ಧನ್ನೂರ ಗ್ರಾಮ ಪಂಚಾಯತಿ ಕಾಂಗ್ರೇಸ್ ಮಡಿಲಿಗೆ.
ಧನ್ನೂರ ಆಗಷ್ಟ.1

ಹುನಗುಂದ ತಾಲೂಕಿನ ಧನ್ನೂರ ಗ್ರಾಮ ಪಂಚಾಯತಿಯ ೨ನೆಯ ಅವಧಿಯ ನೂತನ ಅಧ್ಯಕ್ಷರಾಗಿ ಸಂಗಮ್ಮ ಬಾಲಪ್ಪ ಶಿರಹಟ್ಟಿ ಉಪಾಧ್ಯಕ್ಷರಾಗಿ ನಸ್ತುಸಾ ಉರ್ಪ ನಜೀರುದ್ದಿನ್ ಕಾಶಿಮಸಾಮ ಮುಲ್ಲಾ ತಲಾ ೯ ಮತಗಳನ್ನು ಪಡೆಯುವ ಮೂಲಕ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಆರ್.ಎನ್.ಪುರೋಹಿತ ಘೋಷಿಸಿದರು.ಮಂಗಳವಾರ ನಿಗಧಿಯಾದ ೨ನೆಯ ಅವಧಿಯ ಅದ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮೀಸಲಿದ್ದರೇ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ ಕ್ಕೆ ಮೀಸಲಾಗಿತ್ತು.ಕಾಂಗ್ರೆಸ್ ಬೆಂಬಲಿತ ೯ ಸದಸ್ಯರು ಮತ್ತು ಎಸ್‌ಆರ್‌ಎನ್ ಓರ್ವ ಸದಸ್ಯರ ಪರವಾಗಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸಂಗಮ್ಮ ಶಿರಹಟ್ಟಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಸ್ತುಸಾ ಉರ್ಪ ನಜೀರುದ್ದಿನ್ ಮುಲ್ಲಾ ನಾಮಪತ್ರ ಸಲ್ಲಿಸಿದರೇ ಬಿಜೆಪಿ ಬೆಂಬಲಿತ ಸದಸ್ಯರಲ್ಲಿ ಸುವರ್ಣ ಮಠಪತಿ ಮತ್ತು ಶಾಂತಮ್ಮ ಪೂಜಾರಿ ನಾಮಪತ್ರ ಸಲ್ಲಿಸಿದರು.ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅಭ್ಯರ್ಥಿಗಳಿಗೆ ತಲಾ ೯ ಮತಗಳನ್ನು ಪಡೆದುಕೊಳ್ಳುವ ಮೂಲಕ ಜಯ ಸಾಧಿಸಿದರೇ ಇತ್ತ ಬಿಜೆಪಿ ಬೆಂಬಲಿತರು ಮೂರು ಮತಗಳಿಂದ ಸೋಲನ್ನು ಅನುಭವಿಸಿದರು.ಸಂಭ್ರಮಾಚರಣೆ-ಕಾಂಗ್ರೆಸ್ ಬೆಂಬಲ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್ ರೈತ ಘಟಕ ತಾಲೂಕಾಧ್ಯಕ್ಷ ಹಾಗೂ ತಾ.ಪಂ ಮಾಜಿ ಉಪಾಧ್ಯಕ್ಷ ಶಂಕ್ರಪ್ಪ ನೇಗಲಿ ನೇತೃತ್ವದಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಅಭಿನಂದನೆಗಳನ್ನು ಸಲ್ಲಿಸಿ ಸಿಹಿ ಹಂಚಿ,ಪರಸ್ಪರು ಗುಲಾಲು ಎರಚಿ,ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.ಈ ವೇಳೆ ಮುಖಂಡರಾದ ಪಂಚಯ್ಯ ಹಿರೇಮಠ,ಅಂದಾನಪ್ಪ ಶಿರಹಟ್ಟಿ,ಸಕ್ರಪ್ಪ ಹೂಗಾರ,ಬಸವರಾಜ ಹುದ್ದಾರ,ಅರವಿಂದಪ್ಪ ಕಟ್ಟಿಮನಿ,ಮಹಾಂತಗೌಡ ಪಾಟೀಲ,ಇಬ್ರಾಹಿಂಸಾಬ ಕುಂಟೋಜಿ,ಆನAದ ಶಿರಹಟ್ಟಿ,ರಮೇಶ ಕುಲಕರ್ಣಿ,ವೀರಪ್ಪ ಪಟ್ಟನಶೆಟ್ಟಿ,ವಾಯ್.ಎಚ್.ಹಾದಿಕರ,ಅಶೋಕ ಬಡಿಗೇರ,ಆಜಿಫೀರಾ ಪಿರಜಾಧೆ,ವಿಜಯಕುಮಾರ ಹುದ್ದಾರ,ಬಸವರಾಜ ಕಟ್ಟಿಮನಿ ಸೇರಿದಂತೆ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ ಸದಸ್ಯರು ಇದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ. ಬಂಡರಗಲ್ಲ