ಅಂಡರಪಾಸ ನಿರ್ಮಾಣದ ಕಾಮಗಾರಿಯ ಭೂಮಿ ಪೂಜೆಯನ್ನು – ಶಾಸಕ ವಿಜಯಾನಂದ ಕಾಶಪ್ಪನವರ ನೆರವೇರಿಸಿದರು.
ಇಲಕಲ್ಲ ಫೆ.19

ಇಲ್ಲಿನ ಜನರ ಬಹು ದಿನಗಳ ಬೇಡಿಕೆಯಾದ ಬಸವೇಶ್ವರ ವೃತ್ತದ ಬಳಿ ಅಂಡರಪಾಸ ನಿರ್ಮಾಣದ ಕಾಮಗಾರಿಯ ಭೂಮಿ ಪೂಜೆಯನ್ನು ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಬಾಗಲಕೋಟ ಸಂಸದರಾದ ಶ್ರೀ ಪಿ.ಸಿ ಗದ್ದಿಗೌಡರ ನೆರವೇರಿಸಿದರು. ಇಲ್ಲಿನ ವೃತ್ತವು ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುತ್ತಿದ್ದು ಹಲವಾರು ವರ್ಷಗಳಿಂದ ಜನರಿಗೆ ರಸ್ತೆ ದಾಟಲು ತೊಂದರೆ ಯಾಗುತ್ತಿದ್ದು, ಬಹಳಷ್ಟು ಅಪಘಾತಗಳು ಸಂಭವಿಸಿ ಸಾಕಷ್ಟು ಜನರು ಪ್ರಾಣ ಕಳೆದು ಕೊಂಡಿದ್ದಾರೆ.

ಈಗಾಗಲೇ ನಗರಸಭೆ ವತಿಯಿಂದ ಸಿಗ್ನಲ್ ಲೈಟುಗಳನ್ನು ಅಳವಡಿಸಿದ್ದು ಇವತ್ತು ಶಾಶ್ವತ ಪರಿಹಾರ ರೂಪದಲ್ಲಿ ಅಂಡರಪಾಸ ನಿರ್ಮಾಣದ ಕಾಮಗಾರಿಯ ಭೂಮಿ ಪೂಜೆಯಿಂದ ಬಹು ದಿನಗಳ ಕನಸು ನನಸಾಗಿದೆ, ಈ ಸಂದರ್ಭದಲ್ಲಿ ಇಳಕಲ್ಲ ನಗರ ಸಭೆಯ ಅಧ್ಯಕ್ಷೆ ಶ್ರೀಮತಿ ಸುಧಾರಾಣಿ ಸಂಗಮ ನಗರಸಭೆಯ ಸದಸ್ಯರು ರಾಜಕೀಯ ನಾಯಕರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ಜಿಲ್ಲಾ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಅಬ್ದುಲ್.ಗಫಾರ.ತಹಶೀಲ್ದಾರ.ಇಲಕಲ್ಲ. ಬಾಗಲಕೋಟ