ಒಲವಿನ ಕನಸು…

ಗಿಳಿಯ ಮೂಗಿನ ಹೆಣ್ಣೆ
ನನ್ನ ಒಲವಿನ ಕನಸಿನ ಕಣ್ಣೆ
ನಾಚುವ ನವಿಲಿನ ಅಂದ
ಭೇಟಿಯಾಗು ನಾನಿರುವಲ್ಲಿಗೆ ಬಂದ
ಕಿವಿಗೆ ತಂಪು ಕೂಗಿಲೆಯ ಗಾನ
ನೀ ಬಂದು ಸೇರು ನನ್ನ ಮನ
ಹಂಚಿ ತಿನ್ನುವುದು ಕಾಗೆಯ ಗುಣ
ಬಿಟ್ಟೆ ನನ್ನೆದೆಯಲಿ ಪ್ರೇಮ ಬಾಣ
ಬಹಳ ಚಂದ ಹಂಸದ ನಡಿಗೆ
ಹಚ್ಚಿರುವೇ ನೀ ಕಣ್ಣಿಗೆ
ಕಾಡಿಗೆನನ್ನ ಪ್ರೀತಿಯ ಮಲೆನಾಡಿನ ಕೊಕ್ಕರೆ
ಪ್ರೀತಿಗೆ ಸಕ್ಕರೆ ಮನಸ್ಸಿಗೆ ಅಕ್ಕರೆ
ಅತೀ ಸೂಕ್ಷ್ಮ ಹದ್ದಿನ ಕಣ್ಣು
ಪ್ರೀತಿಯಲ್ಲಿ ನೀ ಮಾಮರದ ಹಣ್ಣು
ಪ್ರೀತಿಗೆ ಸಂಕೇತ ಪ್ರೇಮ ಪಾರಿವಾಳ
ಕಣ್ಣೆದುರು ಇರದಿದ್ದರೆ ಮನಸ್ಸು ಕಳವಳ
ಗುಬ್ಬಿಯ ಗೂಡು ಪ್ರೀತಿಗೆ ಸೂರು
ಜೊತೆಯಲಿ ಸಾಗಲಿ ಪ್ರೀತಿಯ ತೇರು
ದೇವರಷ್ಟೇ ಶ್ರೇಷ್ಠ ರತ್ನ ಪಕ್ಷಿ
ನೀ ಮರೆತರೆ ನನ್ನ ಹಾರುವುದು ಪ್ರಾಣಪಕ್ಷಿ
ಮುತ್ತು.ಯ.ವಡ್ಡರ ಶಿಕ್ಷಕರು
ಬಾಗಲಕೋಟ
Mob-9845568484