ವಿ.ಎಂ.ಕೆ.ಎಸ್.ಆರ್ ವಸ್ತ್ರದ ಕಲಾ. ವಿಜ್ಞಾನ ಮಹಾ ವಿದ್ಯಾಲಯದ ವಿದ್ಯಾರ್ಥಿಗಳ ಕ್ರೀಡಾ ಸಾಧನೆ.
ಹುನಗುಂದ ನವೆಂಬರ್.28

ಪಟ್ಟಣದ ವಿ.ಎಮ್.ಕೆ.ಎಸ್.ಆರ್. ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿ.ಎಸ್. ಬೆಳ್ಳಿಹಾಳ ವಾಣಿಜ್ಯ ಮಹಾ ವಿದ್ಯಾಲಯದ ಬಿ.ಎ. ದ್ವೀತಿಯ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿ ಕು. ಮೇಘನಾಥ ಅಶೋಕ ದಂಡಗಿ ರಾಷ್ಟ್ರ ಮಟ್ಟದ ಸ್ಕ್ವಾಯ್ ಚಾಂಪಿಯನ್ಶಿಪ್ನ ವಿವಿಧ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗಳಿಸಿ ಮಹಾ ವಿದ್ಯಾಲಯದ ಕೀರ್ತಿ ಹೆಚ್ಚಿಸಿದ್ದಾನೆ. ಇತ್ತೀಚಿಗೆ ಗೋವಾ ರಾಜ್ಯದಲ್ಲಿ ಕಿಂಙ ಅಸೋಶಿಯೇಶನ್ ವತಿಯಿಂದ ನಡೆದ ೩೭ನೇಯ ರಾಷ್ಟೀಯ ಸ್ಕ್ವಾಯ್ ಚಾಂಪಿಯನ್ಶಿಪ್ನ ಸೀನಿಯರ್ “ಎರೋ ಸ್ಕ್ವಾಯ್” ವಿಭಾಗದಲ್ಲಿ ಅಮೋಘ ಸಾಧನೆಯನ್ನು ತೋರುವ ಮೂಲಕ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ತನ್ನದಾಗಿಸಿ ಕೊಂಡಿದ್ದಾನೆ.

ರಾಷ್ಟ್ರ ಮಟ್ಟದಲ್ಲಿ ಮಹಾವಿದ್ಯಾಲಯದ ಕೀರ್ತಿ ಹೆಚ್ಚಿಸಿದ ವಿದ್ಯಾರ್ಥಿ ಮೇಘನಾಥ ದಂಡಗಿ, ಕಲಂದರ ಬಸಿರ್ ಬದಾಮಿ ಈತನು ಕಬಡ್ಡಿ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕಬಡ್ಡಿ ತಂಡಕ್ಕೆ ಆಯ್ಕೆ ಯಾಗಿದ್ದಾನೆ.ಆಂದ್ರಪ್ರದೇಶದ ಖಾಕಿನಾಡದಲ್ಲಿ ಜರುಗಿದ ದಕ್ಷಿಣ ಭಾರತ ಅಂತರ್ ವಿಶ್ವವಿದ್ಯಾಲಯ ಕಬಡ್ಡಿ ಪಂದ್ಯವಾಳಿಯಲ್ಲಿ ಭಾಗ ವಹಿಸಿದ್ದಾನೆ.ಇನ್ನು ಆನಂದಗೌಡ ಗುರುಸಿದ್ದಗೌಡ ಗೌಡರ ಈತನು ಇತ್ತೀಚಿಗೆ ಗೋವಾದಲ್ಲಿ ಜರುಗಿದ ೧೪ನೇ ರಾಷ್ಟೀಯ ಗ್ರಾಮಿಣ ಕುಸ್ತಿ ಪಂದ್ಯಾವಳಿಯಲ್ಲಿ ಸ್ಪರ್ಧಿಸಿ ಚಿನ್ನದ ಪದಕ ಪಡೆದು ಕೊಳ್ಳುವದರ ಮೂಲಕ ಮಹಾವಿದ್ಯಾಲಯದ ಕೀರ್ತಿ ಹೆಚಿಸಿದ್ದಾನೆ.

ಮೂರು ಜನ ಕ್ರೀಡಾ ಪಟುಗಳನ್ನು ಮತ್ತು ಕ್ರೀಡಾ ನಿರ್ದೇಶಕ ಲೆಫ್ಟಿನೆಂಟ್ ಎಸ್.ಬಿ.ಚಳಗೇರಿ ಅವರನ್ನು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ,ಗೌರವ ಕಾರ್ಯದರ್ಶಿ ಡಾ.ಮಹಾಂತೇಶ ಕಡಪಟ್ಟಿ. ಆಡಳಿತ ಮಂಡಳಿಯ ನಿರ್ದೇಶಕರು, ಸರ್ವ ಸದಸ್ಯರು ಹಾಗೂ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಕೆ.ಮಠ,ಐ.ಕ್ಯೂ.ಎ.ಸಿ ಸಂಯೋಜಕ ಡಾ.ಎಸ್.ಆರ್.ಗೋಲಗೊಂಡ, ಒಕ್ಕೂಟದ ಕಾರ್ಯಾಧ್ಯಕ್ಷ ಡಾ. ಪರಶುರಾಮ ಹಾದಿಮನಿ ಸೇರಿದಂತೆ ಮಹಾವಿದ್ಯಾಲಯದ ಪ್ರಾಧ್ಯಾಪಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ. ಹುನಗುಂದ