ಪಟ್ಟ ಇಲ್ಲದ ಕಾರಣ ಅಭಿವೃದ್ಧಿ ಕೆಲಸಗಳು ಮರೀಚಿಕೆಯಾದ ಹಂಪಿ ಗ್ರಾಮ ಪಂಚಾಯತಿ ವ್ಯಾಪ್ತಿಗೊಳಪಟ್ಟ ನರಸಾಪುರ ಗ್ರಾಮಕ್ಕೆ ಪಟ್ಟ ನೀಡುವಂತೆ ಕ.ರ.ವೇ.ಜಿಲ್ಲಾ ಘಟಕ (ಪ್ರ.ಶೆಟ್ಟಿ.ಬಣ)ದಿಂದ ಆಗ್ರಹ.
ನರಸಾಪುರ ಜುಲೈ.17

ಕರ್ನಾಟಕ ರಕ್ಷಣಾ ವೇದಿಕೆ (ಪ್ರ.ಶೆಟ್ಟಿ. ಬಣ) ವಿಜಯನಗರ ಜಿಲ್ಲಾ ಘಟಕದಿಂದ ಇಂದು ನರಸಾಪುರ ಗ್ರಾಮದಲ್ಲಿ ಹಂಪಿ ಗ್ರಾಮ ಪಂಚಾಯತಿ ವತಿಯಿಂದ ನರಸಾಪುರ ಗ್ರಾಮದಲ್ಲಿ ವಿಷೇಶ ಗ್ರಾಮ ಸಭೆ, ನಡೆಯಿತು ಈ ಸಭೆಯಲ್ಲಿ ಕಡುಬಡವರಿಗೆ ಸುಮಾರು 7೦ ವರ್ಷಗಳಿಂದ ವಾಸ ಮಾಡುತ್ತಿರುವ ಹಾಗೂ ಇದು ಖಾಸಗಿ ಜಮೀನು ಇದ್ದು ಕೇವಲ ಅಗ್ರಿಮೆಂಟ್ ಮಾಡಿಕೊಂಡು 7೦ ವರ್ಷಗಳಿಂದ ವಾಸಮಾಡುತಿರುತ್ತಾರೆ ಹಂಪಿ ಗ್ರಾಮ ಪಂಚಾಯತಿ ಯಲ್ಲಿ 7೦ ವರ್ಷಗಳಿಂದ ತೆರಿಗೆಯನ್ನು ಕಟ್ಟುತ್ತಾ ಬಂದಿರುತ್ತಾರೆ ಮತ್ತು ಪ್ರತಿಯೊಂದು ಕುಟುಂಬಕ್ಕೆ ಡೊರ ನ್ಂಬರ ಸಹ ಗ್ರಾಮ ಪಂಚಾಯತಿ ವತಿಯಿಂದ ಪಡೆದಿರುತ್ತಾರೆ.

6೦ ಕುಟುಂಬಗಳು ವಾಸಮಾಡುತ್ತಿರುತ್ತಾರೆ ಈಗ ಇವರಿಗೆ ಯಾವುದೇ ಸೌಲಭ್ಯ ದೋರೆಯುತ್ತಿಲ್ಲಾ ಕಾರಣ ಪಟ್ಟ ಇಲ್ಲದ ಕಾರಣ ಪಟ್ಟ ಕೊಡಬೇಕು ಅಂದರೆ ಸರ್ಕಾರ ಇದಕ್ಕೆ ಮನಸ್ಸು ಮಾಡಬೇಕು ಈ ನಿಟ್ಟಿನಲ್ಲಿ ಎಲ್ಲಾ 6೦ ಕುಟುಂಬಗಳಿಗೆ ಪಟ್ಟ ದೊರೆಯುವಂತೆ ಹಾಗೂ ಗ್ರಾಮನತ್ತ ಮಾಡಲು ಸರ್ಕಾರ ಮುಂದಾಗಬೇಕು ಎಂದು ಕ.ರ.ವೇ ಜಿಲ್ಲಾ ಘಟಕ ವತಿಯಿಂದ (ಪ್ರ.ಶೆಟ್ಟಿ. ಬಣ) ಸರ್ಕಾರ ಕ್ಕೆ ಒತ್ತಾಯ ಮಾಡಲಾಯಿತು ಈ ನಿಟ್ಟಿನಲ್ಲಿ ಜಿಲ್ಲಾಧ್ಯಕ್ಷರು ಆದ ಷಣ್ಮುಖ ಪಿ ಮಾತಾನಾಡಿ ಸರ್ಕಾರ ಈಗಾಗಲೇ ವಿಷೇಶವಾಗಿ ಇಂತಹ ವಿಷಯಗಳ ಬಗ್ಗೆ 2೦22 ರಲ್ಲಿ ಇದರ ಬಗ್ಗೆ ಅಧಿಕೃತ ಆದೇಶ ಹೋರಡಿಸಿದೆ ಈ ನಿಟ್ಟಿನಲ್ಲಿ ನಮ್ಮ ಮನವಿಯನ್ನು ಸ್ವೀಕರಿಸಿ ತಕ್ಷಣ ಪಟ್ಟ ಕೊಡುವ ಕೆಲಸ ಆಗಬೇಕು ಎಂದು ಮನವಿಯನ್ನು ಮಾಡಲಾಯಿತು ಈ ಸಂದರ್ಭದಲ್ಲಿ ಹಂಪಿ ಗ್ರಾಮ ಪಂಚಾಯತಿ ಪಿಡಿಓ ಆದ ಉಮೇಶ ಜಾಗಿರದಾರ, ಹಾಗೂ ಅಧ್ಯಕ್ಷರಾದ ಜಿ.ಡಿ ಹೇಮಗಿರಿ,ಗ್ರಾಮಲೆಕ್ಕದಿಕಾರಿ ರಂಜಿತ, ಹಾಗೂ ಕರವೇ ಜಿಲ್ಲಾ ಉಪಾಧ್ಯಕ್ಷ ರು ಜಿ.ಡಿ ತಿಪ್ಪಣ್ಣ,ರಾಘವೇಂದ್ರ, ಕರವೇ ಪಂಪಾಪತಿ, ಪದಾದಿಕಾರಿಗಳು ಊರಿನ ಪ್ರಮುಖ ರು ಚಿದಾನಂದ ಪ್ಪ, ಗಣೇಶ,ಗಂಗ,ಹನುಮಯ್ಯ,ಹನುಮಂತ,ಮಂಡರ್ ಹುಲುಗಪ್ಪ,ಮಂಡ್ರು ರಾಮಣ್ಣ ಭೀಮಪ್ಪ,ಹರಿಚ್ಶಂದ್ರ, ಮಲಿಯಪ್ಪ,ಮುಂತಾದವರು ಇದ್ದರು.
ತಾಲೂಕ ವರದಿಗಾರರು:ಮಾಲತೇಶ. ಶೆಟ್ಟರ್. ಹೊಸಪೇಟೆ