ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ — ಗೀತಾಂಜಲಿ ಶಿಂಧೆ.
ಕೊಟ್ಟೂರು ಜುಲೈ.25

ತಾಲೂಕಿನ ಪೊಲೀಸ್ ಠಾಣೆಗೆ ಪ್ರಪ್ರಥಮವಾಗಿ ಮಹಿಳಾ ಪಿಎಸ್ಐ ಆಗಿ ಗೀತಾಂಜಲಿ ಶಿಂಧೆ ರವರು ಸೋಮವಾರ ಅಧಿಕಾರ ವಹಿಸಿಕೊಂಡರು ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್ಐ ವಿಜಯ ಕೃಷ್ಣ ರವರು ಸೋಮವಾರ ತಮ್ಮ ಅಧಿಕಾರವನ್ನು ಹಸ್ತಾಂತರಿಸಿದರು. ಗೀತಾಂಜಲಿ ಶಿಂಧೆ ರವರು ಈ ಹಿಂದೆ ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಪ್ರಸ್ತುತ ಕೊಟ್ಟೂರು ಪೊಲೀಸ್ ಠಾಣೆಗೆ ವರ್ಗಾವಣೆ ಗೊಂಡು ತಮ್ಮ ಅಧಿಕಾರವನ್ನು ಸ್ವೀಕರಿಸಿದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು