ಗ್ರಾಮೀಣ ಪತ್ರಕರ್ತರಿಗೂ ಸರ್ಕಾರಿ ಸೌಲಭ್ಯಗಳಿಗೆ ಒತ್ತಾಯಿಸಿವೆ — ಶಾಸಕ ನೇಮಿರಾಜ್ ನಾಯ್ಕ್.

ಕೊಟ್ಟೂರು ಜುಲೈ.23

ತಾಲೂಕು ಕೇಂದ್ರ ಹಾಗೂ ಹೋಬಳಿ ಕೇಂದ್ರಗಳಲ್ಲಿ ಪತ್ರಿಕೆಗಳಿಗಾಗಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಗೌರವಧನ ಸೇರಿ ಸರಕಾರದ ಎಲ್ಲ ಸೌಲಭ್ಯಗಳನ್ನು ಒದಗಿಸುವುದಕ್ಕೆ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಸರಕಾರಕ್ಕೆ ಒತ್ತಾಯಿಸುತ್ತೇನೆ ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ ಹೇಳಿದರು.

ಪಟ್ಟಣದ ಬಾಲಾಜಿ ಕನ್ವೆನ್‌ಷನಲ್ ಹಾಲ್‌ನಲ್ಲಿ ನಡೆದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಶನಿವಾರ ಮಾತನಾಡಿದರು. ಸಮರ್ಪಕವಾಗಿರುವ ವ್ಯವಸ್ಥೆಯನ್ನು ಮೀರಿ ನಡೆಯುವ ಸರಕಾರಗಳ ವಿರುದ್ಧ ಪತ್ರಿಕೆಗಳು ನಿರ್ಭೀತಿಯಿಂದ ವರದಿ ಮಾಡಿದ ಪರಿಣಾಮವಾಗಿ ಕೆಲ ಪಕ್ಷಗಳು ಅಕಾಶವನ್ನೇ ಕಳೆದುಕೊಂಡಿವೆ. ನಗರ ಸೇರಿದಂತೆ ಹಳ್ಳಿಗಳಲ್ಲಿ ಸರಕಾರದ ಸೌಲಭ್ಯಗಳು ತಲುಪದೇ ಇದ್ದಾಗ ಅವುಗಳನ್ನು ಪತ್ರಿಕೆಗಳಲ್ಲಿ ವರದಿ ಮಾಡಿ ಜನಪ್ರತಿನಿಗಳನ್ನು ಎಚ್ಚರಿಸುವ ಕೆಲಸವನ್ನು ಪರ್ತಕರ್ತರು ಮಾಡುತ್ತಿದ್ದಾರೆ. ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗದಂತೆ ಪತ್ರಿಕಾ ರಂಗವೂ ದೇಶದಲ್ಲಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದೆ. ಪತ್ರಿಕೆ ಕಚೇರಿಗಳಲ್ಲಿ ಹಾಗೂ ಜಿಲ್ಲಾ ವರದಿಗಾರರಿಗೆ ಸರಕಾರದ ಎಲ್ಲ ಸೌಲಭ್ಯಗಳು ಸಿಗುತ್ತಿವೆ. ಆದರೆ ಕೆಲವೊಂದು ಸಾರಿ ಅಪಾಯವನ್ನೇ ಮೈಮೇಲೆ ಎಳೆದುಕೊಂಡು ವರದಿ ಮಾಡುವ ತಾಲೂಕು ಹಾಗೂ ಹೋಬಳಿ ಮಟ್ಟದ ಪತ್ರಕರ್ತರಿಗೆ ಯಾವುದೇ ಸುರಕ್ಷತೆಗಳಿಲ್ಲ. ಇಂತಹ ಪತ್ರಕರ್ತರನ್ನು ಸರಕಾರ ಪರಿಗಣನೆಗೆ ತೆಗೆದುಕೊಂಡು ಎಲ್ಲ ಸೌಲಭ್ಯಗಳನ್ನು ಒದಗಿಸುವುದು ಅವಶ್ಯವಾಗಿದೆ. ಕ್ಷೇತ್ರದ ಹ.ಬೊ.ಹಳ್ಳಿ ಮತ್ತು ಕೊಟ್ಟೂರು ಪಟ್ಟಣಗಳಲ್ಲಿ ಪತ್ರಕರ್ತರ ಭವನ ನಿರ್ಮಾಣ ಮಾಡಿಕೊಡುವುದಾಗಿ ಹೇಳಿದರು.ಜಿಪಂ ಮಾಜಿ ಸದಸ್ಯ ಎಂಎಂಜೆ ಹರ್ಷವರ್ಧನ ಮಾತನಾಡಿ, ಪತ್ರಕರ್ತರು ವರದಿ ಮಾಡುವುದರೊಂದಿಗೆ ಸಾಮಾಜಿಕ ಕಾರ್ಯಗಳಲ್ಲಿ ಹಾಗೂ ಹೋರಾಟಗಳಲ್ಲಿ ತೊಡಗಿಕೊಂಡಿದ್ದಾರೆ. ಪತ್ರಕರ್ತರು ಕಾರ್ಯನಿರ್ವಹಿಸಲು ಅವಶ್ಯವಾಗಿ ಬೇಕಿರುವ ಪತ್ರಿಕಾ ಭವನ ನಿರ್ಮಾಣಕ್ಕೆ ಪ.