ನಿನ್ನಿಂದಲೇ.

ನಿನ್ನಿಂದಲೇ ವಿಶಾಲ ಜಗವ ನೋಡಿದೆನು
ನಿನ್ನ ಮಮತೆಯಿಂದ ಪ್ರೀತಿಲೆ ಬೆಳೆದೇನು
ನಿನಗಾಗಿ ನಾನು ಏನು ಮಾಡಲಾರೆನು
ತಾಯಿ ನನಗಾಗಿ ತ್ಯಾಗಿಯಾದೆ ಕೈಮುಗಿವೆನು..
ನಿನ್ನ ಮಡಿಲೇ ನನಗೆ ಸ್ವರ್ಗವಾಯಿತು
ನಿನ್ನ ಹೆಗಲು ನನಗೆ ಆಕಾಶವಾಯಿತು
ನಿನ್ನ ಮಾತು ವೇದ ವಾಕ್ಯವಾಯಿತು
ನಿನ್ನ ಹೆಸರು ನನಗೆ ಉಸಿರಾಯಿತು..
ಅಜ್ಞಾನದಲಿ ಜ್ಞಾನವ ಕಂಡೆ ನಿನ್ನಿಂದಲೇ
ಸುಳ್ಳಿನಲಿ ಸತ್ಯವ ಹುಡುಕಿದೆ ನಿನ್ನಿಂದಲೇ
ಅನ್ಯಾಯದಿಂದಿರದೆ ನ್ಯಾಯದಿ ಬದುಕಿದೆ ನಿನ್ನಿಂದಲೇ
ಮತ್ತೊಬ್ಬರಿಗೆ ಸ್ಪೂರ್ತಿಯಾಗಿ ಬದುಕುವೆ ನಿನ್ನಿಂದಲೇ..
ಗುಡಿ ಇರದ ದೇವರು ನನ್ನವ್ವ
ಸ್ವಾರ್ಥವಿಲ್ಲದ ಬದುಕು ನಿನ್ನದು ಹೆತ್ತವ್ವ
ಕಣ್ಣಿಗೆ ಕಾಣುವ ದೇವರು ಹಡೆದವ್ವ
ಮತ್ತೆ ಮಗುವಾಗಿ ಹುಟ್ಟುವೆ ಜನ್ಮನೀಡವ್ವ..
ಮುತ್ತು.ಯ.ವಡ್ಡರ (ಶಿಕ್ಷಕರು )ಬಾಗಲಕೋಟ