ಕನ್ನಡ ಕೌಸ್ತುಭದ ಕನ್ನಡ ಕಲರವದಲಿ – ಮಿಂದೆದ್ದ ಕನ್ನಡಾಭಿಮಾನಿಗಳು.

ಚಳ್ಳಕೆರೆ ನ.02

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಗರದ ಹೆಚ್ ಎಂ ಎಸ್ ಲೇಔಟ್ ನ ಕನ್ನಡ ಕೌಸ್ತುಭ ಪ್ರಕಾಶನದ ವತಿಯಿಂದ ‘ಕನ್ನಡ ಕಲರವ’ ಕಾರ್ಯಕ್ರಮ ತುಂಬಾ ಅರ್ಥ ಪೂರ್ಣವಾಗಿ ನೆರೆವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಬಿ.ತಿಪ್ಪಣ್ಣ ಮರಿಕುಂಟೆ ಅವರು ವಹಿಸಿಕೊಂಡು” ಕನ್ನಡ ಭಾಷೆ ಅತ್ಯಂತ ಸುಂದರ ಭಾಷೆಯಾಗಿದ್ದು, ದಕ್ಷಿಣ ಭಾರತದ ಪ್ರಮುಖ ಭಾಷೆಗಳಲ್ಲಿ ಕನ್ನಡದ ಅಂಕಿಗಳು ಇರುವ ಏಕೈಕ ಭಾಷೆ ನಮ್ಮ ಕನ್ನಡ ಭಾಷೆಯೆಂಬುದು ನಾವೆಲ್ಲರೂ ಹೆಮ್ಮೆ ಪಡುವ ವಿಚಾರವಾಗಿದೆ. ನಾವು ನೀವೆಲ್ಲರೂ ಕನ್ನಡವನ್ನ ಬದುಕಾಗಿಸಿಕೊಂಡು ಕನ್ನಡವನ್ನ ಜೀವಿಸಬೇಕು. ಸಾಹಿತ್ಯವನ್ನು ನಮ್ಮ ಪ್ರವೃತ್ತಿ ಆಗಿಸಿಕೊಂಡು ನಮ್ಮ ವೈಯಕ್ತಿಕ ಬದುಕಿಗೆ ಧಕ್ಕೆಯಾಗದಂತೆ ಎಚ್ಚರಿಕೆಯ ಹೆಜ್ಜೆ ಇಡಬೇಕು” ಎಂದು ತಿಳಿಸಿದರು.

ಪ್ರಾಸ್ತಾವಿಕ ನುಡಿಗಳನ್ನು ಲೇಖಕಿ ಡಿ.ಶಬ್ರಿನಾ ಮಹಮದ್ ಅಲಿ ಆಡುತ್ತಾ,” ನಮ್ಮ ನೆಲದ ಭಾಷೆಯಾದ ಕನ್ನಡವನ್ನು ಗೌರವಿಸುವುದು, ಪ್ರೀತಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ” ಎಂದರು. ಕವಿಗೋಷ್ಠಿಯ ಆಶಯ ನುಡಿಗಳನ್ನಾಡಿದ ಮೋದೂರು ತೇಜ ಅವರು ” ನಮ್ಮ ಕನ್ನಡ ನಾಡು ಬಹುತ್ವದಿಂದ ಕೂಡಿದೆ. ಇಲ್ಲಿ ನಾವೆಲ್ಲರೂ ಒಂದಾಗಿ ಸಹ ಬಾಳ್ವೆಯಿಂದ ಬದುಕಬೇಕು. ನಾವು ರಚಿಸುವ ಸಾಹಿತ್ಯ ಕೂಡ ಅದರ ತಳಹದಿಯಲ್ಲೆ ಇರಬೇಕು. ಅರ್ಥವಿಲ್ಲದ ನೂರು ಸಾಲುಗಳನ್ನು ಗೀಚುವುದಕ್ಕಿಂತ ಅರ್ಥ ನೀಡುವ ಒಂದು ಒಳ್ಳೆಯ ರೂಪಕವನ್ನು ರಚಿಸುವ ಕಡೆ ನಾವು ಒತ್ತು ಕೊಡಬೇಕು” ಎಂದರು.

