ರಕ್ತದಾನ ದೇಹದ ಚೈತನ್ಯ ಮತ್ತು ಹೊಸ ರಕ್ತ ಉತ್ಪತಿಗೆ ಸಹಕಾರಿ.
ಹುನಗುಂದ ಆಗಷ್ಟ.1

ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವ ಕನಸ್ಸು ಕಂಡ ಲಿಂ.ಡಾ.ಮಹಾಂತ ಸ್ವಾಮೀಜಿಯವರ ದುಶ್ಚಟಗಳನ್ನು ಜೋಳಿಗೆ ಹಾಕಿರಿವೆಂದು ಜನರನ್ನು ಜಾಗೃತಿಗೊಳಿಸಿದರು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಹನಮಂತರಾವ್ ಆರ್. ಕುಲಕರ್ಣಿ ಹೇಳಿದರು.ಪಟ್ಟಣದ ಬಸವ ಮಂಟಪದಲ್ಲಿ ವಿಜಯ ಮಹಾಂತ ರಕ್ತ ನಿಧಿ ಮತ್ತು ವಿವಿದ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಲಿಂ,ಡಾ.ಮಹಾಂತ ಸ್ವಾಮಿಗಳ ೯೩ನೇ ವರ್ಷದ ಹುಟ್ಟು ಹಬ್ಬದ ನಿಮಿತ್ಯ ಹಮ್ಮಿಕೊಂಡಿದ್ದ ರಕ್ತ ಗುಂಪು ತಪಾಸಣೆ ಮತ್ತು ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ವ್ಯಸನ ಮುಕ್ತವಾದರೇ ಸುಂದರ ಮತ್ತು ಆರೋಗ್ಯಯುತ ಸಮಾಜ ನಿರ್ಮಾಣವಾಗಲಿದೆ.ಇಂದು ಯುವಕರು ಚಿಕ್ಕ ವಯಸ್ಸಿನಲ್ಲಿಯೇ ಅನೇಕ ಚಟಗಳ ದಾಸರಾಗಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದು.ದುಶ್ಚಟಗಳಿಂದ ದೂರವಿದ್ದು ಆರೋಗ್ಯಯುತವಾಗಿ ರಕ್ತ ದಾನ ಮಾಡಬೇಕು ಎಂದರು. ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ ದೇಹದಲ್ಲಿ ಕಬ್ಬಿಣಾಂಶ ಮತ್ತು ರಕ್ತ ಹೆಚ್ಚಿದಾಗ ಅಂತವರು ರಕ್ತದಾನಕ್ಕೆ ಮುಂದಾಗಬೇಕು.ಇದರಿಂದ ಹೊಸ ರಕ್ತ ಉತ್ಪತ್ತಿಯಾಗುವುದಲ್ಲದೆ ಸದಾ ಕ್ರಿಯಾಶೀಲರಾಗಿರಲು ಸಾಧ್ಯ.ರಕ್ತದಾನ ಮಾಡಲು ಯಾವುದೆ ಭಯಪಡಬೇಕಾಗಿಲ್ಲ ಎಂದರು.ಡಾ.ಮಹಾಂತೇಶ ಕಡಪಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ದೇಶದಲ್ಲಿ ಅವಶ್ಯಕತೆಗಿಂತ ಶೇ. ೩೦ರಷ್ಟು ರಕ್ತ ಸಂಗ್ರಹದ ಕೊರತೆ ಇದ್ದು,ಆರೋಗ್ಯವಂತರು ರಕ್ತದಾನ ಮಾಡುವುದರಿಂದ ದೇಹದ ಚೈತನ್ಯ ಹೊಂದಲು ಮತ್ತು ಮತ್ತೊಬ್ಬರಿಗೆ ಜೀವದಾನ ಮಾಡಿದಂತಾಗುತ್ತದೆ.ಶೈಕ್ಷಣಿಕ ಹಂತದಲ್ಲಿ ಯುವಕ-ಯುವತಿಯರು ರಕ್ತದಾನ ಕಾರ್ಯಕ್ಕೆ ಮುಂದಾಗಿ ಮತ್ತೊಬ್ಬರಿಗೆ ಮಾದರಿಯಾಗಬೇಕು ಎಂದರು.ಮಹಾಂತ ತೀರ್ಥ ಶಿರೂರಿನ ಡಾ. ಬಸವಲಿಂಗ ಸ್ವಾಮೀಜಿ ಮಾತನಾಡಿದರು,ಡಾ.ಬಸವಚೇತನ ಸ್ವಾಮೀಜಿ, ವಕೀಲರ ಸಂಘದ ಅಧ್ಯಕ್ಷ ಪ್ರಕಾಶ ಕಠಾಣಿ,ಪ್ರಶಾಂತ ದೇಸಾಯಿ,ಜಿ.ಎಸ್.ಗೌಡರ,ವಿ.ಮ ಸಂಸ್ಥೆ ನಿರ್ದೇಶಕರಾದ ರವಿ ಹುಚನೂರ,ಬಸವರಾಜ ಕೆಂದೂರ,ಸಂಗಣ್ಣ ಚಿನಿವಾಲರ,ವೀರಣ್ಣ ಬಳೂಟಗಿ,ಅರುಣೋದಯ ದುದ್ಗಿ,ಮುಖಂಡರಾದ ಬಸವರಾಜ ರಕ್ಕಸಗಿ, ಪ್ರವೀಣ ಹಳಪೇಟಿ,ಮಲ್ಲು ಲೆಕ್ಕಿಹಾಳ,ಈರಣ್ಣ ಅಂಗಡಿ, ಡಾ.ಗೊಂಗಡಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಹಲವಾರು ಶಿಕ್ಷಕರು,ವಿಧ್ಯಾಥಿಗಳು ರಕ್ತ ತಪಾಸಣೆ ಮಾಡಿಸಿಕೊಳ್ಳುವದರೊಂದಿಗೆ ರಕ್ತದಾನ ಮಾಡಿದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ. ಬಂಡರಗಲ್ಲ