ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ವತಿಯಿಂದ ಮಾನ್ಯ ತಹಶೀಲ್ದಾರ್ ರವರಿಗೆ ಮನವಿ ಪತ್ರ ಸಲ್ಲಿಸಿದರು.

ಹೊಸಪೇಟೆ ಜೂನ್.15

ಮೊದಲನೆಯದಾಗಿ ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಮತ್ತೊಮ್ಮೆ ಆಯ್ಕೆಯಾಗಿರುವ ತಮಗೂ ಹಾಗೂ ತಮ್ಮ ಸಹೋದ್ಯೋಗಿ ಮಂತ್ರಿ ಮಂಡಲದ ಎಲ್ಲ ಸದಸ್ಯರಿಗೂ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯ ಘಟಕದ ಪರವಾಗಿ ಹೃತೂರ್ವಕ ಅಭಿನಂದನೆಗಳು.ಕಳೆದ ಆರೇಳು ವರ್ಷಗಳಲ್ಲಿ ಅಗತ್ಯ ವಸ್ತುಗಳ ತೀವ್ರತರವಾದ ಬೆಲೆ ಏರಿಕೆ, ಬರಗಾಲ ಹಾಗೂ ಪ್ರವಾಹಗಳಿಂದ ಕರೋನಾ ಸಂಕಷ್ಟದಿಂದ ಕರ್ನಾಟಕ ರಾಜ್ಯ ಮತ್ತು ದೇವದಾಸಿ ಮಹಿಳೆಯರು ಅವರ ಕುಟುಂಟದ ಸದಸ್ಯರು ನಲುಗಿ ಹೋಗಿರುವುದು ತಮಗೆ ತಮ್ಮ ಸಹೋದ್ಯೋಗಿಗಳಿಗೆ ತಿಳಿದ ವಿಚಾರವಾಗಿದೆ.ಈ ಆರೇಳು ವರ್ಷಗಳಲ್ಲಿ ನಮ್ಮಗಳ ಮಾಸಿಕ ಸಹಾಯಧನವನ್ನು ಅಥವಾ ಪಿಂಚಣೆಯನ್ನು 1500 ರೂಗಳಿಂದ ಕನಿಷ್ಠ 3,000 ರೂಗಳಿಗೆ ಹೆಚ್ಚಿಸುವಂತೆ ತಾವು ಹಿಂದೆ ಮುಖ್ಯ ಮಂತ್ರಿಯಾಗಿದ್ದರೂ ಮತ್ತು ಆನಂತರ ಬಂದ ಶ್ರೀ ಕುಮಾರಸ್ವಾಮಿಯವರ, ಶ್ರೀ ಯಡಿಯೂರಪ್ಪರವರ ನಂತರ ಶ್ರೀ ಬಸವರಾಜ ಬೊಮ್ಮಾಯಿಯವರುಗಳು ಮುಖ್ಯಮಂತ್ರಿಗಳಾಗಿದ್ದರೂ.ಅವರೆಲ್ಲರಿಗೂಒತ್ತಾಯಿಸಿ ಮನವಿ ಸಲ್ಲಿಸಿದವು. ಮಾತುಕತೆ ನಡೆಸಿದವು ಮತ್ತು ಚಳುವಳಿಯನ್ನು ಸಂಘಟಿಸಿ ಒತ್ತಾಯಿಸಿದವು, ತಾವುಗಳುಸೇರಿದಂತೆ ಸಹಾಯಧನವನ್ನು ಹೆಚ್ಚಿಸುವುದಾಗಿ ಹೇಳಿದಿರಿ ಆದರೇ ಹೆಚ್ಚುಳವನ್ನು ಮಾಡಲೇ ಇಲ್ಲ.ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನ ಸಂಖ್ಯೆಗನುಗುಣವಾಗಿ ಅನುದಾನ ಸುಮಾರು 30,000 ಕೋಟಿ ರೂಗಳಷ್ಟು ಅನುದಾನ ಬಿಡುಗಡೆಯಾಗುತ್ತಿದ್ದರೂ ನಮ್ಮ ಗಳ ಅನುದಾನವನ್ನು ಯಾಕೆ ಹೆಚ್ಚಿಸುತ್ತಿಲ್ಲವೆಂಬುದು ಯಕ್ಷ ಪ್ರಶ್ನೆಯಾಗಿದೆ.ಈಗಲಾದರೂ ಮತ್ತು ನಮ್ಮ ಅನುದಾನ ಹೆಚ್ಚಿಸಿಯಾದರೂ ನಮ್ಮಗಳ ಮಾಸಿಕ ಸಹಾಯಧನವನ್ನು ಬೆಲೆ ಏರಿಕೆಯಂತೆ ಕನಿಷ್ಟ 5,000 ರೂಗಳಿಗೆ ಹೆಚ್ಚಿಸಿ ಆದೇಶ ಹೊರಡಿಸಬೇಕೆಂದು ಮರಳಿ ಒತ್ತಾಯಿಸುವೆವು ! ಕಳೆದ ಹಲವಾರು ವರ್ಷಗಳಿಂದ ಒತ್ತಾಯಿಸುತ್ತಿದ್ದರೂ ಗಣತಿ ಪಟ್ಟಿಯಿಂದ ಹೊರಗಿರುವ ಮಹಿಳೆಯರಲ್ಲಿ ಸೇರ್ಪಡೆಗೆ ಅನಗತ್ಯ ತಕರಾರು ತೆಗೆಯಲಾಗುತ್ತಿದೆ. ಅವಮಾನಿತ ಮತ್ತು ದಮನಿತ ಮಕ್ಕಳ ಅದರಲ್ಲೂ ಪರಿತ್ಯಕ್ತ ಹೆಣ್ಣು ಮಕ್ಕಳ ಗಣತಿ ಮಾಡುವ ಕಾರ್ಯವನ್ನು ಕೈಗೊಳ್ಳದೇ ದೌರ್ಜನ್ಯದ ದೇವದಾಸಿ ಪದ್ಧತಿಯನ್ನು ಬೆಳೆಯಲು ಬಿಡಲಾಗುತ್ತಿದೆ.ಹಿಂದಿನ ಬಿಜೆಪಿ ಸರಕಾರ ನಮಗೆ ನೀಡುತ್ತಿದ್ದ ಸಾಲ ಸೌಲಭ್ಯವನ್ನು ಕಡಿತ ಮಾಡಿ ವಂಚಿಸಿದೆ. ಮಾತ್ರವಲ್ಲ ಮೂರು ಜನವಿರೋಧಿ ಕೃಷಿ ಕಾಯ್ದೆಗಳು ಮತ್ತು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ದಲಿತರು ಹಾಗೂ ದೇವದಾಸಿ ಮಹಿಳೆಯರಕುಟುಂಬದ ಸದಸ್ಯರು ಬದುಕುವ ಹಾಗೂ ಆಹಾರದ ಮತ್ತು ಶಿಕ್ಷಣದ ಹಕ್ಕಿನ ಮೇಲೆ ಗಂಭೀರ ದಾಳಿಯನ್ನು ನಡೆಸಿದ ಇವುಗಳನ್ನೆಲ್ಲಾ ತಾವು ವಾಪಸ್ ಪಡೆಯುವದು ಅವಶ್ಯವಿದೆ. ಈ ನೆಲೆಯಲ್ಲಿ ಈ ಕೆಳಕಂಡ ಹಕ್ಕೊತ್ತಾಯಗಳನ್ನು ಪರಿಹರಿಸಲು ಈ ಮೂಲಕ ವಿನಂತಿಸುವವು.ಈ ಸಂದರ್ಭದಲ್ಲಿ ಕಾರ್ಯದರ್ಶಿ ನಾಗರತ್ನಮ್ಮ ಅವರು ಮಾತನಾಡಿ 19 ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿದರು.

