಿಸಿರುವ ನಿಮಯಗಳನ್ನು ಪಾಲಿಸಿ ಕರ್ತವ್ಯ ಪ್ರಜ್ಞೆ ಮೆರೆದು ಚುನಾವಣೆ ಪ್ರಕ್ರಿಯೆ ಯಶಸ್ವಿ ಗೊಳಿಸಬೇಕು ಎಂದು ಹೇಳಿದರು.ಲೋಕಸಭೆ ಚುನಾವಣೆಯನ್ನು ಯಶಸ್ವಿಯಾಗಿ ನಿಯಮಾನುಸಾರ ನಡೆಯಲು ಅವಶ್ಯವಿರುವ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ರಾಜಕೀಯ ಪಕ್ಷಗಳ ಮತ್ತು ಅಭ್ಯರ್ಥಿಗಳ ಬಹಿರಂಗ ಪ್ರಚಾರ ರವಿವಾರ ಸಂಜೆ ಮುಕ್ತಾಯಗೊಂಡಿರುತ್ತದೆ .ಮತಗಟ್ಟೆ ಕೇಂದ್ರದಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಲ್ಲಲು ನೆರಳು ವ್ಯವಸ್ಥೆ, ಹಿರಿಯ ನಾಗರಿಕರಿಗೆ ಆಯಾಸವಾಗದಂತೆ ಕುಳಿತುಕೊಳ್ಳಲು ಬೆಂಚ್ ಅಥವಾ ಕುರ್ಚಿಯ ವ್ಯವಸ್ಥೆ, ವಿಕಲಚೇತನರಿಗೆ ಅವಶ್ಯವಿದ್ದಲ್ಲಿ ವಿಲ್ ಚೇರ್ ವ್ಯವಸ್ಥೆ, ನೀರು, ಶೌಚಾಲಯ, ವಿದ್ಯುತ್ ಇತ್ಯಾದಿ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದರು.ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಮತದಾನ ದಿನದಂದು, ರಾಜಕೀಯ ಪಕ್ಷದ ಚಿಹ್ನೆ ಮತ್ತು ಅಭ್ಯರ್ಥಿಯ ಭಾವಚಿತ್ರ, ಸ್ಲೋಗನ್ ಒಳಗೊಂಡಿರುವ ವೊಟರ್ ಸ್ಲೀಪ್‌ಗಳನ್ನು ಮತದಾರರಿಗೆ ವಿತರಿಸುವದನ್ನು ಹಾಗೂ ಬಳಸುವದನ್ನು ನಿಷೇಧಿಸಲಾಗಿದೆ. ಮತ್ತು ಮತಗಟ್ಟೆಯೊಳಗೆ ಪ್ರವೇಶ ಮಾಡುವಾಗ ಮತದಾರರು ಹಾಗೂ ಇತರರು, ರಾಜಕಿಯ ಪಕ್ಷ ಅಥವಾ ಅಭ್ಯರ್ಥಿಯ ಭಾವಚಿತ್ರ, ಚಿಹ್ನೆ ಮತ್ತು ಸ್ಲೋಗನ್ ಹೊಂದಿರುವ ಕ್ಯಾಪ್, ಟವಲ್, ಸ್ಕಾರ್ಪ್, ಟೀ ಶರ್ಟ್ ಸೇರಿದಂತೆ ಇಂತಹ ಬಟ್ಟೆಗಳನ್ನು ಧರಿಸಿ, ಮತಗಟ್ಟೆಂಗೆ ಬರುವುದ ನಿರ್ಭಂದಿಸಲಾಗಿದ್ದು, ಇದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಮಾತನಾಡಿ, ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ವೇಳೆಯಲ್ಲಿ ಕಡ್ಡಾಯವಾಗಿ ಪೊಲೀಸ್ ಅಧಿಕಾರಿಗಳು ಪ್ರಥಮ ಆದ್ಯತೆಯ ಮೇಲೆ ಸೂಕ್ತ ಭದ್ರತೆ ಕೊಟ್ಟು ಯಾವುದೇ ಗೊಂದಲ ಹಾಗೂ ಅವ್ಯವಸ್ಥೆಗೆ ಆಸ್ಪದ ಕೊಡದಂತೆ ಮುನ್ನೆಚ್ಚರಿಕೆಯಾಗಿ ಕಾರ್ಯ ನಿರ್ವಹಿಸಬೇಕು ಬೇಕು ಎಂದು ಹೇಳಿದರು. ಮತಗಟ್ಟೆಯಲ್ಲಿ ಹಾಗೂ ಮತಗಟ್ಟೆ ವ್ಯಾಪ್ತಿಯಲ್ಲಿ ಪ್ರಚಾರ ನಿಷೇಧ, ಯಾವುದೇ ವ್ಯಕ್ತಿ, ಯಾವುದೇ ಮತಗಟ್ಟೆಯಲ್ಲಿ ಮತದಾನ ದಿನದಂದು ಮತದಾನ ಕೇಂದ್ರದ ಒಳಗೆ ಅಥವಾ 200 ಮೀಟರ್ ವ್ಯಾಪ್ತಿಯಲ್ಲಿ ಮತಗಳ ಪ್ರಚಾರ ಅಥವಾ ಯಾವುದೇ ಮತದಾರರ ಮತವನ್ನು ಕೇಳುವುದು ಅಥವಾ ಯಾವುದೇ ನಿರ್ದಿಷ್ಟ ಅಭ್ಯರ್ಥಿಗೆ ಮತ ಹಾಕಲು ಅಥವಾ ಹಾಕದಂತೆ ಮತದಾರರನ್ನು ಮನವೊಲಿಸುವುದು, ಚುನಾವಣೆಗೆ ಸಂಬಕಧಿಸಿದಂತೆ ಯಾವುದೇ ಸೂಚನೆ ಅಥವಾ ಚಿಹ್ನೆಯನ್ನು ಪ್ರದರ್ಶಿಸುವುದು ನಿರ್ಭಂದವಿರುತ್ತದೆ ಎಂದರು.ಸಾರ್ವಜನಿಕರು ಯಾವುದೇ ವದಂತಿಗಳಿಗೆ ಗೊಂದಲಕ್ಕೆ ಒಳಗಾಗದಂತೆ ಪೊಲೀಸ್ ಇಲಾಖೆ ಹಾಗೂ ಅಧಿಕಾರಿಗಳು ಮುನ್ನೆಚರಿಕೆಯಿಂದ ಕ್ರಮವಹಿಸಬೇಕು. ಮತಗಟ್ಟೆಯಲ್ಲಿ ದಾಂದಲೆ, ಅಪರಾಧ ಚಟುವಟಿಕೆ ನಡೆಯದಂತೆ ಕಟ್ಟುನಿಟ್ಟಾಗಿ ಕಾರ್ಯ ನಿರ್ವಹಿಸಬೇಕು ಎಂದರು.ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ.ಬಿ.ಹರಿಜನ.ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button