ಕಾಯಕಯೋಗಿ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು…

ಮಾಗಡಿ ತಾಲೂಕಿನ ಬಂಡೆ ಮಠದಲ್ಲಿ ಜನನಸದಾಶಿವಯ್ಯ ಶಿವರುದ್ರಮ್ಮ ದಂಪತಿಗಳ ನಯನ
ಶ್ರೀ ಶಿವಕುಮಾರ ಮಹಾಸ್ವಾಮಿಗಳಿಂದ ಪ್ರೇರಣ
ಶ್ರೀ ಸಿದ್ದಗಂಗಾ ಮಠದ ದಿವ್ಯ ಆಶಾಕಿರಣ..
ದಾಸೋಹ ಪೂಜ್ಯರಿಗೆ ದಾಸೋಹ ನಮನ
ಅನ್ನದ ಆಶ್ರಯ,
ಅಕ್ಷರದ ಆಶ್ರಯದ ಚೇತನ
ಆಸೆ ಆಕಾಂಕ್ಷೆಗಳನ್ನು ತ್ಯಜಿಸಿದ ಮಹಾ ಚೇತನ
ನಾಡಿನ ಭಕ್ತರ ಪಾಲಿಗೆ ಭವ್ಯ ಶ್ರೀ ಕಿರಣ
ಕನ್ನಡ ಭಾಷೆಯ ಮಹತ್ವ ತಿಳಿಸಿ
ಆಂಗ್ಲ ಭಾಷೆಯ ಪದಗಳ ಬಳಸಿ
ಸಂಸ್ಕೃತದ ಪಾಂಡಿತ್ಯವನ್ನು ಶ್ರೀಮಂತಗೊಳಿಸಿ
ಶ್ರೀ ಮಠದ ವಿದ್ಯಾರ್ಥಿಗಳ ಬಾಳು ಬೆಳಗಿಸಿ
ಬಾಳುತಿಹರು ಕಾಯಕವೇ ಕೈಲಾಸವೆಂದು
ಪ್ರತಿದಿನ ಪೂಜಾ ಜ್ಞಾನದಲ್ಲಿ ಮಿಂದು
ಕಾಯಕದಲ್ಲಿ ತಾವು ಸದಾ ಮುಂದು
ದೇವ ಸ್ವರೂಪಿ ಸದಾ ಹಿಂದು ಮುಂದು ಎಂದು..
ಶ್ರೀಗಳ ಪೂರ್ವಾಶ್ರಮದ ಹೆಸರು ಶ್ರೀ ವಿಶ್ವನಾಥ
ತುಮಕೂರಿನ ಸಿದ್ದಗಂಗಾ ಮಠಕ್ಕೆ ಇವರೇ ಆದಿನಾಥ
ಹೆತ್ತವರಿಲ್ಲದೊಡೆ ಇವರ ಆಶ್ರಯದಲ್ಲಿ
ಮಕ್ಕಳಾಗಲಿಲ್ಲ ಅನಾಥ
ಇಡೀ ನಾಡಿಗೆ ಮಾದರಿ ಶ್ರೀಗಳ ಕಾಯಕ ಪಥ..
ಮಠದ ಹಳೆಯ ವಿದ್ಯಾರ್ಥ
ಮುತ್ತು.ಯ.ವಡ್ಡರ
ಬಾಗಲಕೋಟ
Mob-9845568484

