ಅಂಬಳಿಯಲ್ಲಿ ಬೇವೂರು ಮಾರ್ಗವಾಗಿ ಹೋಗುವ ರಸ್ತೆಯ ದುಸ್ಥಿತಿ.
ಅಂಬಳಿ ಆಗಷ್ಟ.1

ಕೊಟ್ಟೂರು ತಾಲ್ಲೂಕಿನ ಅಂಬಳಿಯ ಆಶ್ರಯ ಕಾಲೋನಿಯ ಮಧ್ಯೆ ಇರುವ ಹದಗೆಟ್ಟಿರುವ ರಸ್ತೆಯಲ್ಲಿ ದಿನಾಲು ನೂರಾರು ಜನರು ತಮ್ಮ ಕೆಲಸ ಕಾರ್ಯಗಳಿಗೆ ಓಡಾಡುತ್ತಿದ್ದು ಅದು ಅಲ್ಲದೆ ಬೇವೂರು ಗ್ರಾಮದ ಪ್ರೌಢಶಾಲಾ ವಿದ್ಯಾರ್ಥಿಗಳು ಇಲ್ಲಿ ದಿನಾಲು ಸಂಚರಿಸುತ್ತಿದ್ದು.ಅಂಬಳಿ ಗ್ರಾಮದ ಸಾರ್ವಜನಿಕರು ತಮ್ಮ ವ್ಯಾಪಾರ ವಹಿವಾಟುಗಳಿಗೆ ಕೊಟ್ಟೂರಿಗೆ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದು ಪ್ರಸ್ತುತ ಮಳೆಗಾಲದಲ್ಲಿ ಈ ರಸ್ತೆ ಸಂಚಾರಕ್ಕೆ ಯೋಗ್ಯವಾಗಿಲ್ಲ ಮತ್ತು ತೀರ ದುಸ್ಥಿತಿ ಉಂಟಾಗಿದೆಈ ರಸ್ತೆಯಲ್ಲಿ ಇಲ್ಲಿಯವರೆಗೆ ಹತ್ತಾರು ಮೋಟರ್ ಸೈಕಲ್ ವಾಹನಗಳ ಸವಾರರು ಅಪಘಾತಕ್ಕೆ ಒಳಗಾಗಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನ ಹರಸದೆ ಈ ರಸ್ತೆಯನ್ನು ಸರಿಪಡಿಸಿ ಗೊಳಸಬೇಕೆಂದು.ಅಂಬಳಿ ಗ್ರಾಮದ ಸಾರ್ವಜನಿಕರು ಒತ್ತಾಯಿಸಿದ್ದಾರೆ.ಇದರ ಬಗ್ಗೆ ಅಸಡ್ಡೆ ತೋರಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸಾರ್ವಜನಿಕರು ಮತ್ತು ಕೊಟ್ಟೂರು ತಾಲೂಕು ಜೆಡಿಎಸ್ ಅಧ್ಯಕ್ಷರಾದಂತ ಸೋಮಶೇಖರ್ ಇವರು ಪತ್ರಿಕೆಗೆ ತಿಳಿಸಿದ್ದಾರೆ..
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು