ದೇವರ ಹೆಸರಿನಲ್ಲಿ ಪ್ರಾಣಿ ಬಲಿ ಮಾಡುವುದು ಮೌಢ್ಯ ಭಕ್ತರು ಸಾತ್ವಿಕ ಪೂಜೆ ಸಲ್ಲಿಸಲು ಮನವಿ – ಶ್ರೀ ದಯಾನಂದ ಸ್ವಾಮೀಜಿ.
ಹೊಸಪೇಟೆ ಆ.11

ನಗರದಲ್ಲಿನ 32 ನೇ. ವಾರ್ಡಿನ ತಳವಾರ ಕೇರಿಯಲ್ಲಿ ಇದೇ ಆಗಸ್ಟ್ ತಿಂಗಳ ದಿನಾಂಕ: 12.08.2024 ರಿಂದ 13.08.2024 ರ ವರೆಗೆ ಎರೆಡು ದಿನಗಳ ಕಾಲ ನಡೆಯಲಿರುವ ಶ್ರೀ ರಾಂಪುರ ದುರ್ಗಾದೇವಿ ಜಾತ್ರೆ ನಡೆಯುತ್ತಿದ್ದು, ಪ್ರಯುಕ್ತ ದೇವಾಲಯದ ಆವರಣದಲ್ಲಿ ಕೋಣ, ಕುರಿ, ಕೋಳಿ ಬಲಿ ನಡೆಯುತ್ತಿದೆ ಎಂದು ಮಾಹಿತಿ ಇದ್ದು. ದೇವರ ಹೆಸರಿನಲ್ಲಿ ಪ್ರಾಣಿ ಬಲಿ ಮಾಡುವುದು ಮೌಢ್ಯ ಪ್ರೌವೃ ತ್ತಿಯಾಗಿದೆ ಎಂದರು.ಅವರು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು ಪ್ರಾಣಿ ಬಲಿಯ ಅನಾಗರೀಕವು ಅಂಧ ಶ್ರದ್ಧೆಯೂ. ಪರಿಸರ ಮಾಲಿನ್ಯಕಾರಕ ಆಗಿದ್ದು. ಇದು ಕಾನೂನು ಮತ್ತು ಧರ್ಮ ವಿರೋಧಿ ಆಗಿದೆ. ಆದ್ದರಿಂದ ಭಕ್ತಾದಿಗಳು ಪ್ರಾಣಿ ಬಲಿ ತ್ಯಜಿಸಿ ಅಹಿಂಸಾತ್ಮಕವಾಗಿ ಸಾತ್ವಿಕ ಪೂಜೆ ಸಲ್ಲಿಸಬೇಕು. ಎಂದು ಶ್ರೀ ದಯಾನಂದ ಸ್ವಾಮೀಜಿ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಪಶು ಪ್ರಾಣಿ ಬಲಿ ನಿರ್ಮೂಲನ ಮಹಾಸಂಘ, ಬಸವ ಧರ್ಮ ಜ್ಞಾನ ಪೀಠ ಭಕ್ತರಲ್ಲಿ ವಿನಂತಿಸಿದ್ದಾರೆ. ದೇವರಮೇಲೆ ಇರುವಂತಹ ಭಕ್ತಿ, ಉತ್ಸಾಹವನ್ನು ಯಾರೂ ಪ್ರಶ್ನೆ ಮಾಡುವುದಿಲ್ಲ, ನಾವು ಮಾಡುವ ಧಾರ್ಮಿಕ ಆಚರಣೆಗಳು, ಈ ದೇಶದ ಕಾನೂನಿಗೆ ಹೈ ಕೋರ್ಟ್ ಹಾಗೂ ಸುಪ್ರೀಮ್ ಕೋರ್ಟ್ ಆದೇಶಗಳ ವಿರುದ್ಧ ನಡೆಯಬಾರದು. ಕಾನೂನಿನ ಚೌಕಟ್ಟಿನಲ್ಲಿ ಎಲ್ಲಾ ಧಾರ್ಮಿಕ ಕಾರ್ಯಗಳನ್ನು ಮಾಡಲು ನಮ್ಮ ಸಂವಿಧಾನದಲ್ಲಿ ಹಕ್ಕಿದೆ ಎಂದು ಹೇಳ ಬಯಸುತ್ತೇನೆ.