ಶಾಸಕರಾಗಿ 8 ತಿಂಗಳಲ್ಲೇ ಕೂಡ್ಲಿಗಿ ಕ್ಷೇತ್ರದ ಅಭಿವೃದ್ಧಿಗೆ 550 ಕೋಟಿ ಅನುದಾನ ತಂದು ಶಂಕುಸ್ಥಾಪನೆ ನೆರವೇರಿಸಿದ – ಡಾ. ಎನ್.ಟಿ. ಶ್ರೀನಿವಾಸ್.
ಕೂಡ್ಲಿಗಿ ಮಾರ್ಚ್.7

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಪಂಚಾಯತಿ ವಿಜಯನಗರ ತಾಲೂಕು ಪಂಚಾಯಿತಿ ಕೂಡ್ಲಿಗಿ ಡಾಕ್ಟರ್ ಎನ್.ಟಿ. ಶ್ರೀನಿವಾಸ್ ಇವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳ ಸಂಮ್ಮುಖದಲ್ಲಿ ನಡೆಸಿದ ( ಕೆಡಿಪಿ ) ಪ್ರಗತಿ ಪರಿಶೀಲನಾ ಸಭೆಯಲ್ಲಿ ರೈತರಿಗೆ ಬರ ಪರಿಹಾರದ ಅನುದಾನ ಬಂದಿರುವ ಕುರಿತು ಕೃಷಿ ಇಲಾಖೆಯ ಅಧಿಕಾರಿಗಳಾದ ಸುನಿಲ್ ಕುಮಾರ್ ಅವರು ತಿಳಿಸಿದರು.ಹಾಗೆ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಧನ ಕರುಗಳಿಗೆ ಮೇವಿನ ಸಮಸ್ಯೆ ಇದ್ದರೆ ನಮ್ಮ ಗಮನಕ್ಕೆ ತಿಳಿಸಿ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಾಗೆ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯತಿಯಲ್ಲಿ ಹಾಲಿ ಇರುವಂತಹ ಬೋರ್ ವೆಲ್ಗಳು ಕೈ ಕೊಟ್ಟರೆ ಪರ್ಯಾಯವಾಗಿ ಖಾಸಗಿ ಬೋರ್ ಮಾಲೀಕರಿಗೆ ಮೂರು ತಿಂಗಳವರೆಗೂ ಅದು ತಿಂಗಳಿಗೆ 18 ಸಾವಿರ ರೂಪಾಯಿಗಳು ವರೆಗೂ ಕೊಟ್ಟು ಕುಡಿಯುವ ನೀರಿನ ಸಮಸ್ಯೆಯನ್ನು ನಿಭಾಯಿಸುವಂತೆ ಸೂಚಿಸಿದರು. ರಾಜ್ಯ ಸರ್ಕಾರವು ಜನರ ಹಿತಕ್ಕಾಗಿ ಕೈಗೊಂಡಿರುವ ಗ್ಯಾರೆಂಟಿಗಳ ಕೊಡುವುದರೊಂದಿಗೆ ವಿರೋಧ ಪಕ್ಷದವರು ರಾಜ್ಯ ಸರ್ಕಾರದಲ್ಲಿ ಯಾವುದೇ ಅನುದಾನಗಳು ಯಾವ ತಾಲೂಕಿಗೂ ಯಾವ ಜಿಲ್ಲೆಗಳಿಗೂ ಸಿಗುವುದಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ ಎಲ್ಲಾ ಗ್ಯಾರೆಂಟಿಗಳ ಜೊತೆಗೆ ನಮ್ಮ ಕೂಡ್ಲಿಗಿ ಕ್ಷೇತ್ರಕ್ಕೆ ಸರ್ಕಾರ ರಚನೆಯಾಗಿ ವರ್ಷ ತುಂಬುವ ದೊರೊಳಗಾಗಿ ಎಲ್ಲಾ ಇಲಾಖೆಗಳಿಗೆ ಒಳಗೊಂಡಂತೆ 550 ಕೋಟಿ ಅನುದಾನವನ್ನು ನಮ್ಮ ಸರ್ಕಾರ ದ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಬರದ ನಾಡಿಗೆ, ಕೂಡ್ಲಿಗಿ ಕ್ಷೇತ್ರ ಬರದ ಅಣೆ ಪಟ್ಟಿಯನ್ನು ತೆಗೆಯಲು ಅಭಿವೃದ್ಧಿ ಮಾಡುವುದರೊಂದಿಗೆ ಶತಾಯ ಗತಾಯ ಸರ್ಕಾರದ ಜೊತೆ ಪ್ರಯತ್ನ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಅಧಿಕಾರಿಗಳಿಗೆ ಚುನಾವಣಾ ಸಂದರ್ಭದಲ್ಲಿ ಜನರ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡದೆ ಪಾಲಿಸಬೇಕು ಎಂದು ತಿಳಿಸಿದರು ಹಾಗೆ ಚುನಾವಣಾ ಸಂದರ್ಭದಲ್ಲಿ ಎಲ್ಲಾ ಅಧಿಕಾರಿಗಳಿಗೆ ತಮ್ಮ ತಮ್ಮ ಚುನಾವಣಾ ಕೆಲಸಗಳನ್ನು ಮಾತ್ರ ಮಾಡಿ, ಹಾಗೇನಾದರೂ ತಮ್ಮ ತಮ್ಮಲ್ಲಿ ಒಳ ರಾಜಕೀಯ ಮಾಡುವುದೇನಾದರೆ ಕಂಡು ಬಂದರೆ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