50 ನೆಯ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡಲು ತೀರ್ಮಾನ – ಶಾಸಕ ವಿಜಯಾನಂದ ಕಾಶಪ್ಪನವರ.
ಹುನಗುಂದ ಅಕ್ಟೋಬರ್.16




ಕರ್ನಾಟಕ ರಾಜ್ಯೋತ್ಸವದ 5೦ ನೆಯ ವರ್ಷದ ಸುವರ್ಣ ಮಹೋತ್ಸವದಂದು ಕನ್ನಡ ಏಕೀಕರಣಕ್ಕಾಗಿ ಶ್ರಮಿಸಿದ 5೦ ಜನ ಮಹಾನ ವ್ಯಕ್ತಿಗಳ ಭಾವ ಚಿತ್ರದ ಮೆರವಣೆಗೆಯ ಮೂಲಕ ಕನ್ನಡ ಮನಸ್ಸುಗಳ ಪರಿಚಯವನ್ನು ಯುವ ಪೀಳಿಗೆಗಳಿಗೆ ತಿಳಿಸುವುದರ ಜೊತೆಗೆ ಅದ್ದೂರಿಯಾಗಿ ಮತ್ತು ವಿಶೇಷವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸೋಣ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.ಸೋಮವಾರ ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಸಭಾ ಭವನದಲ್ಲಿ ಕರೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಅವರು ಕರ್ನಾಟಕ ರಾಜ್ಯ ನಿರ್ಮಾಣವಾಗಿ 5೦ ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನವಂಬರ್ ತಿಂಗಳಾಧ್ಯಂತ ಕನ್ನಡಪರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ವಿಶೇಷ ಕನ್ನಡ ರಾಜೋತ್ಸವವನ್ನು ಆಚರಿಸುವಂತೆ ಆದೇಶವನ್ನು ನೀಡಿದ್ದು.ನಮ್ಮ ತಾಲೂಕಿನಲ್ಲಿ ಕೂಡಾ ನವೆಂಬರ್ ತಿಂಗಳಾದ್ಯಂತ ಕನ್ನಡ ಅಕ್ಷರ,ಪ್ರಬಂಧ,ಅಂಕಿಗಳ ಕಲಿಕೆ ಸೇರಿದಂತೆ ಅನೇಕ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು.ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮತ್ತು ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ಮಾಡಿ ಹುತ್ಮಾತರಾದ ನಮ್ಮ ತಾಲೂಕಿನ ಮಹನೀಯರ ಕುಟುಂಬದವರಿಗೆ ಸನ್ಮಾನಿಸುವ ಮತ್ತು ಎಸ್.ಎಸ್.ಎಲ್.ಸಿಯಲ್ಲಿ 125 ಕ್ಕೆ 125 ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸತ್ಕರಿಸಲಾಗುವುದು.ಈ ಎಲ್ಲ ಕಾರ್ಯಕ್ರದ ಆಯೋಜನೆಗಾಗಿ ಒಂದು ಸಮಿತಿ ರಚಿಸಿ ಅದರ ಮುಖೇನ ಅತ್ಯಂತ ಅಚ್ಚು ಕಟ್ಟಾಗಿ ಕಾರ್ಯಕ್ರಮವನ್ನು ಮಾಡಬೇಕು.

