ಸಾರ್ವಜನಿಕರಿಗೆ ಪ್ರಾಮಾಣಿಕವಾಗಿ ತುರ್ತು ಸೇವೆಗೆ ಸದಾ ಸಿದ್ಧರಿದ್ದೇವೆ — ಆರ್ ತಿಪ್ಪೇಸ್ವಾಮಿ
ತರೀಕೆರೆ ಜುಲೈ.6

ಸಾರ್ವಜನಿಕರು ಬಾಧಿತರು ವಿಪತ್ತು ಸಮಯದಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ಕೆರೆ, ಬಾವಿ, ನದಿಗಳಲ್ಲಿ ಪ್ರಾಣಿಗಳು, ಮನುಷ್ಯರು ಸಂಕಷ್ಟದಲ್ಲಿ ಸಿಲುಕಿದಾಗ ತುರ್ತಾಗಿ ಘಟನೆ ಸಂಭವಿಸಿದ ತಕ್ಷಣ ಕರೆ ಮಾಡಿದರೆ ಜೀವ ಹಾನಿ ತಪ್ಪಿಸಲು ಸಾಧ್ಯ ಎಂದು ತರಿಕೆರೆ ಅಗ್ನಿಶಾಮಕ ಠಾಣೆಗೆ ನೂತನ ಅಧಿಕಾರಿಯಾಗಿ ಆರ್ ತಿಪ್ಪೇಸ್ವಾಮಿ ರವರು ಅಧಿಕಾರ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಳೆದ ಮೂರು ವರ್ಷ ಆರು ತಿಂಗಳು ಕಾಲ ಕೊಪ್ಪದಲ್ಲಿ ಸೇವೆ ಸಲ್ಲಿಸಿ ಈಗ ತರೀಕೆರೆ ಠಾಣೆಗೆ ವರ್ಗಾವಣೆಯಾಗಿ ಬಂದಿದ್ದೇನೆ. ವಿಪತ್ತು,ತುರ್ತು ಸಂದರ್ಭದಲ್ಲಿ ಜೀವಾ ಹಾನಿ ಮತ್ತು ಆಸ್ತಿ ನಷ್ಟವಾಗುವುದನ್ನು ತಪ್ಪಿಸಲು ನಾವು ನಮ್ಮ ಸಿಬ್ಬಂದಿಗಳು ಸಾರ್ವಜನಿಕರಿಗೆ ಪ್ರಾಮಾಣಿಕವಾಗಿ ತುರ್ತು ಸೇವೆಗೆ ಸದಾ ಸಿದ್ದರಿದ್ದೇವೆ ಎಂದು ಹೇಳಿದರು. ಆರ್ ತಿಪ್ಪೇಸ್ವಾಮಿ ರವರನ್ನು ಠಾಣೆಗೆ ಬರಮಾಡಿಕೊಂಡ ಸಿಬ್ಬಂದಿಗಳೊಂದಿಗೆ ಮಾತನಾಡುತ್ತಾ ನೀವೆಲ್ಲರೂ ಪ್ರೀತಿಯಿಂದ ನನ್ನನ್ನು ಬರ ಮಾಡಿಕೊಂಡಿದ್ದೀರಿ. ನಿಮ್ಮೆಲ್ಲರ ಸಹಕಾರ ಸಮಯಪ್ರಜ್ಞೆ ಪ್ರಾಮಾಣಿಕ ಸೇವೆ ಅಗತ್ಯವಾಗಿದೆ. ತರೀಕೆರೆಯಲ್ಲಿ ಹೊಸ ಜನರ ಜೊತೆ ಹೊಸ ಜೀವನ ಪ್ರಾರಂಭಿಸುತ್ತಿದ್ದೇನೆ ಎಂದು ಹೇಳಿದರು. ಇಲಾಖೆಯ ಚಾಲಕ ತಂತ್ರಜ್ಞ ಮಾಜಿ ಸೈನಿಕ ಶಬ್ಬೀರ್ ಹೂ ಗುಚ್ಚ ನೀಡಿ ಶುಭಕೋರಿದರು. ಮತ್ತು ಸಹಾಯಕ ಠಾಣಾಧಿಕಾರಿ ಮಹೇಶ್ವರಪ್ಪ, ದಕ್ಷಿಣ ಮೂರ್ತಿ, ಹಾಗೂ ಸಿಬ್ಬಂದಿಗಳು ಮಾಲಾರ್ಪಣೆ ಮಾಡಿ ಹಾಜರಿದ್ದು ಶುಭಕೋರಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