*ಪತ್ರಕರ್ತರು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮಾರ್ಗದರ್ಶಕರು*.
ಕೂಡ್ಲಿಗಿ ಆಗಷ್ಟ.2

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಹಿರೇಮಠ ಸಮುದಾಯ ಭವನದಲ್ಲಿ ಸೋಮವಾರoದು ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕ ಕೂಡ್ಲಿಗಿ ವತಿಯಿಂದ ” ಪತ್ರಿಕಾ ದಿನಾಚರಣೆ ” ಸಮಾರಂಭದಲ್ಲಿ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದಂತ ಶ್ರೀ ಷ.ಬ್ರ. ಪ್ರಶಾಂತ್ ಸಾಗರ್ ಶಿವಾಚಾರ್ಯ ಸ್ವಾಮೀಜಿಗಳು ಹಿರೇಮಠ ಸಂಸ್ಥಾನ ಕೂಡ್ಲಿಗಿ ಹಾಗೂ ಐಮಡಿ ಶರಣಚಾರ್ಯರು ಧರ್ಮಾಧಿಕಾರಿಗಳು ದಾಸೋಹ ಮಠ ಕಾನಾಮಡಗು ವಹಿಸಿದ್ದು ಹಾಗೂ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್ ಎನ್. ಟಿ. ಅವರು ಕಾರ್ಯಕ್ರಮವನ್ನು ಸಸಿಗಳಿಗೆ ನೀರೆರುವುದರ ಮೂಲಕ ಉದ್ಘಾಟನೆ ಮಾಡಿದರು.

ಕರ್ನಾಟಕದ ಕೂಡ್ಲಿಗಿ ಮತ ಕ್ಷೇತ್ರದಿಂದ ಮೊದಲ ಬಾರಿಗೆ ನಾನು ರಾಜಕೀಯಕ್ಕೆ ಪ್ರವೇಶಿಸಿರುವುದನ್ನು ಮೊದಲ ಬಾರಿಗೆ ವೈದ್ಯಕೀಯ ಕ್ಷೇತ್ರದಿಂದ ಸಾಮಾಜಿಕ ಸೇವೆಯ ಕುರಿತು ವರದಿಯ ಮಾಡಿದ್ದರು ಆ ಒಂದು ವರದಿಯು ರಾಜಕೀಯ ಪ್ರವೇಶಕ್ಕೂ ಕಾರಣವಾಗಿತ್ತು ಎಂದು ವೇದಿಕೆಯ ಮೂಲಕ ದಿವಂಗತ ಪತ್ರಕರ್ತರಾದ ಹಿ. ಮ. ಬಸವರಾಜ ಅವರನ್ನು ನೆನಪಿಸಿಕೊಳ್ಳುತ್ತೇನೆ ಎಂದೂ ಹೇಳಿದರು. ಕಡಿಮೆ ಸಮಯದಲ್ಲಿ ಹೆಚ್ಚು ಮತಗಳ ಅಂತರದಿಂದ ಗೆದ್ದು ಶಾಸಕರಾಗಿರುವುದರಿಂದ ರಾಷ್ಟ್ರೀಯ ಮಾಧ್ಯಮಗಳು ನನ್ನನ್ನೂ ಪರಿಚಯಿಸಲು ಆಹ್ವಾನಿಸಿರುವುದು ಸಂತೋಷದ ವಿಷಯ ಎಂದೂ ಹೇಳಿದರು.

ಈ ಸಂದರ್ಭದಲ್ಲಿ ಕೂಡ್ಲಿಗಿ ಭಾಗದ ಪತ್ರಕರ್ತರ ಕಟ್ಟಡ ನಿರ್ಮಾಣಕ್ಕಾಗಿ ಸರಕಾರದಿಂದ ಹತ್ತು ಲಕ್ಷ ರೂಪಾಯಿಗಳನ್ನು ಮೀಸಲು ಇಡುತ್ತೇನೆ ಎಂದೂ ತಿಳಿಸಿದರು. ಈ ಸಂದರ್ಭದಲ್ಲಿ ಕೂಡ್ಲಿಗಿ ತಾಲೂಕಿನ ವಿವಿಧ ಸೇವೆಗಳ ರಂಗಗಳಲ್ಲಿ ಸೇವೆಗೈದ ಸಾಧಕರಿಗೆ ಸನ್ಮಾನ ಮಾಡಲಾಯಿತು. ವೇದಿಕೆಯಲ್ಲಿ ಕಾನಿಪ ಸಂಘದ ವಿಜಯನಗರ ಜಿಲ್ಲಾಧ್ಯಕ್ಷರಾದ ಪಿ ಸತ್ಯನಾರಾಯಣ ಹಾಗೂ ಕಾನಿಪ ತಾಲೂಕ ಅಧ್ಯಕ್ಷರಾದ ಮಯೂರ ಮಂಜುನಾಥ ಹಾಗೂ ಅನೇಕ ಗಣ್ಯ ಮಾನ್ಯರು, ಪತ್ರಕರ್ತರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನಿ. ಕೂಡ್ಲಿಗಿ