ಚವಡಿಹಾಳದ ಗುರುಬಸವ ಶಿಕ್ಷಣ ಸಂಸ್ಥೆಯಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ಜರುಗಿತು.
ಇಂಡಿ ಜುಲೈ.26





ತಾಲೂಕಿನ ಚವಡಿಹಾಳ ಗ್ರಾಮದ ಗುರುಬಸವ ಶಿಕ್ಷಣ ಸಂಸ್ಥೆಯಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ಆಯೋಜಿಸಲಾಗಿತ್ತು ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳಾದ ಪಿ.ಎಸ್.ಐ ಸೋಮೇಶ ಗೆಜ್ಜಿಯವರಿಗೆ ಸಂಸ್ಥೆಯ ಆಡಳಿತ ಅಧಿಕಾರಿಗಳಾದ ಎ. ಎಸ್. ಪಾಟೀಲ ಹಾಗೂ ಪ್ರಾಂಶುಪಾಲರಾದ ಎಸ್. ಆರ್. ರಾಠೋಡ ಮುಖ್ಯ ಗುರುಗಳಾದ ಎ. ಎಂ. ಮುಚ್ಚಂಡಿಯವರು ಸೇರಿಕೊಂಡು ಪಿ.ಎಸ್.ಐ ಸೋಮೇಶ್ ಗೆಜ್ಜೆ ಅವರಿಗೆ ಶಾಲುಹೊದಿಸಿ ಸನ್ಮಾನಿಸಿದರು. ಪಿ.ಎಸ್.ಐ ಸೋಮೇಶ ಗೆಜ್ಜಿ ಅವರು ಸನ್ಮಾನ ಸ್ವೀಕರಿಸಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ದೇಶ ಮಾತನಾಡುತ್ತಾ ಕಾನೂನು ಇರುವುದು ನಮ್ಮೆಲ್ಲರ ರಕ್ಷಣೆಗಾಗಿ ಅದನ್ನು ಪರಿಪಾಲನೆ ಮಾಡಿಕೊಂಡು ಬರುವದು ನಮ್ಮೆಲ್ಲರ ಆದ್ಯ ಕರ್ತವ್ಯ ಕಾನೂನು ಎಲ್ಲರಿಗೂ ಒಂದೇ ಆಗಿರುತ್ತದೆ ಅದರಲ್ಲಿ ಯಾವುದೇ ವ್ಯತ್ಯಾಸವಿಲ್ಲ ಆದರೆ ವಿದ್ಯಾರ್ಥಿಗಳು ಮುಖ್ಯವಾಗಿ ಅರಿತುಕೊಳ್ಳಬೇಕಾಗಿದ್ದು ಮೊಬೈಲ್ ಬಳಕೆ ಕಡಿಮೆ ಮಾಡುವುದು ಮತ್ತು ನಿಮಗೆ ವಿದ್ಯಾರ್ಜನೆಗಾಗಿ ಎಷ್ಟು ಬೇಕೋ ಅಷ್ಟನ್ನೇ ಬಳಕೆ ಮಾಡಿ ಉಳಿದ ವಾಟ್ಸಪ್ ಸೇರಿದಂತೆ ಇನ್ನೂ ಅನೇಕ ವಿಷಯಗಳ ಅವಶ್ಯಕತೆ ನಿಮಗಿಲ್ಲ ಅಶ್ಲೀಲ ವಿಡಿಯೋ ನೋಡುವುದು ಅಶ್ಲೀಲ ಫೋಟೋಗಳು ಕಳಿಸುವುದು ಅಪರಾಧವಾಗಿದೆ ಅದನ್ನು ಮಾಡಬೇಡಿ ತಮಗೆ ಯಾವುದಾದರು ಅಪರಿಚಿತ ಕರೆ ಬಂದರೆ ಸ್ವೀಕರಿಸಬೇಡಿ ಆ ನಂಬರ್ ಇಂದ ತಮಗೆ ಬಹಳ ತೊಂದರೆ ಆಗುತ್ತಿದ್ದರೆ ನಮ್ಮ ಇಲಾಖೆಗೆ ಸಂಪರ್ಕಿಸಿ ನಿಮ್ಮೆಲ್ಲರ ರಕ್ಷಣೆಗಾಗಿ ನಮ್ಮ ಇಲಾಖೆ ಇರುವುದು ಮಕ್ಕಳು ನಮ್ಮ ಪೊಲೀಸ್ ಇಲಾಖೆಗೆ ದೇವರಿದ್ದಂತೆ ಅದಕ್ಕಾಗಿ ನಮ್ಮೊಂದಿಗೆ ನಿಮ್ಮ ನಿಕಟವಾದ ಸಂಪರ್ಕವಿರಲಿ ಅನೈತಿಕ ಚಟುವಟಿಕೆಗಳಿಗೆ ಮಾರು ಹೋಗಬಾರದು ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಸಿಲುಕಿ ಹಾಕಿಕೊಂಡು ಜೀವನ ಹಾಳು ಮಾಡಿಕೊಳ್ಳಬಾರದು ಚೆನ್ನಾಗಿ ಅಧ್ಯಯನ ಮಾಡಿ ತಾಯಿ,ತಂದೆ ಹೆಸರಿನ ಜೊತೆಗೆ ಕಲಿಸಿದ ಶಿಕ್ಷಕರ ಶಾಲೆ ಹೆಸರು ತರಲು ಪ್ರಯತ್ನಿಸಿ, ಪರಿಶ್ರಮ ಪಟ್ಟು ಓದಿ ಉನ್ನತವಾದ ಹುದ್ದೆಗಳು ಅಲಂಕರಿಸಿ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕಾನೂನಿನ ಬಗ್ಗೆ ಏನಾದರೂ ಪ್ರಶ್ನೆಗಳಿದ್ದರೆ ಕೇಳಬಹುದು ಎಂದು ಹೇಳಿದಾಗ ವಿದ್ಯಾರ್ಥಿಗಳು ತಮಗೆ ಗೊತ್ತಿಲ್ಲದ ಪ್ರಶ್ನೆಗಳನ್ನು ಕೇಳಿದರು ಪಿ.ಎಸ್.ಐ ರವರು ಸಮಂಜಸ ಉತ್ತರ ನೀಡುತ್ತಾ ಮುಂದೆ ಸಾಗುತ್ತಿದ್ದರು.

