ಮೊಳಕಾಲ್ಮೂರು ಕ್ಷೇತ್ರದ ಸಾರ್ವಜನಿಕರಿಗೆ ಯೋಜನೆಗಳು ಮತ್ತು ಸರ್ಕಾರದಿಂದ ದೊರೆಯುವ ಮೂಲಭೂತ ಸೌಕರ್ಯಗಳು ತಂದೇ ತರುತ್ತೇನೆಂದ ಶಾಸಕರು.
ಮೊಳಕಾಲ್ಮೂರು ಜುಲೈ.15

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಎನ್. ವೈ. ಗೋಪಾಲಕೃಷ್ಣ ಶಾಸಕರು ಇಂದು ತಾಲೂಕ ಆಡಳಿತ ಸೌಧದಲ್ಲಿ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಸಭೆಕರೆಸಿ ಸಭೆಯಲ್ಲಿ ಉದ್ದೇಶಿಸಿ ಮಾತನಾಡಿದರು ವಾಂತಿ ಭೇದಿ 35 ಜನಕ್ಕೆ ನಾಗಸಮುದ್ರದಲ್ಲಿ ಆಗಿರೋದ್ರಿಂದ ಮುಂದೆ ಇಂತಹ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮ ವಹಿಸಬೇಕು ಆರೋಗ್ಯ ಇಲಾಖೆ ಹೆಲ್ತ್ ಇನ್ಸ್ಪೆಕ್ಟರ್ ಗಳಿಗೆ ಹೋಟೆಲ್ ನಲ್ಲಿ ತಿಂಡಿ ತಿನಿಸು ಊಟ ತಿಂದಂತ ಪ್ಲೇಟುಗಳು ಕುಡಿಯುವ ನೀರಿನ ಗ್ಲಾಸ್ ಗಳು ಒಂದದ್ರಲ್ಲಿ ತೊಳೆಯುವುದರಿಂದ ಸಂಕ್ರಾಮಿಕ ರೋಗಕ್ಕೆ ತುತ್ತಾಗ ಬೇಕಾಗುತ್ತದೆ ಆದ್ದರಿಂದ ಇಂತಹ ಹೋಟೆಲ್ಗಳಲ್ಲಿ ಹೋಗಿ ಮನವರಿಕೆ ಒಲಿಸಬೇಕು ಎಂದು ಮಾನ್ಯ ಅಭಿವೃದ್ಧಿ ಹರಿಕಾರರಾದ ಎನ್. ವೈ. ಗೋಪಾಲಕೃಷ್ಣ ಶಾಸಕರು ಆರೋಗ್ಯ ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟರು ಮತ್ತು ಹಾಸ್ಟೆಲ್ಗಳಲ್ಲಿ ಬಡವರ್ಗದ ವಿದ್ಯಾರ್ಥಿಗಳು ಇರುವುದರಿಂದ ಮುಂಜಾಗ್ರತ ಕ್ರಮ ವಹಿಸಿಕೊಳ್ಳಿ ಎಂದು ಮಾನ್ಯ ಶಾಸಕರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು ಮತ್ತು ಅಂಗನವಾಡಿ ಟೀಚರ್ ಗಳು ಸರಿಯಾದ ಟೈಮಿಗೆ ಹೋಗಿ ಕೆಲಸ ಮಾಡಬೇಕು ಇದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾನ್ಯ ಶಾಸಕರು ಸಲಹೆ ಸೂಚಿಸಿದರು ಇದಾದ ನಂತರ ಪಿ ಆರ್ ಇ ಡಿ ಇಲಾಖೆಯಲ್ಲಿ ಸಿಸಿ ರೋಡ್ ಅಡಿಯಲ್ಲಿ ಎಸ್ ಇ ಪಿ ಬಂದಂತ ಯೋಜನೆ ಕರೆಕ್ಟಾಗಿ ಅಂಬೇಡ್ಕರ್ ಕಾಲೋನಿಯಲ್ಲಿ ಸಿಸಿ ರಸ್ತೆ ಮಾಡಬೇಕು ಟಿಎಸ್ಪಿ ಅನುದಾನದಲ್ಲಿ ಬಂದಂತ ಸಿ ಸಿ ರಸ್ತೆ ವಾಲ್ಮೀಕಿ ಕಾಲೋನಿಗಳಲ್ಲಿ ಮಾತ್ರ ಕೆಲಸ ಸಿಸಿ ರಸ್ತೆ ಮಾಡಬೇಕು ಮತ್ತು ಅಧಿಕಾರಿಗಳು ಬೇಜವಾಬ್ದಾರಿತನದಿಂದ ಕೆಲಸ ಮಾಡಬಾರದು ಬರಿ ಬಳ್ಳಾರಿ ಚಳ್ಳಕೆರೆಯಿಂದ ಬಂದು ಆಫೀಸಿಗೆ 12 ಗಂಟೆಗೆ ಬಂದರೆ ಸಾರ್ವಜನಿಕರ ಕೆಲಸಗಳು ಸರಿಯಾದ ರೀತಿಯಿಂದ ಸಾಗಲಾರದು ನೀವು ಕರೆಕ್ಟಾಗಿ ಟೈಮ್ ಟು ಟೈಮ್ ಗೆ ಬಂದು ಕೆಲಸ ಮಾಡಿದರೆ ಮಾತ್ರ ಅದು ಸಾರ್ವಜನಿಕರ ಕೆಲಸ ಅಂತಾ ನಂಬಲಾಗುತ್ತದೆ ಮೊಳಕಾಲ್ಮೂರು ತಾಲೂಕಿನ ಸಾರ್ವಜನಿಕರನ್ನು ಆಫೀಸುಗಳಿಗೆ ದಿನಾಲು ಅಲೆದಾಡಿಸುವಂತಿಲ್ಲ ಅವರ ಕೆಲಸಗಳು ಏನೇ ಇದ್ದರೆ ಒಂದು ವಾರದೊಳಗೆ ಸಾರ್ವಜನಿಕರ ಕೆಲಸಗಳು ಮಾಡಿಕೊಡಬೇಕು ಎಂದು ಮಾನ್ಯ ಅಭಿವೃದ್ಧಿ ಹರಿಕಾರರಾದ ಎನ್. ವೈ. ಗೋಪಾಲಕೃಷ್ಣ ಶಾಸಕರು ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು ಹಿಂದೆ ಹತ್ತು ವರ್ಷದಿಂದ ಮೊಳಕಾಲ್ಮೂರು ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಯೋಜನೆಗಳು ಮತ್ತು ಮೂಲಭೂತ ಸೌಕರ್ಯಗಳು ನೆನೆಗುದಿಗೆ ಬಿದ್ದಿವೆ ಇಲ್ಲಿನ ಅಧಿಕಾರಿಗಳಾಗಲಿ ಹಿಂದೆ ಇರತಕ್ಕಂತಹ ಶಾಸಕರಾಗಲಿ ಸಚಿವರಾಗಲಿ ಯಾವುದೇ ರೀತಿಯಾಗಿ ಯೋಜನೆಗಳು ಮತ್ತು ಮೂಲಭೂತ ಸೌಕರ್ಯಗಳು ಮೊಳಕಾಲ್ಮೂರು ಕ್ಷೇತ್ರದ ಸಾರ್ವಜನಿಕರಿಗೆ ದೊರಕಿಸಿಲ್ಲ ಎಂಬುದು ಕಂಡು ಬರುತ್ತದೆ ಹುಚ್ಚವ್ವನ ಮದುವೆಯಲ್ಲಿ ಉಂಡವನೆ ಜಾಣ ಎಂಬ ಪರಿಸ್ಥಿತಿ ಉದ್ಭವವಾಗಿದ್ದು ಅಧಿಕಾರಿಗಳ ಸಹ ಕೊಟ್ಟವನು ಕೋಡಂಗಿ ತಿಂದವನು ವೀರಭದ್ರ ಎಂಬ ಪರಿಸ್ಥಿತಿ ಮೊಳಕಾಲ್ಮೂರು ತಾಲೂಕಿನಲ್ಲಿ ಹಿಂದೆ ಉದ್ಭವವಾಗಿದ್ದು ಈಗ ಇಂತಹ ನೀಚ್ ಅಧಿಕಾರಿಗಳು ಇನ್ನು ಮುಂದೆ ನಡೆಯುವುದಿಲ್ಲ ನನ್ನ ಹತ್ರ ಏನೇ ಕೆಲಸ ಮಾಡಲಿ ಅದು ಸಾರ್ವಜನಿಕರ ಗೋಸ್ಕರ ಕೆಲಸ ಮಾಡಬೇಕು ನನ್ನನ್ನು ಈ ಕ್ಷೇತ್ರದ ಜನ ಮತದಾರರು ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳಿಸಿರುತ್ತಾರೆ ನನ್ನ ಕ್ಷೇತ್ರ ಸ್ವಂತ ಕ್ಷೇತ್ರ ಎಂದು ತಿಳಿದು ಯೋಜನೆಗಳ ರೂಪಿಸಬೇಕೆಂದು ಅಂದುಕೊಂಡಿದ್ದೇನೆ ಬೇರೆ ಕಡೆ ಕ್ಷೇತ್ರಗಳೆಲ್ಲ ಸಾವಿರಾರು ಕೋಟಿ ಅನುದಾನವನ್ನು ತಂದು ರೈತರಿಗೆ ಬೇಕಾಗುವಂತ ಒಳ್ಳೆ ಅಭಿವೃದ್ಧಿಗಳು ಯೋಜನೆಗಳು ರೂಪಿಸಿದ್ದೇನೆ ಅದೇ ರೀತಿಯಾಗಿ ಈ ನನ್ನ ಸ್ವಂತ ಸ್ಥಳೀಯ ಕ್ಷೇತ್ರವಾಗಿರುವುದರಿಂದ ಈ ಕ್ಷೇತ್ರಕ್ಕೆ ನಮ್ಮ ಕುಟುಂಬ ಇದ್ದಹಾಗೆ ಅಂತಾ ತಿಳಿದು ರೈತರಿಗೆ ಮತ್ತು ಎಲ್ಲಾ ನಾಗರಿಕರಿಗೆ ಒಳ್ಳೆ ಒಳ್ಳೆ ಯೋಜನೆಗಳು ಮತ್ತು ಬಡವರಿಗೆ ಮೂಲಭೂತ ಸೌಕರ್ಯಗಳು ರೂಪಿಸಬೇಕೆಂದು ಈ ಕ್ಷೇತ್ರಕ್ಕೆ ಬಂದಿದ್ದೇನೆ ಹೊರತು ನಾನು ಹಣ ಮಾಡಲಿಕ್ಕೆ ಬಂದಿಲ್ಲ ನನ್ನ ಕ್ಷೇತ್ರದ ಜನ ಉದ್ದಾರಾಗಬೇಕು ನನ್ನ ಕ್ಷೇತ್ರದ ರೈತರು ತನ್ನ ಕಾಲಿನ ಮೇಲೆ ನಿಂತು ದುಡಿಯಬೇಕು ದುಡಿಲಿಕ್ಕೆ ಶಕ್ತಿ ತುಂಬಬೇಕೆಂದು ನಾನು ಬಂದಿದ್ದೇನೆ ಎಂದು ಮಾನ್ಯ ಅಭಿವೃದ್ಧಿ ಹರಿಕಾರರಾದ ಎನ್. ವೈ. ಗೋಪಾಲಕೃಷ್ಣ ಶಾಸಕರು ನೇರ ನುಡಿಗಳನ್ನು ಮಾತನಾಡಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ. ಹೊಂಬಾಳೆ. ಮೊಳಕಾಲ್ಮೂರು