ಭಾರತದ ಹಿರಿಮೆ ಇಸ್ರೋ 3ನೇ ಗಗನ ನೌಕೆ.
ತರೀಕೆರೆ ಜುಲೈ.16

ಭಾರತದ ಹೆಮ್ಮೆಯ ಇಸ್ರೋ ಇಂದು ಉಡಾಯಿಸಿದ ಮೂರನೇ ಮಾನವ ರಹಿತ ಗಗನನಕೆ ಯಶಸ್ವಿಯಾಗಿ ನಬಕೆ ಹಾಕಿದ ಭಾರತದ ಕೀರ್ತಿ ಪತಾಕೆಯನ್ನು ಚಂದಿರನ ಎತ್ತರಕ್ಕೆ ಹಾರಿಸಿದ ಇಸ್ರೋ ಸಿಬ್ಬಂದಿಗಳಿಗೆ ಅಭಿನಂದನೆಗಳು, ಜಗತ್ತಿನಲ್ಲಿ ಮಾನವ ರಹಿತ ಗಗನ ನೌಕೆಯನ್ನು ಈವರೆಗೆ ಆರಿಸಿದ ಮೂರು ದೇಶಗಳಾದ ಅಮೇರಿಕಾ, ರಷ್ಯ, ಚೀನಾ ದೇಶಗಳ ಸಾಲಿಗೆ ಪ್ರತೀಕವಾಗಿದೆ. ಭೂಮಂಡಳದಿಂದ ಸುಮಾರು 3,84,000 ಕಿಲೋಮೀಟರ್ ಪ್ರಯಾಣವನ್ನು ಕ್ರಮಿಸಿರುವ ಗಗನ ನೌಕೆ ಸುಮಾರು 40 ದಿನಗಳನ್ನು ಮಾತ್ರ ತೆಗೆದುಕೊಳ್ಳಲಿದೆ. ಚಂದ್ರನ್ ವೇಷಣೆ ಮಹತ್ವಾಕಾಂಕ್ಷೆಯ ಕಾರ್ಯಕ್ರಮದ ಪಿತಾಮಹರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರವರು ಈ ಕಾರ್ಯಕ್ರಮವನ್ನು 15-8- 2003 ರಲ್ಲಿ ಪ್ರಾರಂಭಿಸಿದರು. ವಿಜ್ಞಾನಿಗಳ ಪರಿಶ್ರಮದ ಫಲವಾಗಿ 22 -10 -2008 ರಲ್ಲಿ P,S,L,V, C-11. ರಾಕೆಟ್ಟನ್ನು ಹೋಮದತ್ತ ಹಾರಿಸಿತು ಇದರ ರೂವಾರಿ ಎಂ ದೊರೆಸ್ವಾಮಿ ಆಗಿದ್ದರು , ಚಂದ್ರಯಾನ 2 ನ್ನು ವರ್ಷಗಳ ಹಿಂದೆ ನಡೆಸಲಾಗಿತ್ತು. ಹಾಗೂ ಚಂದ್ರಯಾನ 3 ನ್ನು ವಿಜ್ಞಾನಿ ಇಸ್ರೋ ಮುಖ್ಯಸ್ಥರಾದ ಎಸ್ ಸೋಮನಾಥ ನೇತೃತ್ವದಲ್ಲಿ ನಡೆಸಲಾಗಿದೆ ಈ ಎಲ್ಲಾ ಪ್ರಯೋಗಗಳಿಂದ ಚಂದ್ರನ ಮೇಲಿರುವ ರಾಸಾಯನಿಕ ಸಂಯೋಜನೆ ಅದರಲ್ಲಿ ಇರಬಹುದಾದ ಖನಿಜಗಳ ಕುರಿತು ಅಧ್ಯಯನ ಮತ್ತು ಸಮಗ್ರ ಚಂದ್ರನ ಅಧ್ಯಯನಕ್ಕೆ ಈ ಚಂದ್ರಯಾನ ಸಹಾಯಕವಾಗಲಿದೆ ಎಂದು ಮ್ಯಾಂಗೋಸ್ ನಿರ್ಧರ್ಶಕರಾದ ಡಾ. ದೇವಾನಂದ ಆರ್ ರವರು ಪತ್ರಿಕೆಗೆ ತಿಳಿಸಿದ್ದಾರೆ.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