ಪಂ.ವತಿಯಿಂದ ನಿವೇಶನ ಕಲ್ಪಿಸುವುದಾಗಿ ಭರವಸೆ ನೀಡಿದರು.ಸಾನ್ನಿಧ್ಯ ವಹಿಸಿದ್ದ ಚಾನುಕೋಟಿ ಮಠಾಧ್ಯಕ್ಷ ಡಾ.ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಕೊಟ್ಟೂರು ತಾಲೂಕಿನಲ್ಲಿನ ಪತ್ರಕರ್ತರು ಸಾಮಾಜಿಕ ಭದ್ಧತೆಯನ್ನು ಹೊಂದಿದ್ದಾರೆ. ತಾಲೂಕಿನಲ್ಲಿ ನಡೆಯುವ ಸಾಮಾಜಿಕ ಹೋರಾಟಗಳಲ್ಲಿ ಅವರು ಭಾಗಿಯಾಗಿದ್ದಾರೆ. ಪತ್ರಕರ್ತರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಲಿ ಎಂದು ಹೇಳಿದರು.ಪತ್ರಕರ್ತ ಪಾಟೀಲ್ ವೀರನಗೌಡ ವಿಶೇಷ ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಕೊಟ್ರೇಶ, ಮಾತನಾಡಿ ಪತ್ರಕರ್ತರ ನೇರವಾಗಿ ನಿಷ್ಠರವಾಗಿ ವರದಿ ಮಾಡಿದ ಕೂಡಲೇ ಅಧಿಕಾರಿ ವರ್ಗ ಹಾಗೂ ರಾಜಕೀಯ ಪ್ರಭಾವಿಗಳು ಪತ್ರಕರ್ತರ ನಿಷ್ಠುರವಾಗಿ ಬಿಂಬಿಸುತ್ತಾರೆ.ಮತ್ತು ಪ್ರತಿ ಶಾಸಕರು ಆಶ್ವಾಸನೆಗಳು ಕಾರ್ಯಗತಕ್ಕೆ ಆಗದಿರುವುದು ಅಸಮಾಧಾನ ವ್ಯಕ್ತವಾಗಿದೆ.ಈಗಲಾದರೂ ಕಾರ್ಯರೂಪಕ್ಕೆ ಪತ್ರಿಕಾ ಭವನ , ಜಾಗ , ಖಾಲಿ ನಿವೇಶನಗಳು ನೀಡುವ ಬಗ್ಗೆ ಭರವಸೆ ನೀಡಿದರು. ತಾಲೂಕು ಮತ್ತು ಗ್ರಾಮೀಣ ಮಟ್ಟದ ಪತ್ರಕರ್ತರಿಗೆ ಸೌಲಭ್ಯಗಳು ಒದಗಿಸುವ ಬಗ್ಗೆ ಸದನದಲ್ಲಿ ಚರ್ಚೆ ಮಾಡುವಂತೆ ಶಾಸಕರಲ್ಲಿ ಮನವಿ ಮಾಡಿದರು.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸತ್ಯನಾರಯಣ, ಜಿಪಂ ಮಾಜಿ ಉಪಾಧ್ಯಕ್ಷ ಪಿಎಚ್ ದೊಡ್ಡರಾಮಣ್ಣ, ಡಿಎಸ್‌ಎಸ್ ಮುಖಂಡ ಬಿ.ಮರಿಸ್ವಾಮಿ ಮಾತನಾಡಿದರು. ಸಂಘದ ಜಿಲ್ಲಾ ಪದಾಕಾರಿಗಳಾದ ಕೆ.ಲಕ್ಷಣ, ವೆಂಕೋಬಿನಾಯ್ಕ, ಕಿಚಡಿ ಕೊಟ್ರೇಶ, ಎಂ.ರವಿಕುಮಾರ ಸಮಾರಂಭದಲ್ಲಿ ಇದ್ದರು.ವಿಶೇಷ ಸನ್ಮಾನ ಕಿಚಿಡಿ ಕೊಟ್ರೇಶ್ ಜಿಲ್ಲಾ ಉಪಾಧ್ಯಕ್ಷರಿಗೆ, ಶಿಲ್ಪಕಲಾಕಾರ ವಿರೇಶ್‌ಆಚಾರಿ, ಹಸಿರುಹೊನಲು ತಂಡದ ಎಸ್.ಗುರುರಾಜ, ನಿವೃತ್ತ ಪೊಲೀಸ್ ಅಕಾರಿ ಎಂ.ಕೊಟ್ರೇಶ, ಸೈನಿಕ ಎಚ್.ಕೊಟ್ರೇಶ, ಶಿಕ್ಷಕಿ ಗಂಗಮ್ಮರನ್ನು ಸಂಘದಿಂದ ಸನ್ಮಾನಿಸಲಾಯಿತು.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button