🦎 ಹಲ್ಲಿ ಬಿದ್ದ ಊಟ ಸೇವಿಸಿ ಅಸ್ವಸ್ಥಗೊಂಡ ಶಾಲಾ ವಿದ್ಯಾರ್ಥಿಗಳು, ಮುಂಜಾಗ್ರತಾ ಕ್ರಮವಾಗಿ ಔಷಧಿ ಕೊಡಿಸಿ ಧೈರ್ಯ ತುಂಬಿದ – ಶಾಸಕ ಡಾ, ಶ್ರೀ ನಿವಾಸ್.ಎನ್.ಟಿ
ಬಡೇಲಡಕು ಜು.30

ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬಡೇಲಡಕು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿ. 29-07-24 ರಂದು ಮಧ್ಯಾಹ್ನ 12-30 ಕ್ಕೆ ಎಲ್.ಕೆ.ಜಿ ಮತ್ತು ಯು.ಕೆ.ಜಿ.ಯ ಕೋರ್ಸ್ ನ 57 ವಿದ್ಯಾರ್ಥಿಗಳಲ್ಲಿ 15 ಜನ ವಿದ್ಯಾರ್ಥಿಗಳು ಹಲ್ಲಿ ಬಿದ್ದ ಸಾಂಬಾರು – ಅನ್ನ ಸೇವಿಸಿ ಅಸ್ವಸ್ಥಗೊಂಡು ವಾಂತಿ ಮತ್ತು ಹೊಟ್ಟೆ ನೋವು ಪ್ರಕರಣ ಕಾಣಿಸಿ ಕೊಂಡಿದೆ. ತಕ್ಷಣ ಮಕ್ಕಳ ಪೋಷಕರು ಅಂಬ್ಯುಲೆನ್ಸ್ ಮೂಲಕ ಕೂಡ್ಲಿಗಿ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ಅಸ್ವಸ್ಥತ ಗೊಂಡಿರುವ 15 ಜನ ವಿದ್ಯಾರ್ಥಿಗಳನ್ನು ದಾಖಲೆ ಮಾಡಿದರು. ಪಟ್ಟಣ ಪಂಚಾಯತಿ ಅಧಿಕಾರಿಗಳ ಸಭೆಯಲ್ಲಿದ್ದ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್.ಎನ್.ಟಿ. ಅವರಿಗೆ ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಯೋಗ ಕ್ಷೇಮ ವಿಚಾರಿಸಿ, ಚಾಕಲೇಟ್ ನೀಡಿ ವೈದ್ಯಾಧಿಕಾರಿಗಳು ಮತ್ತು ವೈದ್ಯರ ಸಿಬ್ಬಂದಿಗಳು ಹೆಚ್ಚಿನದಾಗಿ ನಿಗಾ ವಹಿಸಿ ಔಷಧಿಯನ್ನು ಮಕ್ಕಳಿಗೆ ನೀಡಿದರು.

ಹಾಗೆಯೇ ದೇಶ ವಿದೇಶದಲ್ಲಿರುವ ಖ್ಯಾತ ವೈದ್ಯ ಸ್ನೇಹಿತರನ್ನು ಸಂಪರ್ಕಿಸಿ ಕ್ಷೇತ್ರದಲ್ಲಿ ನಡೆದ ವಿವರಣೆಯನ್ನು ನೀಡಿ ಚಿಕಿತ್ಸೆ ಬಗ್ಗೆ ತಿಳಿದು ಕೊಂಡು ಮಕ್ಕಳ ಆರೋಗ್ಯ, ಯೋಗ – ಕ್ಷೇಮವನ್ನು ವಿಚಾರಿಸಿ ಪೋಷಕರಿಗೆ ದೈರ್ಯ ತುಂಬಿದರು. ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಹೆಚ್ಚಿನದಾಗಿ ಸಮಸ್ಯೆ ಕಂಡು ಬರದಂತೆ ನಿಗಾ ವಹಿಸಬೇಕು ಎಂದೂ ಹೇಳಿದರು. ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ, ಬಿಇಓ ಅಧಿಕಾರಿಗಳು, ಪತ್ರಕರ್ತರು, ಸ್ಥಳೀಯ ಮುಖಂಡರು, ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್ ಕೆ. ಹೊಸಹಳ್ಳಿ.