ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ.
ಹಾವರಗಿ ಜೂನ್.20

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಾವರಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಳ್ಳ ಹೊಳೆತ್ತುವ ಕಾಮಗಾರಿ ನಡೆಯುತ್ತಿದ್ದು, ನರೇಗಾ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣಾ ಶಿಬಿರ ಹಾಗೂ ಜಲ ಸಂಜೀವಿನಿ ಅಭಿಯಾನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಸಿಗೆ ನೀರು ಎರೆಯುವುದರ ಮೂಲಕ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಕೆಎಚ್ ಪಿಟಿ ಸಿಬ್ಬಂದಿ, ಬಿಎಫ್ ಟಿ ಅವರು ನರೇಗಾ ಕೂಲಿ ಕಾರ್ಮಿಕರಿಗೆ ಆರೋಗ್ಯದ ಬಗ್ಗೆ ವಹಿಸಬೇಕಾದ ಮುಂಜಾಗ್ರತೆ ಜೊತೆಗೆ ಆರೋಗ್ಯ ತಪಾಸಣಾ ಶಿಬಿರದ ಮಹತ್ವದ ಕುರಿತು ಮಾಹಿತಿ ನೀಡಿದರು. ಬಳಿಕ ಕೂಲಿ ಕಾರ್ಮಿಕರಿಗೆ ಬಿಪಿ, ಶುಗರ್, ಟಿ.ಬಿ ಸೇರಿದಂತೆ ಹಲವು ಪರೀಕ್ಷೆಗಳನ್ನು ಮಾಡಲಾಯಿತು.ಈ ಸಂದರ್ಭದಲ್ಲಿ ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ಡಾ. ವಿಜಯಕುಮಾರ್, ಎಲ್ ಎಚ್ ವಿ ಎಸ್. ಎಂ ಕಂದಗಲ್ಲ, ಲ್ಯಾಬ್ ಟೆಕ್ನಿಶಿಯನ್ ಐ. ಡಿ ಮೈತ್ರಿ, ಪಿಎಚ್ ಐವಿ, ಅಸ್ಲಂ ಅಬಾಲೆ, ತಾಂತ್ರಿಕ ಸಹಾಯಕಿ ಶಮ್ಮಾ ಯಂಡಿಗೇರಿ, ಬಿಎಫ್ ಟಿ ಗೀತಾ ಬುರ್ಲಿ, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗ, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ, ಕೆಎಚ್ ಪಿಟಿ ಸಿಬ್ಬಂದಿ ಶಿಲ್ಪಾ ಭಾವಿಕಟ್ಟಿ , ಅನ್ನಪೂರ್ಣ ಖಾತೇದಾರ್, ಗೀತಾ, ಆಶಾ ಕಾರ್ಯಕರ್ತೆಯರು, ಕಾಯಕ ಬಂಧುಗಳು ಉಪಸ್ಥಿತರಿದ್ದರು.