ಬದುಕಿನ ಪಯಣ ಒಂದರಿಂದ ಹತ್ತು…

“ನಾ” ಎಂಬ ಒಂದು ಅಕ್ಷರದ ನಾವು.
“ಅಮ್ಮ” ಎಂಬ ಎರಡು ಅಕ್ಷರದಿಂದ.
“ಜನನ” ಎಂಬ ಮೂರು ಅಕ್ಷರದ ಮೂಲಕ ಭೂಮಿಗೆ ಬಂದು.
“ಭರವಸೆ” ಎಂಬ ನಾಲ್ಕು ಅಕ್ಷರದ ತಂದೆಯ ಕೈ ಹಿಡಿದು.
“ಬೆಳವಣಿಗೆ” ಎಂಬ ಐದು ಅಕ್ಷರದ ಮೂಲಕ ದೊಡ್ಡವರಾಗಿ.
“ಗುರು-ಗುರುಮಾತೆ” ಎಂಬ ಆರು ಅಕ್ಷರದ ಇಬ್ಬರಿಂದ ಅಕ್ಷರದ ಜ್ಞಾನವ ಕಲಿತು.
“ಸರಕಾರಿ ನೌಕರ” ಎಂಬ ಏಳು ಅಕ್ಷರದ ಜವಾಬ್ದಾರಿಯುತ ಹುದ್ದೆಗೆ ಏರಿ.
“ಆದರ್ಶಮಯ ವ್ಯಕ್ತಿತ್ವ” ಎಂಬ ಎಂಟು ಅಕ್ಷರದ ನಮ್ಮ ಸಾಧನೆ ಮತ್ತೊಬ್ಬರಿಗೆ ಮಾದರಿಯಾಗಿ.
“ಬದುಕಿನ ಜಟಕಾಬಂಡಿ” ಎಂಬ ಒಂಬತ್ತು ಅಕ್ಷರದ ಜೀವನದ ಜಂಜಾಟಗಳ ಜೊತೆಗೆ.
“ಒಲವೇ ಜೀವನ ಸಾಕ್ಷಾತ್ಕಾರ” ಎಂಬ ಹತ್ತು ಅಕ್ಷರದ ನಮ್ಮ ಬದುಕಿನ ಪಯಣದ ಹಾದಿಯನ್ನು ಮುಗಿಸೋಣ.
ರಚನೆ: ಶ್ರೀ ಮುತ್ತು.ಯ.ವಡ್ಡರ ಸಾ॥ ಹಿರೇಮಾಗಿ ಜಿಲ್ಲೆ॥ ಬಾಗಲಕೋಟmob :9845568484