ದೇವರಿದ್ದಾನೆ ಒಮ್ಮೆ ಯೋಚಿಸಿರಿ…

ಹಸಿದವರಿಗೆ ನೀಡುವ ಅನ್ನದಲ್ಲಿ ದೇವರಿದ್ದಾನೆ
ನೊಂದವರಿಗೆ ನೆರವಾಗುವ ಮಾತಿನಲ್ಲಿ ದೇವರಿದ್ದಾನೆ
ಕಷ್ಟದಲ್ಲಿರುವವರಿಗೆ ಮಾಡುವ ಸಹಾಯದಲ್ಲಿ ದೇವರಿದ್ದಾನೆ
ಪ್ರಾಮಾಣಿಕತೆಯಿಂದ ಓದುವ ಪುಸ್ತಕದಲ್ಲಿ ದೇವರಿದ್ದಾನೆ
ರೈತನು ನಂಬಿರುವ ಕೃಷಿಯಲ್ಲಿ ದೇವರಿದ್ದಾನೆ
ಪ್ರತಿನಿತ್ಯ ಮಾಡುವ ಸತ್ಕಾರ್ಯದಲ್ಲಿ ದೇವರಿದ್ದಾನೆ
ಕಲ್ಮಶವಿಲ್ಲದ ಪುಣ್ಯಕಾರ್ಯದಲ್ಲಿ ದೇವರಿದ್ದಾನೆ
ಸಮಸ್ಯೆದಲ್ಲಿರುವವರಿಗೆ ಮಾಡುವ ದಾನದಲ್ಲಿ ದೇವರಿದ್ದಾನೆ
ಹಿರಿಯರ ಆಶೀರ್ವಾದದಲ್ಲಿ ದೇವರಿದ್ದಾನೆ
ಉತ್ತಮ ಆಚಾರ ವಿಚಾರದಲ್ಲಿ ದೇವರಿದ್ದಾನೆ
ದೇಶ ಕಾಯುವ ಸೈನಿಕನ ಗುಂಡಿಗೆಯಲ್ಲಿ ದೇವರಿದ್ದಾನೆ
ಗುರು ಕಲಿಸುವ ವಿದ್ಯೆಯಲ್ಲಿ ದೇವರಿದ್ದಾನೆ
ತಾಯಿಯ ಮಮತೆಯಲ್ಲಿ ದೇವರಿದ್ದಾನೆ
ತಂದೆಯ ಜವಾಬ್ದಾರಿಯಲ್ಲಿ ದೇವರಿದ್ದಾನೆ
ಬದುಕುವ ಆದರ್ಶದಲ್ಲಿ ದೇವರಿದ್ದಾನೆ
ನಡೆದುಕೊಳ್ಳುವ ನಯ -ವಿನಯತೆಯಲ್ಲಿ ದೇವರಿದ್ದಾನೆ
ಮಗುವಿನ ಮುಗ್ಧ ಮನಸ್ಸಿನಲ್ಲಿ ದೇವರಿದ್ದಾನೆ
ರಚನೆ: ಶ್ರೀ ಮುತ್ತು.ಯ.ವಡ್ಡರ
ಸಾ॥ ಹಿರೇಮಾಗಿ
ಜಿಲ್ಲೆ॥ ಬಾಗಲಕೋಟ
mob-9845568484