ಬಿಗಿ ಭದ್ರತೆಯಲ್ಲಿ ಲಕ್ಕವಳ್ಳಿ ಗ್ರಾಮ ಪಂಚಾಯತಿ ಚುನಾವಣೆ.
ತರೀಕೆರೆ ಜುಲೈ.29

ಶುಕ್ರವಾರ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯ ಕುರಿತು ಅಧ್ಯಕ್ಷರು ಉಪಾಧ್ಯಕ್ಷರು ಚುನಾವಣೆಗೆ ಮುನ್ನ 17 ಜನ ಸದಸ್ಯರ ಮಧ್ಯೆ ಗೊಂದಲ ಉಂಟಾಗಿ ಮುನ್ನೆಚ್ಚರಿಕೆ ಉದ್ದೇಶದಿಂದ ಡಿವೈಎಸ್ಪಿ ನಾಗರಾಜ್ ರವರು ಜಿಲ್ಲಾ ಮೀಸಲು ಪಡೆ ಮತ್ತು ತರೀಕೆರೆ ಪೊಲೀಸ್ ಸಿಬ್ಬಂದಿಗಳ ಬಿಗಿ ಭದ್ರತೆಯನ್ನು ಆಯೋಜಿಸಿದ್ದರು. ಪೊಲೀಸ್ ಬಿಗಿ ಬಂದೋಬಸ್ತಿನಲ್ಲಿ ಲಕ್ಕವಳ್ಳಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲಾಯಿತು. ಅಧ್ಯಕ್ಷರಾಗಿ ಮುಬ್ಬಿನಾ ತಾಜ್ ರವರು ಪ್ರತಿಸ್ಪರ್ಧಿ ಗಿಂತ 9 ಮತಗಳ ಅಂತರದಲ್ಲಿ ಜಯಗಳಿಸಿದರು. ಉಪಾಧ್ಯಕ್ಷರಾಗಿ ಶ್ವೇತಾ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಎಂದು ಚುನಾವಣಾ ಅಧಿಕಾರಿ ಜ್ಯೋತಿಲಕ್ಷ್ಮಿ ಸಹಾಯಕ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ತರೀಕೆರೆ ಇವರು, ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆಯನ್ನು ಘೋಷಣೆ ಮಾಡಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