1) ಎಲ್ಲಾ ದೇವದಾಸಿ ಮಹಿಳೆಯರಿಗೆ ನೀಡಲಾಗುವ ಮಾಸಿಕ ಸಹಾಯಧನವನ್ನು 5,000 ರೂ.ಗಳಿ ಹೆಚ್ಚಿಸಬೇಕು. ದೇವದಾಸಿ ಮಹಿಳೆಯರ ಸರಿತಕ್ಕೆ ಹೆಣ್ಣು ಮಕ್ಕಳಿಗೂ ಅದನ್ನು ವಿಸ್ತರಿಸಬೇಕು. 2) ಗಣತಿಯಲ್ಲಿ ಬಿಟ್ಟು ಹೋದ ದೇವದಾಸಿ ಮಹಿಳೆಯರನ್ನು ಗಣತಿ ವತ್ನಿಯಲ್ಲಿ ಸೇರ್ಪಡೆ ಮಾಡಿ ಎಲ್ಲಾ ರೀತಿಯ ನೆರವನ್ನು ಒದಗಿಸಬೇಕು.3) ದೇವದಾಸಿ ಮಹಿಳೆಯರ ಮಕ್ಕಳ ಮತ್ತು ಕುಟುಂಬದ ಸದಸ್ಯರನ್ನು ತಕ್ಷಣವೇ ಗಣತಿ ಮಾಡಿಅವರಿಗೂ ಪುನರ್ವಸತಿ ಕಲ್ಪಿಸಬೇಕು. 4) ಎಲ್ಲಾ ದೇವದಾಸಿ ಮಹಿಳೆಯರ ಮಕ್ಕಳು ಅಂತರ್ಜಾತಿಯಲ್ಲಾಗಲಿ ಮತ್ತು ಸ್ವಜಾತಿಯಲ್ಲಾಗಲಿಹಾಗೂ ದೇವದಾಸಿ ಮಹಿಳೆಯರ ಕುಟುಂಬಗಳ ಸದಸ್ಯರ ನಡುವೆಯಾಗಲೀ ಮದುವೆಯಾದಲ್ಲಿ10.5 ಲಕ್ಷ ರೂ ನೀಡಬೇಕು. ಇವರ ಮದುವೆಯ ವಿಚಾರದಲ್ಲಿ 5) ಕೇಂದ್ರ ಸರಕಾರ ಈ ಕೂಡಲೇ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಜನಸಂಖ್ಯೆಗನುಗುಣವಾಗಿಪ್ರೋತ್ಸಾಹ ಧನವನ್ನುಅನುದಾನ ಬಿಡುಗಡೆ ಮಾಡಬೇಕು. ಅದೇ ರೀತಿ ಎಸ್ಸಿಪಿ & ಎಸ್ಟಿಪಿ ಕಾಯ್ದೆಯನ್ನು ಜಾರಿಗೊಳಿಸಬೇಕು6) ಬರಗಾಲ ಹಾಗೂ ಅತೀವೃಷ್ಟಿ ಮತ್ತು ಪ್ರವಾಹದ ಹಿನ್ನೆಲೆಯಲ್ಲಿ ಎಲ್ಲಾ ದೇವದಾಸಿ ಮಹಿಳೆಯರ ಮತ್ತು ಅವರ ಮಕ್ಕಳ ಹಾಗೂ ಸ್ತ್ರೀ ಶಕ್ತಿ ಹಾಗೂ ಸ್ವ ಸಹಾಯ ಸಂಘಗಳ ಸಾಲ ಮನ್ನಾ ಮಾಡಬೇಕು. ದಲಿತ ಮಹಿಳೆಯರ ಸ್ತ್ರೀ ಶಕ್ತಿ ಹಾಗೂ ಸ್ವ ಸಹಾಯ ಗುಂಪುಗಳ ಸುತ್ತು ನಿಧಿಯನ್ನು ಒಂದು ಲಕ್ಷದ ರೂಗಳಿಗೆ ಮತ್ತು ಶೇ 75 ಸಹಾಯಧನದ ಮತ್ತು ಉಳಿದ ಸಾಲಕ್ಕೆ ಬಡಿ, ಇರದ ಸಾಲವನ್ನು ಕನಿಷ್ಠ 50ಲಕ್ಷರೂಗೆ ಹೆಚ್ಚಿಸಬೇಕು.7) ವ್ಯವಸಾಯದಲ್ಲಿ ತೊಡಗಲು ಇಚ್ಚಿಸುವ ಎಲ್ಲಾ ದೇವದಾಸಿ ಮಹಿಳೆಯರು ಮತ್ತು ಅವರ ಮಕ್ಕಳಿಗೆ ತಲಾ 5 ಎಕರೆ ನೀರಾವರಿ ಜಮೀನುಗಳನ್ನು ಉಚಿತವಾಗಿ ಒದಗಿಸಬೇಕು. ಸದರಿ ಜಮೀನು ನೀಡುವ ಯೋಜನೆಯಲ್ಲಿ ಪ್ರತಿವರ್ಷ ಪ್ರತಿ ತಾಲೂಕಿಗೆ ಕನಿಷ್ಠ 500 ಪರಿಹಾರ ಒದಗಿಸಲು ಅಗತ್ಯ ಕ್ರಮವಹಿಸಬೇಕು. ಭೂಸ್ವಾಧೀನದ ಮೂಲಕವು ಕ್ರಮವಹಿಸಬೇಕು, ಭೂಮಿ ಖರೀದಿಸಲು ಪ್ರತಿವರ್ಷಕನಿಷ್ಠ 5,000 ಕೋಟಿ ರೂ ಒದಗಿಸಬೇಕು.ರಾಜ್ಯದಾದ್ಯಂತ ನಿರುಪಯೋಗಿ ಯಾಗಿರುವ ರಾಜ್ಯ ಸರಕಾರದ ವಿವಿಧ ಇಲಾಖೆಗಳಡಿಯ ಕೃಷಿ ಮತ್ತಿತರ ಫಾರಂಗಳ ಜಮೀನುಗಳನ್ನು ದೇವದಾಸಿ ಮಹಿಳೆಯರ ಸಹಕಾರಿ ಬೇಸಾಯಕ್ಕೆ ಒದಗಿಸಬೇಕು. ಉದಾಹರಣೆಗೆ ಬಳ್ಳಾರಿ ಜಿಲ್ಲೆಯ ಕು‌ಕುಪ್ಪ ಫಾರಂ,8) ನಿವೇಶನ ರಹಿತರಿಗೆ ತಲಾ 80:80 ಚದರ ಅಡಿ ಸ್ಥಳದಲ್ಲಿ ಕನಿಷ್ಠ 7 ಲಕ್ಷ ರೂ ಮೌಲ್ಯದ ಮನೆಯನ್ನು ಉಚಿತವಾಗಿ ನಿರ್ಮಿಸಿಕೊಡಬೇಕು. ಉಳಿದ ಜಮೀನಿನಲ್ಲಿ ಬದುಕು ರೂಪಿಸಿಕೊಳ್ಳಲು ಅಗತ್ಯಯೋಜನೆಗಳನ್ನು ರೂಪಿಸಿಕೂಡಬೇಕು.9) ದಲಿತರು, ಮಹಿಳೆಯರು, ಬಡವರು ಹಾಗೂ ರೈತರ ವಿರೋಧಿಯಾದ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ- 2020 ಹಾಗೂ ಎ.ಪಿ.ಎಂ.ಸಿ ತಿದ್ದುಪಡಿ ಕಾಯ್ದೆ – 2020, ಜಾನುವಾರು ಹತ್ಯೆ ನಿಷೇಧ ತಿದ್ದುಪಡಿಕಾಯ್ದೆ – 2020 ಮತ್ತು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಇವುಗಳನ್ನು ಹಾಗೂ ಜಾತಿ ತಾರತಮ್ಯ ಹೇರುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ಸುಗ್ರೀವಾಜಿ ಯನ್ನು ವಾಪಸ್ ಪಡೆಯಬೇಕು10) ದೇವದಾಸಿ ಮಹಿಳೆಯರು ಮತ್ತು ಅವರ ಮಕ್ಕಳು ಸ್ವಯಂ ಉದ್ಯೋಗ ಕೈಗೊಳ್ಳಲು ವೃತ್ತಿ ತರಬೇತಿ ಶಿಬಿರಗಳನ್ನು ಹೋಬಳಿ ಗೊಂದರಂತೆ ಪ್ರತಿ ತಿಂಗಳು ಕನಿಷ್ಠ 4,000 ರೂಗಳ ಊಟದ ವಸತಿ ಸೌಲಭ್ಯದೊಂದಿಗೆ ನೀಡಬೇಕು. ನಂತರ ವೃತ್ತಿಯಲ್ಲಿ ತೊಡಗಲು ತಲಾ ವ್ಯಕ್ತಿಗೆ ಕನಿಮ್ಮ 95 ಲಕ್ಷ ರೂಪಾಯಿ ಗಳಿಗೆ ಕಡಿಮೆ ಇರದೆ ಸಾಲ ನೀಡಬೇಕುಅದರಲ್ಲಿ ಶೇ. 