ಹುನಗುಂದ ಮತ್ತು ಇಳಕಲ್ಲ ತಾಲೂಕಿನಲ್ಲಿ ತಲಾ ಒಂದು ಒಂದು ಕನ್ನಡ ಭವನ ನಿರ್ಮಾಣಕ್ಕೆ ನಿವೇಶವನ್ನು ನೀಡುವಂತೆ ಪುರಸಭೆ ಮತ್ತು ನಗರಸಭೆ ಅಧಿಕಾರಿಗಳಿಗೆ ಸೂಚಿಸಿವುದರ ಜೊತೆಗೆ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವ ಭರವಸೆಯನ್ನು ನೀಡಿದರು.ಈ ಕಾರ್ಯಕ್ರಮವನ್ನು ಹುನಗುಂದದಲ್ಲಿ ಹಮ್ಮಿಕೊಳ್ಳಬೇಕು ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಜಸ್ಮೀನ ಕಿಲ್ಲೇದಾರ ಮಾತನಾಡಿ ಸುವರ್ಣ ಕರ್ನಾಟಕ ರಾಜ್ಯೋತ್ಸವದ ದಿನದಂದು 5೦ ಸರ್ಕಾರಿ ಕನ್ನಡ ಶಾಲೆಗಳನ್ನು ದತ್ತು ಪಡೆದು ಅವುಗಳಿಗೆ ಕನ್ನಡ ಬಾವುಟದ ಬಣ್ಣವಾದ ಕೆಂಪು ಮತ್ತು ಹಳದಿ ಬಣ್ಣವನ್ನು ಬಳೆಯುವುದು ಒಂದು ವಿಶೇಷ ಮೆರಗು ತರುತ್ತದೆ ಮತ್ತು ಕನ್ನಡ ಅಕ್ಷರ ಮತ್ತು ಅಂಕಿಗಳನ್ನು ಮಕ್ಕಳಿಗೆ ತಿಳಿಸುವ ಕಾರ್ಯವನ್ನು ಮಾಡುವುದು ಸೂಕ್ತ ಎಂದರು.ವಿಜಯ ಮಹಾಂತೇಶ ಗದ್ದನಕೇರಿ ಮಾತನಾಡಿ ಕನ್ನಡ ಬಳಸಿದರೇ ಮಾತ್ರ ಕನ್ನಡವನ್ನು ಬೆಳೆಸಲು ಸಾಧ್ಯ ಕೇವಲ ನವೆಂಬರ್ ೧ ಬಂದಾಗ ಆಚರಣೆ ಮಾಡಿ ಬಿಟ್ಟರೇ ಅದಕ್ಕೆ ಅರ್ಥ ಇರೋದಿಲ್ಲ ಇಡೀ ತಿಂಗಳು ಕನ್ನಡ ಭಾಷೆಯ ವಿವಿಧ ಚಟುವಟಿಕೆಗಳನ್ನು ಮಾಡಬೇಕು ಎಂದರು.ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹುನಗುಂದ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ,ಹುನಗುಂದ ಇಳಕಲ್ಲ ಸರ್ಕಾರಿ ನೌಕರರ ಸಂಘದ ಸಂಗಣ್ಣ ಹಂಡಿ ಮತ್ತು ಪರಶುರಾಮ ಪಮ್ಮಾರ,ಮುತ್ತಣ್ಣ ಬೀಳಿಗಿ,ಲಿಂಗರಾಜ ಗದ್ದನಕೇರಿ,ಪ್ರಭು ಮಾಲಗಿತ್ತಿಮಠ,ಇಮಾಮ ಕರಡಿ ಮಾತನಾಡಿ ಕಾರ್ಯಕ್ರಮ ಆಚರಣೆಯ ರೂಪ ರೇಷೆಗಳನ್ನು ತಿಳಿಸಿದರು.ತಹಶೀಲ್ದಾರ ನಿಂಗಪ್ಪ ಬಿರಾದಾರ,ಗ್ರೇಡ್ 2 ತಹಶೀಲ್ದಾರ ಈಶ್ವರ ಗಡ್ಡಿ,ಪಿಎಸ್‌ಐ ಚನ್ನಯ್ಯ ದೇವೂರ,ಸಿದ್ದು ಶೀಲವಂತರ,ಮುತ್ತಣ್ಣ ಕಲಗೋಡಿ,ಕರವೇ ಚಂದ್ರು ಹುನಗುಂದ,ಶರಣಪ್ಪ ಗಾಣಗೇರ,ಮಹಿಬೂಬ ಸರಕಾವಸ್,ಜಬ್ಬಾರ ಕಲಬುರ್ಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.ಬಾಕ್ಸ್ ಸುದ್ದಿ-ಮಹಾನ ವ್ಯಕ್ತಿಗಳ ಜಯಂತಿ ಮತ್ತು ರಾಷ್ಟ್ರೀಯ ಹಾಗೂ ರಾಜ್ಯ ಹಬ್ಬಗಳನ್ನು ಸರ್ಕಾರದಿಂದಲೇ ಆಚರಿಸುವುದರಿಂದ ಅಂತಹ ಜಯಂತಿ ಮತ್ತು ರಾಷ್ಟ್ರೀಯ ಕಾರ್ಯಕ್ರಮಕ್ಕೆ ಎಲ್ಲ ಇಲಾಖೆಯ ಅಧಿಕಾರಿಗಳು ಪ್ರತಿ ಬಾರಿ ಗೈರಾಗುತ್ತಿರುವ ಸುದ್ದಿ ಕೇಳಿ ಬರುತ್ತಿದೆ.ಇನ್ನು ಮುಂದೆ ಎಲ್ಲಾ ಜಯಂತಿ ಕಾರ್ಯಕ್ರಮಕ್ಕೆ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು ಎಂದು ವಿಜಯಾನಂದ ಕಾಶಪ್ಪನವರ ಶಾಸಕರು ಎಚ್ಚರಿಕೆ ನೀಡಿದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