ಮಳೆ ಬರಬೇಕಾಗಿದೆ…

ಮಳೆ ಬರಬೇಕಾಗಿದೆ ಇಂದು ಕೊಳಕು




ಮನಸ್ಸುಗಳನ್ನು ಸ್ವಚ್ಛಗೊಳಿಸಲು.
ಮಳೆ ಬರಬೇಕಾಗಿದೆ ಇಂದು ನ್ಯಾಯ ನೀತಿ
ಸತ್ಯದ ಸಸಿ ಚಿಗುರಲು.
ಮಳೆ ಬರಬೇಕಾಗಿದೆ ಇಂದು ಅಜ್ಞಾನ ಸುಳ್ಳನ್ನ
ತೋರಿಸುವ ಸಿಡಿಲಿನ ಬೆಳಕಾಗಿ.
ಮಳೆ ಬರಬೇಕಾಗಿದೆ ಇಂದು ಮಕ್ಕಳಲ್ಲಿ
ಒಳ್ಳೆಯ ಹವ್ಯಾಸಗಳ ಹೂ ಚಿಗುರಿಸಲು.
ಮಳೆ ಬರಬೇಕಾಗಿದೆ ಇಂದು ಸ್ವಾರ್ಥ
ಸನ್ನತಣದ ಮೋಡವ ಕರಗಿಸಲು.
ಮಳೆ ಬರಬೇಕಾಗಿದೆ ಇಂದು ಭ್ರಷ್ಟಾಚಾರದ
ಬೆಂಕಿಯ ನಂದಿಸಲು.
ಮಳೆ ಬರಬೇಕಾಗಿದೆ ಇಂದು ಜಗಳ
ಜಂಜಾಟದ ವ್ಯಕ್ತಿಯ ಕೋಪ ತಣ್ಣಗಾಗಿಸಲು.
ಮಳೆ ಬರಬೇಕಾಗಿದೆ ಇಂದು ನಾನು ಎಂಬುದ
ಮರೆತು ನಮ್ಮವರೆಂಬ ಸುಮಧುರ ಗಾಳಿ ಬೀಸಲು.
ಮಳೆ ಬರಬೇಕಾಗಿದೆ ಇಂದು ರೈತನು ಉತ್ತಮ
ಬೆಳೆ ಬೆಳೆದು ಕೋಟಿಯಲ್ಲಿ ಮಾತನಾಡಲು.
ಮುತ್ತು.ಯ.ವಡ್ಡರ (ಶಿಕ್ಷಕರು)ಬಾಗಲಕೋಟ