35 ಸಹಾಯಧನ ಇರುವ ಉಳಿದ ಸಾಲ ಕಂತುವಿನ 5 ವರ್ಷಗಳ ಕಾಲ ಬಡ್ಡಿ, ಇರದಂತೆ ಖಾತರಿ ಪಡಿಸಬೇಕು.11) ದೇವದಾಸಿ ಮಹಿಳೆಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಉನ್ನತ ಹಂತದವರೆಗೆ ಉಚಿತವಾದ ನೇರವಾದ ಪ್ರವೇಶಾವಕಾಶ ಒದಗಿಸಬೇಕು. ಮತ್ತುವಿದ್ಯಾವಂತ ನಿರುದ್ಯೋಗಿಗಳಿಗೆ ಅವರು ಉದ್ಯೋಗ ಪಡೆಯುವವರೆಗೆ ತಲಾ 10,000 ರೂಗಳ ನಿರುದ್ಯೋಗ ಭತ್ಯೆ ನೀಡಬೇಕು12) ಉದ್ಯೋಗ ಖಾತ್ರಿ ಯೋಜನೆಯಡಿ ಕನಿಷ್ಠ ತಲಾ 200 ದಿನಗಳ ಕಾಲ ಉದ್ಯೋಗವನ್ನು ಕಡ್ಡಾಯ ಗೊಳಿಸಬೇಕು. ಅಲ್ಲದೆ ಹೋದಲ್ಲಿ ಶ 5 ರಷ್ಟು ನಿರುದ್ಯೋಗ ಭತ್ಯೆ ಒದಗಿಸಬೇಕು ಕೂಲಿ ಮೊತ್ತವನ್ನು 700 ರೂಗಳಿಗೆ ಹೆಚ್ಚಿಸಬೇಕು.13) ರಾಜ್ಯ ಸರಕಾರ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್.ಕೆ.ಜಿ ಹಾಗೂ ಯುಕೆಜಿ ಶಿಕ್ಷಣ ನೀಡಲು ಕ್ರಮವಹಿಸಿ ಅಂಗನವಾಡಿ ಕೇಂದ್ರಗಳನ್ನು ಮೇಲ್ಮರ್ಜೆಗೇರಿಸಬೇಕು. ಅದೇ ರೀತಿ ಎಲ್ಲಾ ಕನ್ನಡ ಶಾಲೆಗಳಲ್ಲಿ ಇಂಗೀಷ್ ಭಾಷೆಯನ್ನು ಒಂದನೇ ತರಗತಿಯಿಂದಲೆ ಪರಿಣಾಮ ಕಾರಿಯಾಗಿ ಒಂದು ಭಾಷೆಯಾಗಿ ಕಲಿಸಲು ಅಗತ್ಯ ಕ್ರಮವಹಿಸಬೇಕು.14) .ಫಲಾನುಭವಿಗಳ ಆಯ್ಕೆಯಲ್ಲಿ ನಡೆಯುವ ತಾರತಮ್ಮ ಮತ್ತು ಭ್ರಷ್ಟಾಚಾರವನ್ನು ತಡೆಯಲು ಫಲಾನುಭವಿಗಳನ್ನು ಗ್ರಾಮ ಪಂಚಾಯ್ತಿಗಳು ಮತ್ತು ನಗರ ಪ್ರದೇಶಕ್ಕೆ ಸಮರ್ಪಕ ಕೋಟಾ ನಿಗದಿಸಿ, ಅದರಂತೆ ಅಲ್ಲಿನ ಫಲಾನುಭವಿಗಳನ್ನು ಸಾರ್ವಜನಿಕರ ಸಮ್ಮುಖದಲ್ಲಿ ಲಾಟರಿ ಎತ್ತುವ ಮೂಲಕ ಗುರುತಿಸಬೇಕು. ಭ್ರಷ್ಟಾಚಾರ ತಡೆಯಲು ಕ್ರಮವಹಿಸಬೇಕು. ಫಲಾನುಭವಿಗಳಿಂದ ಪ್ರತಿ ವರ್ಷ ಅರ್ಜಿಗಳನ್ನು ಪಡೆಯುವುದನ್ನು ನಿಲ್ಲಿಸಬೇಕು. ಒಂದು ಪಲಾನುಭವಿಗಳಿಗಾಗುವ ತೊಂದರೆಯನ್ನು ನಿವಾರಿಸಬೇಕು15) 2017 ರಿಂದ ಜನ ಮನೆಗಳು ಇಲ್ಲಿವರೆಗೂ ಬಂದಿಲ್ಲ. ಅಧಿಕಾರಿಗಳು ನಮ್ಮ ಕಛೇರಿಯಿಂದ ಜಿ.ಪಿ.ಎಸ್‌. ಮಾಡಿಸಿ ಮನೆಗಳನ್ನು ನೀಡುತ್ತೇವೆಂದು ಸುಳ್ಳು ಭರವಸೆಗಳನ್ನು ಹೇಳುತ್ತಿದ್ದಾರೆ. ಇದರ ಬಗ್ಗೆ ಸೂಕ್ತ ಕ್ರಮ ವಹಿಸಬೇಕು.16) ಕಂಪ್ಲಿ ತಾಲೂಕಿನಲ್ಲಿರುವ ಮಾಜಿ ದೇವದಾಸಿ ಮಹಿಳೆಯರಿಗೆ ನಿವೇಶನ ನೀಡಬೇಕು.17) ಮಾಜಿ ದೇವದಾಸಿ ಮಹಿಳೆಯರು ಗಂಗಾ ಕಲ್ಯಾಣ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ್ದು ಫಲಾನುಭವಿಗಳಿಗೆ ಇಲ್ಲಿವರೆಗೂ ಕೊಳವೆಬಾವಿ ಕೊರೆಸಿರುವುದಿಲ್ಲ ಸೂಕ್ತ ಕ್ರಮಕೈಗೊಳ್ಳಬೇಕು, 18) ಮಾಜಿ ದೇವದಾಸಿ ಮಹಿಳೆಯರು ಅಲ್ಲದೇ ಇರುವ ಮತ್ತು ಸರ್ವೆ ಪಟ್ಟಿಯಲ್ಲಿ ಹೆಸರು ಇಲ್ಲದೆಇರುವ, ದೇವದಾಸಿ ಮಹಿಳೆಯರಿಗೆ ಪಿಂಚಣಿ ಸಹಾಯಧನ ಮತ್ತು ಮನೆಗಳನ್ನು ಮಂಜೂರುಮಾಡಿರುವ ಅಧಿಕಾರಿಗಳಿಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು19) ದೇವದಾಸಿ ಮಹಿಳೆಯರ ಕಛೇರಿಯಲ್ಲಿ 19-20 ವರ್ಷದಿಂದ ಒಂದೇ ಕಛೇರಿಯಲ್ಲಿ ಕೆಲಸ ಮಾಡುವ 20)ಅಧಿಕಾರಿಗಳನ್ನು ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡಬೇಕು ಈ ಮೂಲಕ ತಹಶೀಲ್ದಾರರ ಮೂಲಕ, ಮಾನ್ಯ ಶ್ರೀ ಸಿದ್ದರಾಮಯ್ಯನವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ತಾಲೂಕು ವರದಿಗಾರ:ಮಾಲತೇಶ್.ಶೆಟ್ಟರ್. ಹೊಸಪೇಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button