ಆಗಸ್ಟ್ 2 ರಂದು ಹಡಪದ ಅಪ್ಪಣ್ಣನವರ ಜಯಂತಿ ಮತ್ತು ಸನ್ಮಾನ ಸಮಾರಂಭ.
ಹುನಗುಂದ ಜುಲೈ.30
ಶಿವಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಅಭಿವೃದ್ದಿ ಸಂಘದಿಂದ ಆ.2 ರಂದು ಬುಧವಾರ ಪಟ್ಟಣದ ಕೇಂದ್ರ ಶಾಲೆಯ ಹಿಂದಗಡೆ ಇರುವ ಹಡಪದ ಅಪ್ಪಣ್ಣ ಸಮುದಾಯ ಭವನದಲ್ಲಿ ಹಡಪದ ಅಪ್ಪಣ್ಣನವರ 889 ನೆಯ ಜಯಂತೋತ್ಸವ ಹಾಗೂ ಸನ್ಮಾನ ಸಮಾರಂಭ ಜರುಗಲಿದೆ.

ಚಿತ್ತರಗಿ ಸಂಸ್ಥಾನ ಮಠದ ಗುರುಮಹಾಂತ ಸ್ವಾಮಿಗಳು,ತಂಗಡಗಿ ಹಡಪದ ಅಪ್ಪಣ್ಣದೇವರ ಮಹಾಸಂಸ್ಥಾನಮಠದ ಅನ್ನದಾನ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳು,ಪಟ್ಟದಕಲ್ಲನ ಬಸವರಾಜೇಂದ್ರ ಮಹಾಸ್ವಾಮಿಗಳು,ಹುನಗುಂದದ ವೇ.ಮೂ.ಮಹಾಂತಯ್ಯ ಗಚ್ಚಿನಮಠ ಇವರು ದಿವ್ಯ ಸಾನಿದ್ಯವನ್ನು ವಹಿಸಿಕೊಳ್ಳಲಿದ್ದಾರೆ.ಶಾಸಕ ವಿಜಯಾನಂದ ಕಾಶಪ್ಪನವರ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದು.ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಎಸ್.ಆರ್,ನವಲಿಹಿರೇಮಠ ಜ್ಯೋತಿ ಬೆಳಗಿಸಲಿದ್ದಾರೆ.ಉಪನ್ಯಾಸಕ ಸಮೀರ್ ಸರಕಾವಸ್ ಉಪನ್ಯಾಸವನ್ನು ನೀಡಿಲಿದ್ದು.ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ. ಬಂಡರಗಲ್ಲ