ಮೊರಬ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ವಿ.ದುರುಗಮ್ಮ.ಉಪಾಧ್ಯಕ್ಷರಾಗಿ ಸಿಪಿಐ ಪಕ್ಷದ ಕಾರ್ಯದರ್ಶಿ ಕರಿಯಪ್ಪ ಆಯ್ಕೆ.
ಕೂಡ್ಲಿಗಿ ಆಗಷ್ಟ.2

ತಾಲ್ಲೂಕಿನ ಮೊರಬ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು.ಅಧ್ಯಕ್ಷರಾಗಿ ವಿ.ದುರುಗಮ್ಮ ಹಾಗೂ ಉಪಾಧ್ಯಕ್ಷರಾಗಿ ಕರಿಯಪ್ಪ ಅವಿರೋಧವಾಗಿ ಅಯ್ಕೆಯಾಗಿದ್ದಾರೆ.ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮೊರಬ ಗ್ರಾಮದ 1ನೇ ವಾರ್ಡಿನ ಸದಸ್ಯ ವಿ. ದುರುಗಮ್ಮ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೊರಬನಹಳ್ಳಿ ಗ್ರಾಮದ 3ನೇ ವಾರ್ಡಿನ ಕರಿಯಪ್ಪ ಅವರು ಮಾತ್ರ ನಾಮ ಪತ್ರ ಸಲ್ಲಿಸಿದ್ದರು.ಇವರಿಗೆ ಸದಸ್ಯ ಜಿ. ಗೌರಮ್ಮ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಬಿ. ಕವಳಪ್ಪ ಸೂಚಕರಾಗಿದ್ದರು.ಅಧ್ಯಕ್ಷ ಸ್ಥಾನಕ್ಕೆ ವಿ.ದುರುಗಮ್ಮ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕರಿಯಪ್ಪ ಮಾತ್ರ ನಾಮ ಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾಗಿದ್ದ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಮಹೆಬೂಬ್ ಬಾಷಾ ಅರೀಸಿಕೆರೆ ಅವರು ಘೋಷಣೆ ಮಾಡಿದರು.ಸಿಪಿಐ ಪಕ್ಷ ಬೆಂಬಲಿತ ಸದಸ್ಯ ಉಪಾಧ್ಯಕ್ಷ.ತಾಲ್ಲೂಕಿನ ಗ್ರಾಮ ಪಂಚಾಯ್ತಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಿಪಿಐ ಪಕ್ಷದ ಬೆಂಬಲಿತ ಸದಸ್ಯ ಕರಿಯಪ್ಪ ಅವರು ಮೊರಬ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕರಿಯಪ್ಪ ಹಾಲಿ ಸಿಪಿಐ ಪಕ್ಷದ ತಾಲ್ಲೂಕು ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಈ ಸಮಯದಲ್ಲಿ ಮರಬ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಹಾಗೂ ನೈರ್ಮಲ್ಯಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗುವುದು ಎಂದು ತಾಲ್ಲೂಕಿನ ಮೊರಬ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಿ. ದುರುಗಮ್ಮ ಹೇಳಿದರು. ಅವರು ಗ್ರಾಮ ಪಂಚಾಯ್ತಿ ಅಧ್ಯಕ್ಷೆಯಾಗಿ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರ ಸಹಕಾರದಿಂದ ನಾನು ಅಧ್ಯಕ್ಷೆಯಾಗಿ ಅಯ್ಕೆಯಾಗಿದ್ದೇನೆ. ಪಂಚಾಯ್ತಿಯ ಎಲ್ಲ ಸದಸ್ಯರ ಸಹಕಾರದಿಂದ ಪ್ರತಿ ವಾರ್ಡಿನಲ್ಲಿಯೂ ಸಮರ್ಪಕ ನೀರು ಪೂರೈಕೆ ಹಾಗೂ ಸ್ವಚ್ಛತೆಗೆ ಅಧ್ಯತೆ ನೀಡಲಾಗುವುದು. ಉಳಿದ ಕೆಲಸವನ್ನು ಅಧ್ಯತೆ ಮೇಲೆ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.ಉಪಾಧ್ಯಕ್ಷ ಕರಿಯಪ್ಪ ಹಾಗೂ ಸದಸ್ಯರು ಇದ್ದರು.ಚುನಾವಣಾ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿಯ ಸದಸ್ಯರಾದ ಮಹಬಾಷಾ, ಮಠದ ಗುರುರಾಜ, ಲಕ್ಷ್ಮೀ ಮಲ್ಲಾಪುರದ, ಜಿ. ಗೌರಮ್ಮ, ಪದ್ಮಾವತಿ, ಕೆ., ತಳವಾರ ಹನುಮಂತಪ್ಪ, ರತ್ನಮ್ಮ, ಕವಳಪ್ಪ ಬಿ., ಸಣ್ಣ ತಿಪ್ಪಮ್ಮ, ಬೀಬಿ ಜಾನ್ ಹಾಗೂ ಅಂಜಿನಪ್ಪ,ಕೆ., ಮತ್ತು ಪಂಚಾಯ್ತಿ ಅಧಿಕಾರಿ ಬಿ.ಎನ್. ಭಾಗ್ಯಮ್ಮ ಹಾಗೂ ಸಿಬ್ಬಂದಿ ಇದ್ದರು. ಮುಖಂಡರಾದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಿವಣ್ಣ, ಅದಿಮನೆ ವೀರಣಯ, ಬಸವರಾಜ, ಮುನ್ನ, ರಾಜವಲಿ, ಹನುಮಂತ, ಅಜುಮುಲ್ಲಿ, ಭೀಮಣ್ಣ, ಎಂ. ಅಜೇಯಕುಮಾರ್, ನಾಗರಾಜ ಇದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನಿ. ಕೂಡ್ಲಿಗಿ