ಸರ್ಕಾರಿ ಆಸ್ಪತ್ರೆಯಲ್ಲಿ 24*7 ಚಿಕಿತ್ಸೆ ಲಭ್ಯ ಡಾll ದೇವರಾಜ್

ಪ್ರತಿನಿತ್ಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ 24*7 ಅಂದರೆ ರಾತ್ರಿ ಆಗಲು ಎಲ್ಲಾ ಸಮಯದಲ್ಲಿಯು ಸಹ ವೈದ್ಯರು ಲಭ್ಯವಿದ್ದು ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ಹಾರೈಕೆಗೆ ಸಿದ್ದರಿದ್ದೇವೆ ಎಂದು ವೈದ್ಯಧಿಕಾರಿಯಾದ ಡಾಕ್ಟರ್ ದೇವರಾಜ್ ರವರು ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಸರ್ಕಾರಿ ಆಸ್ಪತ್ರೆಯಲ್ಲಿರುವ ವೈದ್ಯರೆಲ್ಲರೂ ಸಹ ಬೆಳಗ್ಗೆ ಒಂಬತ್ತು ಗಂಟೆಗೆ ಕರ್ತವ್ಯಕ್ಕೆ ಹಾಜರಾಗಿ, ಹೊರರೋಗಿ ವಿಭಾಗದಲ್ಲಿ ಲಭ್ಯವಿರುತ್ತಾರೆ. ಹಾಗೂ ಬೆಳಗ್ಗೆ 9 ಗಂಟೆಯಿಂದ ಸಂಜೆ 4:30 ಗಂಟೆಯವರೆಗೂ ಸಹ ಔಷಧಿ ಮಾತ್ರೆಗಳ ವಿತರಕರು ಲಭ್ಯವಿರುತ್ತಾರೆ.

ಪ್ರತಿದಿನ ಮಧ್ಯಾಹ್ನ ಬಿಡುವಿನ ಸಮಯದಲ್ಲಿ ಬಾಗಿಲು ಹಾಕಿ ಊಟಕ್ಕೆ ಹೋಗುತ್ತಿದ್ದರು. ತಾಯಿ ಹೃದಯದಿಂದ ಸ್ಪಂದಿಸಿ ಕೆಲಸ ಮಾಡುತ್ತಿದ್ದ ಸೀನಿಯರ್ ಫಾರ್ಮಸಿಸ್ಟ್ ವಿನೋದ ಹಾಗೂ ಉಮಾ ರವರು ಮಧ್ಯಾಹ್ನದ ಊಟದ ವಿರಾಮ ಸಮಯದಲ್ಲೂ ಸಹ ರೋಗಿಗಳಿಗೆ ಔಷಧಿ ಮಾತ್ರೆಗಳನ್ನು ನೀಡಲಾಗುತ್ತದೆ. ಸಾರ್ವಜನಿಕರು ರೋಗಿಗಳು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು.

ಹಾಗೂ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ತಜ್ಞ ವೈದ್ಯರು ಲಭ್ಯವಿರುತ್ತಾರೆ. ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ಸ್ಕ್ಯಾನಿಂಗ್ ಗೆ ಹೋಗುವ ಅವಶ್ಯಕತೆ ಇರುವುದಿಲ್ಲ, ವೈದ್ಯರಲ್ಲಿ ಅಪಾರವಾದ ಜ್ಞಾನ ಮತ್ತು ಮಾನವೀಯ ಮೌಲ್ಯಗಳು ತುಂಬಾ ಜಾಸ್ತಿ ಇರುವುದರಿಂದ ಕಾಳಜಿ ವಹಿಸಿ ಕೆಲಸ ಮಾಡುತ್ತಿದ್ದಾರೆ.

ವೈದ್ಯರು ತಡವಾಗಿ ಬಂದು ಯಾವುದೇ ರೋಗಿಗಳಿಗೆ ತೊಂದರೆಯಾಗದಂತೆ ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ತಾಲೂಕು ಆರೋಗ್ಯ ಅಧಿಕಾರಿಯದ ಡಾ. ಪ್ರಸನ್ನ ಕುಮಾರ್ ಸಣ್ಣಕ್ಕಿ, ಹಾಲಿ ತಾಲೂಕು ಆರೋಗ್ಯ ಅಧಿಕಾರಿಯದ ಡಾ. ಚಂದ್ರಶೇಖರ್ ರವರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button