ಕಾಂಗ್ರೇಸ್ ಪಕ್ಷದಿಂದ ಮೌನ ಪ್ರತಿಭಟನೆ ಸತ್ಯಾಗ್ರಹ
ತರೀಕೆರೆ ಜುಲೈ.13
ಕೇಂದ್ರದ ಬಿಜೆಪಿ ಸರ್ಕಾರವು ಕಾಂಗ್ರೇಸ್ ಪಕ್ಷದ ರಾಷ್ಟ್ರೀಯ ನಾಯಕರದ ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವ ಅನರ್ಹಗೊಳಿಸಲು ಮಾಡಿರುವ ಹುನ್ನಾರವನ್ನು ಖಂಡಿಸಿ, ಭ್ರಷ್ಟ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಧಿಕ್ಕರಿಸಿ ಪಟ್ಟಣದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿ ಮೌನ ಪ್ರತಿಭಟನೆ ಮಾಡುವ ಮೂಲಕ ಮೌನ ಸತ್ಯಾಗ್ರಹವನ್ನು ಮಾಡಿದರು.
ಈ ಪ್ರತಿಭಟನೆಯಲ್ಲಿ ತರೀಕೆರೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಹೆಚ್ ಯು ಫಾರೂಕ್, ಪುರಸಭಾ ಅಧ್ಯಕ್ಷರಾದ ಕಮಲಾ ರಾಜೇಂದ್ರ, ನಗರ ಕಾಂಗ್ರೇಸ್ ಘಟಕದ ಅಧ್ಯಕ್ಷರಾದ ಪ್ರಕಾಶವರ್ಮ, ಪುರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ದಾದಾಪೀರ್ ಮಹಿಳಾ ಕಾಂಗ್ರೇಸ್ ಅಧ್ಯಕ್ಷರಾದ ಭಾಗ್ಯಲಕ್ಷ್ಮಿ ಕೃಷ್ಣ, ಮಾಜಿ ಪುರಸಭಾ ಅಧ್ಯಕ್ಷರುಗಳಾದ ಹೇಮಲತಾ, ಟಿಎಸ್ ಧರ್ಮರಾಜ್, ಎಂ ನಾಗರಾಜ್, ಪುರಸಭಾ ಸದಸ್ಯರಾದ ಅನಿಲ್ ಕುಮಾರ್, ಕಾಂಗ್ರೇಸ್ ಮುಖಂಡರಾದ ಟಿಜಿ ಮಂಜುನಾಥ್, ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಘಟಕ ಅಧ್ಯಕ್ಷರಾದ ಗೌರೀಶ್, ಪ್ರಚಾರ ಸಮಿತಿ ಅಧ್ಯಕ್ಷರಾದ ಪರಶುರಾಮ್, ತಾಲೂಕು ಆರ್ಯ ಈಡಿಗ ಸಮಾಜದ ಮುಖಂಡರು ಹಾಗೂ ಕಾಂಗ್ರೇಸ್ ಮುಖಂಡರಾದ ಟಿ ಟಿ ರಾಘವೇಂದ್ರ, ವಾಲ್ಮೀಕಿ ಸಮಾಜದ ಮುಖಂಡರಾದ ಗೋವಿಂದಪ್ಪ, ಮಾಜಿ ಪುರಸಭಾ ಸದಸ್ಯರಾದ ಆದಿಲ್ ಪಾಷ, ಮಿರ್ಜಾ ಇಸ್ಮಾಯಿಲ್, ಶಮಿವುಲ್ಲಾ ಷರೀಫ್, ಬೆಲೆನಹಳ್ಳಿ ಶರತ್ , ಪುರಸಭಾ ಸದಸ್ಯರುಗಳು ಹಾಗೂ ಕಾಂಗ್ರೇಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