ಕೂಡಲಸಂಗಮ ಗ್ರಾಮ ಪಂಚಾಯತಿಯಲ್ಲಿ ಕಾಂಗ್ರೇಸ್ ಬಾವುಟ — ನಾಮಪತ್ರ ಸಲ್ಲಿಸಲು ಮುಂದಾಗದ ಬಿಜೆಪಿಗರು.
ಕೂಡಲಸಂಗಮ ಜುಲೈ.27

ಹುನಗುಂದ ತಾಲೂಕಿನ ಕೂಡಲಸಂಗಮ ಗ್ರಾಮ ಪಂಚಾಯತಿ ೨ ನೆಯ ಅವಧಿಗೆ ನೂತನ ಅಧ್ಯಕ್ಷರಾಗಿ ಗಂಗಮ್ಮ ಮಲ್ಲಪ್ಪ ರಾಂಪೂರ ಉಪಾಧ್ಯಕ್ಷರಾಗಿ ರೂಪಾ ಮಂಜುನಾಥ ನಂದಿಕೇಶ್ವರ ಅವರು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಕಳೆದ ಏಳೆಂಟು ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಲ್ಲಿ ಸಧ್ಯ ಕೈ ಬಾವುಟ ಹಾರಿದಂತಾಗಿದೆ.ಹೌದು ೧೫ ಸಂಖ್ಯೆ ಬಲಯುಳ್ಳ ಕೂಡಲಸಂಗಮ ಗ್ರಾ.ಪಂಯಲ್ಲಿ ೬ ಜನ ಕಾಂಗ್ರೆಸ್ ಬೆಂಬಲಿತ ಸದಸ್ಯರು,೭ ಬಜೆಪಿ ಬೆಂಬಲಿತ ಸದಸ್ಯರು,೨ ಎಸ್.ಆರ್.ಎನ್ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದರು.ಮೊದಲು ಅವಧಿಯಲ್ಲಿ ಇಬ್ಬರು ಎಸ್.ಆರ್.ಎನ್ ಸದಸ್ಯರ ಬೆಂಬಲದೊAದಿಗೆ ಅಧಿಕಾರಿ ಚುಕ್ಕಾಣಿ ಹಿಡಿದಿದ್ದ ಬಿಜೆಪಿ ೨ನೆಯ ಅವಧಿಯಲ್ಲಿ ಗ್ರಾ.ಪಂಯಲ್ಲಿ ಬಹುಸಂಖ್ಯೆ ಸದಸ್ಯರನ್ನು ಹೊಂದಿದ್ದರೂ ಕೂಡಾ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಮುಂದಾಗದಿರುವುದು ಸುಕ್ಷೇತ್ರದಲ್ಲಿ ಕಮಲ ಪಡೆ ಮಕಾಡೆ ಮಲಗಿಕೊಂಡಿತ್ತಾ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.೨ನೆಯ ಅವಧಿಗೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ ಮಹಿಳೆ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ ಮೀಸಲಾಗಿತ್ತು.ಆದರೆ ಇಬ್ಬರು ಬಿಜೆಪಿ ಸದಸ್ಯರು ಓರ್ವ ಎಸ್.ಆರ್.ಎನ್ ಸದಸ್ಯ ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ ಬೆಂಬಲ ಸೂಚಿಸಿದರು.ಇದರಿಂದ ಅಧ್ಯಕ್ಷ ಮತ್ತು ಉಪಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅಧ್ಯಕ್ಷರಾಗಿ ಗಂಗಮ್ಮ ರಾಂಪೂರ ಮತ್ತು ಉಪಾಧ್ಯಕ್ಷರಾಗಿ ರೂಪಾ ನಂದಿಕೇಶ್ವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದರು.ಸಂಭ್ರಮಾಚರಣೆ-ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಯಾಗುತ್ತಿದ್ದಂತೆ ಹುನಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ ದೊಡಮನಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರಾದ ಶೇಖರಗೌಡ ಗೌಡರ,ಗಂಗಣ್ಣ ಬಾಗೇವಾಡಿ,ಶ್ರೀಕಾಂತ ಹಿರೇಮಠ,ತಾ.ಪಂ ಮಾಜಿ ಅಧ್ಯಕ್ಷ ಮುತ್ತಣ್ಣ ಭಜಂತ್ರಿ,ಶ್ರೀಕಾಂತ ಚಲವಾದಿ ಹಾಗೂ ಗ್ರಾ.ಪಂ ಸದಸ್ಯರು ಸೇರಿದಂತೆ ಅನೇಕರು ಇದ್ದರು.
ತಾಲೂಕ ವರದಿಗಾರರು:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ. ಹುನಗುಂದ