ಮುಖ್ಯ ಅತಿಥಿಗಳಾದ ರಾಜುಕವಿ ಸೂಲೇನಹಳ್ಳಿಯವರು “ಕನ್ನಡ ನಾಡು ನುಡಿಗಾಗಿ ನಮ್ಮಿಂದಾದ ಸೇವೆ ಮಾಡಬೇಕು. ೨.೫೦೦ ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆಯನ್ನು ಬಳಸುವ ಮೂಲಕ ಉಳಿಸಿಕೊಂಡು ಹೋಗಬೇಕು ಎಂದು ತಿಳಿಸಿದರು. ಮತ್ತೋರ್ವ ಮುಖ್ಯ ಅತಿಥಿಗಳಾದ ಮನುಶ್ರೀ ಸಿದ್ದಾಪುರ ಅವರು ಮಾತನಾಡಿ” ಕವಿಗಳಾದ ನಾವು ನಮ್ಮ ನಮ್ಮ ಕವಿತೆಗಳಿಂದ ಗುರುತಿಸಿ ಕೊಳ್ಳಬೇಕು, ಅದು ನಮ್ಮ ಕಾವ್ಯ ಕಟ್ಟುವಿಕೆಗೆ ಬಲ ನೀಡುತ್ತದೆ” ಎಂದು ತಿಳಿಸಿದರು.

ಕಾರ್ಯಕ್ರಮದಲಿ ತಿಪ್ಪೇರುದ್ರಪ್ಪ ಟಿ.ಚಳ್ಳಕೆರೆ, ಪಾಲಯ್ಯ ಜಿ ಕೋನಸಾಗರ, ನಾಗರಾಜ ಬೆಳಗಟ್ಟ, ಕೂಡ್ಲಹಳ್ಳಿ ಜಗದೀಶ್ ಹಿರಿಯೂರು, ಜಯಮಾರುತಿ ಟಿ.ಹೆಚ್, ಚಳ್ಳಕೆರೆ, ಹಾಲೇಶ್ ಕೆ.ಜಿ,ಚಳ್ಳಕೆರೆ, ಹರ್ಷವರ್ಧನ, ಎಂ.ಟಿ.ಚಿಕ್ಕಗೊಂಡನಹಳ್ಳಿ, ಬಸವರಾಜ್ ಜಿ.ಶಿರೇಕೊಳ, ವಿಜಯಲಕ್ಷ್ಮಿ. ಜಿ,ಚಳ್ಳಕೆರೆ, ಜಯಪ್ರಕಾಶ್. ಹೆಚ್,ಚಿತ್ರದುರ್ಗ, ಚನ್ನಕೇಶವ. ಎ,ಚಳ್ಳಕೆರೆ, ಯತೀಶ ಎಂ.ಸಿದ್ದಾಪುರ, ಪ್ರಕಾಶ್ ಮದಕರಿ, ಚಳ್ಳಕೆರೆವಿಜಯಗುರು, ಚಳ್ಳಕೆರೆ, ಕ್ಲಾಸಿಕ್ ಚಂದ್ರಶೇಖರ್ಅರುಣ್ ಕುಮಾರ್, ಚಳ್ಳಕೆರೆ, ಪ್ರಜ್ವಲ ತೆಲಗಿ, ಚಳ್ಳಕೆರೆಕೆಂಚರಾಜ್.ಡಿ, ಚಳ್ಳಕೆರೆ, ಯೋಗೇಶ್ವರಿ, ಚಳ್ಳಕೆರೆ, ಬಿ‌.ಶಿವರಾಜ್ ನಾಯಕ, ಚಿಕ್ಕಉಳ್ಳಾರ್ತಿ, ಮಮತ.ಆರ್, ಚಿತ್ರದುರ್ಗ, ಟಿ.ಶಿವಮೂರ್ತಿ ಕೋಡಿಹಳ್ಳಿ, ಮಂಜುನಾಥ ಕೆ.ಎಂ, ಸೋಮಗುದ್ದು, ಸಬ್ರಿನ್ ತಾಜ್, ಚಳ್ಳಕೆರೆ, ಮೀನಾಕ್ಷಿ.ಪಿ, ಸೈಯದ್ ಮಹಬೂಬ್ ಮೊಳಕಾಲ್ಮುರು (ಮೊಸೈಮ), ಹರ್ಷಿತ ಎಂ, ಪಗಡಲಬಂಡೆ ನಾಗೇಂದ್ರಪ್ಪ, ಶಿವಲೀಲಾ, ಬಸವರಾಜು, ರಂಗಸ್ವಾಮಿ, ಕವಿತಾ ಕುಶ, ಅಮರೇಶಪ್ಪ, ವಿಹಾನ್ ಅಲಿ, ತೇಜ್ಮಿನ್, ಪ್ರಭಾಸ್, ಜೀವನ್, ಸಮ್ಮು ಇವರೆಲ್ಲಾ ಭಾಗವಹಿಸಿ ಕನ್ನಡ ಕಲರವ ಕಾರ್ಯಕ್ರಮ ಯಶಸ್ವಿ ಗೊಳಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಮಹಮದ್ ಅಲಿಯವರು ಸ್ವಾಗತವನ್ನು ಇನಗಷಾ.ಎ ಎಸ್ ವಂದನಾರ್ಪಣೆಯನ್ನು ಶಿಫಾ.ಎಂ ಎಸ್ ಮಾಡಿದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button