ಒಟ್ಟಿನಲ್ಲಿ ಮಕ್ಕಳ ಆತ್ಮಕ್ಕೆ ಅಮೃತವಾಣಿಯನ್ನು ನೀಡಿ ಜ್ಞಾನದ ಬುತ್ತಿಯನ್ನು ವಿದ್ಯಾರ್ಥಿಗಳ ಮೆದುಳಿನಲ್ಲಿ ತುಂಬಿದರು ವಿದ್ಯಾರ್ಥಿಗಳೊಂದಿಗೆ ಅತಿ ಮಮತೆಯಿಂದ ಪಾಲ್ಗೊಂಡು ತಾವು ಒಬ್ಬ ಶಿಕ್ಷಕರಂತೆ ಕಾನೂನಿನ ಅರಿವು ನೆರವು ಪಾಠ ಮನಮುಟ್ಟುವಂತೆ ಮಾಡಿ ಮಕ್ಕಳ ಮನಸ್ಸನ್ನು ಗೆದ್ದುಕೊಂಡರು. ಪಿ.ಎಸ್.ಐ ಸೋಮೇಶ ಗೆಜ್ಜಿ ಅವರು ಕಾನೂನಿನ ನೆರವು ಅರಿವು ಕಾರ್ಯಕ್ರಮ ಅತ್ಯಂತ ಮಾರ್ಮಿಕವಾಗಿ ನೆರವೇರಿಸಿ ಕೊಟ್ಟರು.ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಎ. ಸಿ. ಪಾಟೀಲರು ಹಾಗೂ ಆಡಳಿತ ಅಧಿಕಾರಿಗಳಾದ ಎ. ಎಸ್.ಪಾಟೀಲರು ಮಾತನಾಡಿದರು. ಆಡಳಿತ ಅಧಿಕಾರಿಗಳು ಕಾನೂನು ಅರಿವು ನೆರವು ಕಾರ್ಯಕ್ರಮದ ಮೇಲೆ ಒಂದು ಸ್ವರಚಿತ ಕವನ ವಾಚನ ಮಾಡಿದರು ಪಿ.ಎಸ್.ಐ ಅಪಾರಜ್ಞಾನ ಸಂಪನ್ನರು ದೂರದೃಷ್ಟಿ ಉಳ್ಳವರು ಒಬ್ಬ ನಿಷ್ಠಾವಂತ ಪಿ.ಎಸ್.ಐ ಗೆ ಇರಬೇಕಾದ ಎಲ್ಲಾ ಅರ್ಹತೆಗಳು ಇವರಲ್ಲಿವೆ ಇಂತಹ ದಕ್ಷ ಆಡಳಿತಗಾರರು ನಮ್ಮ ಗ್ರಾಮೀಣ ಪೊಲೀಸ್ ಠಾಣೆಗೆ ಆಗಮಿಸಿ ನಮ್ಮ ಶಾಲೆಗೆ ಬಂದು ಈ ಕಾರ್ಯಕ್ರಮ ನೆರವೇರಿಸಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಅರ್ಪಿಸಿದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಜೆ.ಪಿ.ಪಾಟೀಲ ಶಿಕ್ಷಕಿ ವಂದನಾರ್ಪಣೆಯನ್ನು ಶ್ರೀಮತಿ ಪುಷ್ಪಾ ಅಥಣಿ ಶಿಕ್ಷಕಿಯವರು ನೆರವೇರಿಸಿ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಸಮಸ್ತ ಶಾಲಾ ಭೋದಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಜಿಲ್ಲಾ ವರದಿಗಾರರು:ರಾಜಶೇಖರ್.ಶಿಂಧೆ.ಶಿರಗುರು