ಶಿಶುಪಾಲನಾ ಕೇಂದ್ರಗಳನ್ನು ಸಂಭ್ರಮದಿಂದ ಆರಂಭಿಸಿ — ಮಲ್ಲಿಕಾರ್ಜುನ ಬಡಿಗೇರ.
ಬಾಗಲಕೋಟ ಆಗಷ್ಟ.11
ಅಗಸ್ಟ್ 15 ರಂದು ಆರಂಭವಾಗಲಿರುವ ಶಿಶುಪಾಲನಾ ಕೇಂದ್ರಗಳನ್ನು ಹಬ್ಬದ ಮನೆಯಂತೆ ಸಂಭ್ರಮ ಸಡಗರದಿಂದ ಆರಂಭಿಸಿ ಎಂದು ಗುಳೇದಗುಡ್ಡ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಮಲ್ಲಿಕಾರ್ಜುನ ಬಡಿಗೇರ ತಿಳಿಸಿದರು.ಗುಳೇದಗುಡ್ಡ ಹಾಗೂ ಬಾದಾಮಿಯಲ್ಲಿ ನೂತನವಾಗಿ ಪ್ರಾರಂಭವಾಗಲಿರುವ ಶಿಶುಪಾಲನಾ ಕೇಂದ್ರಗಳ ಕಾರ್ಯಕರ್ತೆಯರ ತರಬೇತಿ ಕೊನೆಯ ದಿನದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯೋತ್ಸವ ದಿನಾಚರಣೆಯಂದು ಎರಡು ತಾಲೂಕಿನಲ್ಲಿ ಶಿಶುಪಾಲನಾ ಕೇಂದ್ರಗಳ ಪ್ರಾರಂಭವಾಗಲಿದ್ದು, ತರಬೇತಿ ಪಡೆದ ನೀವು ಸಡಗರ ಸಂಭ್ರಮದಿಂದ ಮಕ್ಕಳನ್ನು ಬರಮಾಡಿಕೊಳ್ಳಿ ಎಂದು ತಿಳಿಸಿದರು.ಬಳಿಕ ಬಾದಾಮಿ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಅಶೋಕ ತಿರಕಣ್ಣವರ ಮಾತನಾಡಿ,

ತರಬೇತಿ ಪಡೆದ ಕಾರ್ಯಕರ್ತೆಯರು ತಮ್ಮ ಜವಬ್ದಾರಿಗಳನ್ನು ಕಟ್ಟುನಿಟ್ಟಾಗಿ ಮಾಡಿ ಎಂದು ತಿಳಿಸಿದರು.ಇನ್ನು ಸಹಾಯಕ ನಿರ್ದೇಶಕ (ಗ್ರಾ) ಸಂತೋಷ್ ಮೋಕಾಶಿ ಮಾತನಾಡಿ, ಅಗಸ್ಟ್ 15ರಂದು ಶಿಶುಪಾಲನಾ ಕೇಂದ್ರಗಳನ್ನು ಮದುವೆ ಮನೆಯಲ್ಲಿರುವ ಅಲಂಕಾರದಂತೆ ತಯಾರು ಮಾಡಿ ಎಂದು ತಿಳಿಸಿದರು.ನಾಲ್ಕು ದಿನಗಳ ಕಾಲ ಶಿಶುಪಾಲನಾ ಕೇಂದ್ರಗಳ ಕಾರ್ಯಕರ್ತೆಯರಿಗೆ ಮಾಸ್ಟರ್ ಟ್ರೇನರ್ಸ್ ಗಳಾದ ಬಸವರಾಜ ಕೊಪ್ಪದ, ವೆಂಕಪ್ಪ ಗಿರಿತಮ್ಮನವರ ತರಬೇತಿ ನೀಡಿದರು. ಈ ಸಂದರ್ಭದಲ್ಲಿ ಮಾಸ್ಟರ್ ಟ್ರೇನರ್ಸ್ ಗಳಾದ ಬಸವರಾಜ ಕೊಪ್ಪದ, ವೆಂಕಪ್ಪ ಗಿರಿತಮ್ಮನವರ, ಐಇಸಿ ಸಂಯೋಜಕರಾದ ಸಮೀರ ಉಮರ್ಜಿ, ವಾದಿರಾಜ ಕುಲಕರ್ಣಿ, ತಾಲ್ಲೂಕು ಪಂಚಾಯಿತಿ ಸಿಬ್ಬಂದಿ, ಕಾಯಕ ಮಿತ್ರರು ಉಪಸ್ಥಿತರಿದ್ದರು.