ವಿದ್ಯುತ್ ದ್ವೀಪದ ತಂತಿಗಳನ್ನು ಹೊರಗೆ ಬಿಟ್ಟ ಅಧಿಕಾರಿಗಳು — ಸಿಹಿ ಕಹಿ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಚಾನಲ್ ನಲ್ಲಿ ಬಿತ್ತರಿಸಿದ ಸುದ್ದಿಗೆ ಫಲಶೃತಿ.
ಕೊಟ್ಟೂರು ಜುಲೈ.24

ಪಟ್ಟಣದ ಹರಪ್ಪನಹಳ್ಳಿ ರಸ್ತೆ ಮರಿಕೊಟ್ಟೂರೇಶ್ವರ ದೇವಸ್ತಾನ ದಿಂದ ಬಸ್ಸು ನಿಲ್ದಾಣದವರೆಗೆ ಸರ್ಕಾರದ ಅನುದಾನದಡಿಯಲ್ಲಿ ನೂತನ ರಸ್ತೆ ಮತ್ತು ವಿದ್ಯುತ್ ದ್ವೀಪದ ಕಂಬಗಳ ನಿರ್ಮಾಣ ಮಾಡಿದ್ದು . ಈ ಕಂಬಗಳ ವಿದ್ಯುತ್ ತಂತಿಗಳನ್ನು ಕಂಬದ ಒಳಗೆ ಮುಚ್ಚುವುದು ಬಿಟ್ಟು.ಈ ವಿದ್ಯುತ್ ದ್ವೀಪದ ಕಂಬದ ತಂತಿಗಳಿಗೆ ಹಲವಾರು ಕಡೆ ಪ್ಯಾಚ್ ಹಾಕಿ ತಂತಿಗಳನ್ನು ಹಾಗೆ ಹೊರಗೆ ಬಿಟ್ಟಿದ್ದಾರೆ. ಈ ರಸ್ತೆಯಲ್ಲಿ ಓಡಾಡುವ ವಾಹನ ಸವಾರರಿಗೆ ಮತ್ತು ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಕೈಗೆ ಸಿಗುವ ಹಾಗೆ ಇರುವ ಆಕಸ್ಮಿಕವಾಗಿ ಜನರಿಗೆ ಈ ವಿದ್ಯುತ್ ತಂತಿಗಳಿಂದ ಕಣ್ಣಿಗೆ ಕಾಣದ ವಿದ್ಯುತ್ ನಿಂದ ಸಾರ್ವಜನಿಕರ ಜೀವಕ್ಕೆ ವಿದ್ಯುತ್ ಸ್ಪರ್ಶಸಿ ಅನಾಹುತಗಳು ಉಂಟಾಗುವ ಮೊದಲು.ಈ ದ್ವೀಪದ ತಂತಿಗಳನ್ನು ಸಂಭಂದಪಟ್ಟ ಅಧಿಕಾರಿಗಳು ಕೂಡಲೇ ಎಚ್ಚತ್ತುಕೊಂಡು ಈ ತಂತಿಗಳನ್ನು ವಿದ್ಯುತ್ ಕಂಬದ ಹೊಳಗಡೆ ಸರಿಪಡಿಸಿ ಸಾರ್ವಜನಿಕರನ್ನು ಈ ವಿದ್ಯುತ್ ತಂತಿಗಳಿಂದ ಅನಾಹುತಗಳು ಉಂಟಾಗದಂತೆ ಅಧಿಕಾರಿಗಳು ಕಾಪಾಡಬೇಕು ಎಂದು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ. ನ್ಯೂಸ್ ಚಾನಲ್ ನಲ್ಲಿ ಬಿತ್ತರಿಸಿದ ಸುದ್ದಿಗೆ ಫಲಶೃತಿ ದೊರೆತಂತಾಗಿದೆ ಸಂಭಂದಪಟ್ಟ ಅಧಿಕಾರಿಗಳು ಪಟ್ಟಣದ ಹರಪ್ಪನಹಳ್ಳಿ ರಸ್ತೆ ಮರಿಕೊಟ್ಟೂರೇಶ್ವರ ದೇವಸ್ಥಾನದಿಂದಬಸ್ಸು ನಿಲ್ದಾಣದವರಗೆ ವಿದ್ಯುತ್ ದ್ವೀಪದ ಕಂಬಗಳಲ್ಲಿ ಹೊರಗೆ ಬಿದ್ದ ವಿದ್ಯುತ್ ತಂತಿಗಳನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಕಂಬಗಳಲ್ಲಿ ವಿದ್ಯುತ್ ತಂತಿಗಳನ್ನು ಮುಚ್ಚಿದರು. ಅಪಾಯದಲ್ಲಿರುವ ಈ ಕೆಲಸಕ್ಕೆ ಮುಂದಾಗಿ ಬಂದು ಸಾರ್ವಜನಿಕರ ಹಿತ ರಕ್ಷಣೆ ಕಾಪಾಡಿದ ಅಧಿಕಾರಿಗಳಿಗೆ ಮತ್ತು ಶಿಬ್ಬಂದಿ ವರ್ಗದವರಿಗೆ ಕರ್ನಾಟಕ ಮಾನವಹಕ್ಕುಗಳ ಜನಾಸೇವಾ ಸಂಸ್ಥೆ (ನೊ)ಕೊಟ್ಟೂರುತಾಲೂಕು ಅದ್ಯಕ್ಷರಾದ ಬಿ.ಸತೀಶ್ ಮತ್ತು ಪಧಾದಿಕಾರಿಗಳಾದ ಎಚ್ .ವಿರುಪಾಕ್ಷಿ .ಕೂಡ್ಲಿಗಿ ಸುರೇಶ್ .ಜಬ್ಬೀರ್ ಸಾಹೇಬ್ ಧನ್ಯವಾದ ತಿಳಿಸಿದರು.
ತಾಲೂಕ ವರದಿಗಾರರು:ಪ್ರದೀಪ್. ಕುಮಾರ್. ಸಿ ಕೊಟ್ಟೂರು