ದೇವರ ಹೆಸರಿನಲ್ಲಿ ಕಾಂಪೌಂಡ್ ಒಳ ಮತ್ತು ಹೊರಗೆ, ಹಾಗೂ ದೇವಾಲಯದ ಸುತ್ತ ಮುತ್ತಲಿನ ಪರಿಸರ, ಹಾಗೂ ರಸ್ತೆಯ ಇಕ್ಕೆಲಗಳಲ್ಲಿ, ಹೊರ ಹೊಲಯ ಹಾಗೂ ಸಾರ್ವಜನಿಕ ಧಾರ್ಮಿಕ ಸಮಾವೇಶಗಳಲ್ಲಿ ಕೋಣ, ಕುರಿ, ಆಡು ಯಾವುದೇ ಪ್ರಾಣಿ ಪಕ್ಷಿಗಳ ಬಲಿ ನಡೆಯದಂತೆ ಹಾಗೂ ದೇವಾಲಯದ ಮೇಲೆ ಪ್ರಾಣಿಗಳ ತೂರಾಟ, ಪ್ರಾಣಿ ಅಂಗಾಂಗಗಳ ನೈವೇದ್ಯ ಸಲ್ಲಿಕೆ/ಪ್ರದರ್ಶನ ಇತ್ಯಾದಿ ಕಾನೂನು ಬಾಹೀರ ಕೃತ್ಯಗಳು ಜರುಗದಂತೆ 1959ರ ಕರ್ನಾಟಕ ಪ್ರಾಣಿ ಬಲಿಗಳ ಪ್ರತಿಬಂಧಕ ಅಧಿನಿಯಮ ಹಾಗೂ 1963 ಮತ್ತು 1975ರ ನಿಯಮಗಳ ಪ್ರಕಾರ ಹಾಗೂ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆಧಿನಿಯಮ, 2020 ರ ನಿಯಮಗಳನ್ನು ಯಥಾವತ್ತಾಗಿ ಪಾಲಿಸಲು, ಮತ್ತು ರಾಜ್ಯ ಹೈಕೋರ್ಟ್ ಆದೇಶದಂತೆ ಕಟ್ಟುನಿಟ್ಟಿನ/ವ್ಯಾಪಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳ ಬೇಕೆಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಪಶು ಪ್ರಾಣಿ ಬಲಿ ನಿರ್ಮೂಲನ ಜಾಗೃತಿ ಮಹಾ ಸಂಘ, ಬಸವ ಧರ್ಮ ಜ್ಞಾನ ಪೀಠದ ಅಧ್ಯಕ್ಷರಾದ ಶ್ರೀ ದಯಾನಂದ ಸ್ವಾಮೀಜಿಯವರು ಹೇಳಿದರು. ದೇವಾಲಯಗಳು ವಧಾ ಲಯಗಳಾಗದೆ ದಿವ್ಯಾ ಲಯವಾಗಬೇಕು. ಜಾತ್ರಾ ಪರಿಸರಗಳ ಧಾರ್ಮಿಕ ಸ್ಥಾನಗಳು ಕಟುಕರ ಕೇರಿ ಗಳಾಗಬಾರದು. ಜೀವ ತೆಗೆಯುವ ಮೃತ್ಯು ಕೂಪ ವಾಗಬಾರದು. ಪ್ರಾಣಿ ಹಿಂಸೆ ಮತ್ತು ಮಧ್ಯ ಮಾದಕ ಪದಾರ್ಥಗಳಿಂದ ಮುಕ್ತ ವಾಗಿರಬೇಕು. ಅಹಿಂಸೆ, ಕರುಣೆ, ಪ್ರೇಮ, ಜೀವದಯೆ, ಮಾನವೀಯತೆ, ಆಧ್ಯಾತ್ಮಿಕತೆ ಮುಂತಾದ ದಿವ್ಯ ಮೌಲ್ಯಗಳನ್ನು ಸಾರುವ ಸುಸಂಸ್ಕಾರ ನೀಡುವ ದಿವ್ಯ ಧಾಮಗಳಾಗ ಬೇಕು. ಸದ್ಭಕ್ತಿ, ಸುಜ್ಞಾನ ಮತ್ತು ಸದಾಚಾರಗಳ ತ್ರಿವೇಣಿ ಸಂಗಮ ವಾಗಬೇಕು, ಈ ಹಿನ್ನೆಲೆಯಲ್ಲಿ ಭಕ್ತಾಧಿಗಳು, ಸಮಾಜ, ದೇವಾಲಯದ ಆಡಳಿತ ಮಂಡಳಿ ಹಾಗೂ ಸರ್ಕಾರ ಮತ್ತು ಸುದ್ದಿ ಮಾದ್ಯಮಗಳು ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿರುವ ಸ್ವಾಮೀಜಿಯವರು ಈ ಪ್ರಾಣಿ ಬಲಿ ತಡೆ ಕುರಿತು ಅಹಿಂಸಾ ಪ್ರಾಣಿದಯಾ ಸಂದೇಶ ಯಾತ್ರೆಯನ್ನು ಜಾತ್ರಾ ಪರಿಸರದಲ್ಲಿ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.ಈ ಕುರಿತು ಸರ್ಕಾರ, ವಿಜಯನಗರ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಲಿಖಿತ ಮನವಿಯನ್ನು ಸಲ್ಲಿಸಲಾಗಿದ್ದು ಮನವಿಗೆ ಸ್ಪಂದನೆಯನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಜಿಲ್ಲೆಯ ಲೋಕಪ್ಪನ ಹೊಲ ಗ್ರಾಮದಲ್ಲಿ ಪುರಾತನ ದಿಂದ ದೇವರ ಹೆಸರಿನಲ್ಲಿ ನಡೆಯುತ್ತಿದ್ದ ಕೋಣ ಹಾಗೂ ಇತರೆ ಪ್ರಾಣಿ ಬಲಿಯನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಅಲ್ಲಿನ ಜನರಿಗೆ ದೇವರ ಹೆಸರಿನಲ್ಲಿ ಪ್ರಾಣಿ ಬಲಿ ಮಾಡುವುದು ಮೌಡ್ಯ ಮತ್ತು ಕಾನೂನು ಬಾಹೀರ ಎಂದು ಜನ ಜಾಗೃತಿ ಮೂಡಿಸಿ ಪ್ರಾಣಿ ಬಲಿ ತಡೆದಿರುವುದು ಹೆಮ್ಮೆಯ ವಿಷಯ ಹಾಗಾಗಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಗೆ ಹಾಗೂ ಅಲ್ಲಿನ ಸಾರ್ವಜನಿಕರಿಗೆ ಭಕ್ತಾಧಿಗಳಿಗೆ ಶ್ರೀ ದಯಾನಂದ ಸ್ವಾಮೀಜಿಯವರು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಪಶು ಪ್ರಾಣಿ ಬಲಿ ನಿರ್ಮೂಲನ ಮಹಾ ಸಂಘ, ಹಾಗೂ ಬಸವ ಧರ್ಮ ಜ್ಞಾನ ಪೀಠ ದಿಂದ ಅಭಿನಂದನೆ ತಿಳಿಸುತ್ತಾ ಲೋಕಪ್ಪನ ಹೊಲ ಗ್ರಾಮ ಇಡೀ ಜಿಲ್ಲೆಗೆ ಮಾದರಿ ಯಾಗಬೇಕು ಎಂದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್ ಹೊಸಪೇಟೆ.