“ಪರಂವ:”ಜುಲೈ-21ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿರುವ ಚಿತ್ರವು ಬಿಡುಗಡೆ.
ಸಿಡೇಗಲ್ಲು ಜುಲೈ.19

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಹೋಬಳಿಯ ವ್ಯಾಪ್ತಿಯಲ್ಲಿ ಬರುವಂತಹ ಚಿಕ್ಕ ಹಳ್ಳಿಯಾದ ಸಿಡೆಗಲ್ಲು ಗ್ರಾಮದ ಯುವ ಪ್ರತಿಭೆಯನ್ನು ಇಟ್ಟುಕೊಂಡು ಚಿತ್ರದ ನಿರ್ದೇಶಕ ಸಂತೋಷ್ ಕೈದಾಳ ಇವರು ಚಿತ್ರದ ನಾಯಕ ಪ್ರೇಮ್ ಸಿಡೆಗಲ್ ‘ಪರಂವ:’ ಎಂಬ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿ ಈ ಚಿತ್ರವು ಪ್ರೇಕ್ಷಕರಿಗೆ ಮನೋರಂಜನೆಯ ರಸದೌತಣ ನೀಡುವ ಸಿನಿಪ್ರಿಯರಿಗೆ ಉತ್ಸಾಹ ಭರಿತವಾದಂತ ಸಿನಿ ಪಯಣವು ಪ್ರೀತಿ,ಪ್ರೇಮದ ಜೊತೆಗೆ ಒಂದು ಡಾರ್ಕ್ ಲೈಫ್ ಕೂಡ ಚಿತ್ರದಲ್ಲಿ ನೋಡಬಹುದು ಮತ್ತು ಹುಡುಗನ ಜೀವನದಲ್ಲಿ ಕತ್ತಲು ಬೆಳಕಿನ ಕಥೆಯಾಗಿ ಚಿತ್ರವು ಸಾಗುವ ಕಥೆ ಎನ್ನಬಹುದು ಚಿತ್ರದ ನಾಯಕ ನಟನಾಗಿ ‘ಪ್ರೇಮ್ ಸಿಡೆಗಲ್ ‘ ಚಿತ್ರರಂಗಕ್ಕೆ ಕಾಲಿಟ್ಟಿರುವ ಈ ಯುವ ಪ್ರತಿಭೆಯ ಯುವಕನನ್ನು ಪ್ರೋತ್ಸಾಹಿಸಲು ಇದೇ ಜುಲೈ 21ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿರುವ “ಪರಂವ:” ಚಿತ್ರವು ಚಿತ್ರಮಂದಿರಕ್ಕೆ ಹೋಗಿ ಚಿತ್ರವನ್ನು ವೀಕ್ಷಿಸಿ ಜೊತೆಗೆ ಸಿನಿಮಾ ಯಶಸ್ಸು ಕಾಣಲು ರಾಜ್ಯದ ಎಲ್ಲಾ ಪ್ರೇಕ್ಷಕರು ಮಲ್ಟಿ ಫ್ಲೆಕ್ಸ್ ಸ್ಕ್ರೀನ್ ಗಳಲ್ಲಿ ಹೋಗಿ ವೀಕ್ಷಿಸಿ ಎಂದು ಸಿನಿಪ್ರಿಯರಿಗೆ ತಿಳಿಸಿರುತ್ತಾರೆ,

ಈ ಸಿನಿಮಾ ನಾಯಕನ ಕುಟುಂಬ ಹಾಗೂ ಆತನ ಜೀವನದಲ್ಲಿ ಏನೆಲ್ಲಾ ನಡೆಯುತ್ತದೆ ಎಂದು ಚಿತ್ರದ ಕಥೆ ಸಾಗುತ್ತಾ ಇದು ಒಂದು “ವೀರಗಾಸೆ ಹುಡುಗನ ಬದುಕಿನ ಕಥೆ” ಯಾಗಿದೆ ಕೂಡ್ಲಿಗಿ ತಾಲೂಕಿನ ಸ್ಥಳಿಯ ಯುವಕ ಪ್ರೇಮ್ ಸಿಡೆಗಲ್ಲು ಯುವ ಪ್ರತಿಭೆಗೆ ಹೃದಯ ತುಂಬಿ ಹಾರೈಸಿ ಹಾಗೂ ಎಲ್ಲರೂ ಕುಟುಂಬ ಸಹಿತವಾಗಿ ಕೂಡ್ಲಿಗಿಯಲ್ಲಿರುವ ಶ್ರೀ ಬಸವೇಶ್ವರ ಚಿತ್ರಮಂದಿರಕ್ಕೆ ಹೋಗಿ ಚಿತ್ರವನ್ನು ವೀಕ್ಷಿಸುವುದರ ಜೊತೆಗೆ ನಿಮ್ಮ ನಿಮ್ಮ ಸ್ನೇಹಿತರುಗಳಿಗೆ ಯುವಕರಗಳಿಗೆ ಮಹಿಳೆಯರಿಗೆ ಕುಟುಂಬದವರಿಗೆ ಸಂಬಂಧಿಕರುಗಳಿಗೆ ಬಂಧುಗಳಿಗೆ ಚಿತ್ರವನ್ನು ಚಿತ್ರಮಂದಿರಕ್ಕೆ ಹೋಗಿ ವೀಕ್ಷಿಸಲು ತಿಳಿಸಿ.

ಎಂದು ನಾನಾ ಸಂಘಟನೆಯ ಮುಖಂಡರುಗಳು ಸ್ನೇಹಿತರುಗಳು ಹತ್ತಾರು ಸಮುದಾಯದ ಮುಖಂಡರುಗಳು ಚಿತ್ರವನ್ನು ಗೆಲ್ಲಿಸಿ ಎಂದು ಕೂಡ್ಲಿಗಿ ತಾಲೂಕಿನ ನಾನಾ ಸಂಘಟನೆ ಮುಖಂಡರುಗಳು ಸ್ನೇಹಿತರಗಳು ಹಾಗೂ ಪ್ರೇಮ್ ಸಿಡೆಗಲ್ಲು ರವರ ಕುಟುಂಬಸ್ಥರು ಸಹ ತಿಳಿಸಿರುತ್ತಾರೆ.
ಜಿಲ್ಲಾ ವರದಿಗಾರರು:ರಾಘವೇಂದ್ರ. ಸಾಲುಮನಿ. ಕೂಡ್ಲಿಗಿ