ಮುಗಿಲ ಸಾಲಿನ ಹನಿಗಳು…
ಕಂಡೆನು ಮುಗಿಲ ಸಾಲಿನ ಹನಿಗಳುವರ್ಣಿಸಲು ಸಾಧ್ಯವೇ ಚಲಿಸುವ ಮೋಡಗಳುಎಷ್ಟು ಚೆಂದ ಕಾಮನಬಿಲ್ಲಿನ ಬಣ್ಣಗಳುಭಯಂಕರ ಆರ್ಭಟಿಸುವ ಗುಡುಗು ಸಿಡಿಲುಗಳು..

ಮಳೆಹನಿ ಬೀಳಲು ಭೂಮಿ ತಂಪಾಗಲು ಫಲವತ್ತಾಗಿರುವ ಹೊಲದಿಂದ ರೈತನು ನಗಲುಕಂಗೊಳಿಸುತಿದೆ ಪ್ರಕೃತಿಯು ಹಸಿರು ಗಿಡಗಳಿಂದಲುಬಾನು ಭೂಮಿ ಒಂದಾಗಿದೆ ಸುತ್ತಲು..
ತಂಪು ಗಾಳಿಯು ಮನಸ್ಸಿಗೆ ಹಿತವಾಗಿದೆಮುಂಗಾರು ಮಳೆಯಲ್ಲಿ ಕನಸು ನನಸಾಗಿದೆಪ್ರತಿ ಮನುಕುಲಕ್ಕೆ ಹಸಿರೇ ಉಸಿರಾಗಿದೆಮತ್ತೆ ಮತ್ತೆ ಮಳೆಯು ಬೇಕನಿಸಿದೆ..
ಮೇಘರಾಜನ ಬರುವಿಕೆಗೆ ಮಯೂರಿ ನಾಟ್ಯವಾಡಲುವಸಂತನ ಆಗಮನಕ್ಕೆ ಕೋಗಿಲೆ ಕೂಗಲುಮೋಡಗಳ ಸದ್ದಿಗೆ ರೈತನು ನಗಲುಪದಗಳು ಸಾಲದು ಪ್ರಕೃತಿಯ ವರ್ಣಿಸಲು.
ಶ್ರೀ ಮುತ್ತು.ಯ. ವಡ್ಡರ(ಶಿಕ್ಷಕರು)ಬಾಗಲಕೋಟMob-9845568484