ಜುಲೈ 26-ವಿಜಯ ದಿವಸ.
ಭಾರತ ಮರೆಯದ ಕಾರ್ಗಿಲ್ ಸಂಘರ್ಷ
ಭಾರತ ಪಾಕ್ ಗಳ ನಡುವಿನ ಸಶಸ್ತ್ರ ಸಂಘರ್ಷ
ಜುಲೈ 26ರಂದು ಇಡೀ ಭಾರತವೇ ಹರ್ಷ
ಆಚರಿಸುವೆವು ವಿಜಯ ದಿವಸ ಪ್ರತಿ ವರ್ಷ..
ಎದೆಗೆ ಎದೆ ಕೊಟ್ಟು ಹೋರಾಡಿದ ಸೈನಿಕರು
ಭಾರತ ಮಾತೆಯ ರಕ್ಷಣೆಗೆ ನಿಂತ ರಕ್ಷಕರು
ಯುದ್ಧದಲ್ಲಿ 527 ಸೈನಿಕರಾದರು ಹುತಾತ್ಮರು
ಮತ್ತೆ ಹುಟ್ಟಿ ಬರಲಿ ಯುದ್ಧದಲ್ಲಿ ಹುತಾತ್ಮರಾದ ಮಹಾತ್ಮರು..
ಮನೋಜ್ ಕುಮಾರ್ ಪಾಂಡೆ ವಿಕ್ರಂ ಬಾತ್ರಾ ಅಗ್ರಮಾನ್ಯರು
ಇವರು ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತರು
ಹಲವರಿದ್ದಾರೆ ಸಾಹಸಗಾಥೆಯ ವೀರ ಯೋಧರು
ದೇಶ ಎಂದು ಮರೆಯದ ಸೈನಿಕರು ಭಾರತರತ್ನರು..
1999 ಮೇ ತಿಂಗಳಿನಲ್ಲಿ ಯುದ್ಧ ಪ್ರಾರಂಭವಾಯಿತು
ಜಮ್ಮು ಕಾಶ್ಮೀರದ ಕಾರ್ಗಿಲ್ ನಲ್ಲಿ ಯುದ್ಧ ನಡೆಯಿತು
ಯುದ್ಧಕ್ಕೆ ಆಪರೇಷನ್ ವಿಜಯ ಎಂದು ಹೆಸರಿಟ್ಟಿತು
ವಿಜಯ ಪತಾಕೆ ಹಾರಿಸಿದ ದಿನ ಮತ್ತೆ ಮರುಕಳಿಸಿತು..
ಗೌರವವಿರಲಿ ಯೋಧರಿಗೆ ಅವರ ದೇಶ ಸೇವೆಗೆ
ಹೆತ್ತವರ ಬಿಟ್ಟು ದೇಶಕ್ಕಾಗಿ ಬದುಕಿ
ಬಾಳಿದವರಿಗೆ
ಅರ್ಪಿಸಿ ದೇಶಪ್ರೇಮದ ನಮಸ್ಕಾರ ಅವರ ಪಾದಗಳಿಗೆ
ತಿರಂಗ ಹಾರಾಡುತ್ತಿದೆ ಸೈನಿಕರ ಬಿಸಿಯುಸಿರಿನ ಗಾಳಿಗೆ..
ದೇಶ ಪ್ರೇಮದ ನಮನ…
ಮುತ್ತು.ಯ.ವಡ್ಡರ
ಬಾಗಲಕೋಟ
Mob-9845568484