ಎಸ್.ಡಿ.ಎಂ.ಸಿ.ಜಿಲ್ಲಾ ಅಧ್ಯಕ್ಷರನ್ನಾಗಿ ಗುನ್ನಳ್ಳಿ ರಾಘವೇಂದ್ರ ಹಾಗೂ ಜಿಲ್ಲಾ ಕಾರ್ಯದರ್ಶಿಯಾಗಿ ಹೊನ್ನೂರಪ್ಪ ಆಯ್ಕೆ.
ಹೊಸಪೇಟೆ ಜುಲೈ.17

ವಿಜಯನಗರ ಜಿಲ್ಲೆಯ ಹೊಸಪೇಟೆ ನಿಲ್ದಾಣದ ಹತ್ತಿರ ಇರುವಂತಹ ಶ್ರಮಿಕ ಭವನದಲ್ಲಿ ನಡೆದಂತಹ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲು ಉಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ವಿಜಯನಗರ ಜಿಲ್ಲಾ ಅಧ್ಯಕ್ಷರನ್ನಾಗಿ ಹಾಗೂ ರಾಜ್ಯ ಉಪಾಧ್ಯಕ್ಷರಾಗಿ ಗುನ್ನಳ್ಳಿ ರಾಘವೇಂದ್ರ ಇವರನ್ನು ಆಯ್ಕೆ ಮಾಡಲಾಯಿತು ಹಾಗೂ ಎಸ್.ಡಿ.ಎಂ.ಸಿ ಜಿಲ್ಲಾ ಕಾರ್ಯದರ್ಶಿಯಾಗಿ ಜುಮ್ಮೋಬನಹಳ್ಳಿ ಹೊನ್ನೂರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಉಮೇಶ್ ಗಂಗವಾಡಿ ಹಾಗೂ ರಾಜ್ಯ ಕಾರ್ಯದರ್ಶಿ ಪಾರ್ವತಿ ಇವರ ಸಮ್ಮುಖದಲ್ಲಿ ಆಯ್ಕೆ ಮಾಡಿ ಆದೇಶದ ಪ್ರತಿ ನೀಡಿದರು, ಇವರನ್ನು ವಿಜಯನಗರ ಜಿಲ್ಲೆಯಾದ್ಯಂತ ಎಸ್.ಡಿ.ಎಂ.ಸಿ ಸಂಘಟನೆ ಬಲಿಷ್ಠ ಸಂಘಟನೆಯಾಗಿ ಬೆಳೆಯಲಿಕ್ಕೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗುಲ್ಬರ್ಗ ವಿಭಾಗದ ಸಂಘಟನಾ ಕಾರ್ಯದರ್ಶಿ ರಾಜಶೇಖರ್ ಜೆ ಟಿ, ರಾಜ್ಯ ಕಮಟಿ ಸದಸ್ಯರಾದ ಲಕ್ಷ್ಮಿ ದೇವಿ ಮತ್ತು ಮಂಜುನಾಥ್ ರಾಜ್ಯ ಕಮಟಿ ಸದಸ್ಯ ಭಾಗ್ಯ, ಎಸ್.ಡಿ.ಎಂ.ಸಿ ಜಿಲ್ಲಾ ಸಂಚಾಲಕ ಹನುಮಂತಪ್ಪ ಬಿಷ್ನಹಳ್ಳಿ ಸೇರಿದಂತೆ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು, ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನಿ. ಕೂಡ್ಲಿಗಿ