ವಿದ್ಯಾರ್ಥಿಗಳು ದುಶ್ಚಟಕ್ಕೆ ಬಲಿಯಾಗದೆ ಒಳ್ಳೆಯ ಶಿಸ್ತು ಮತ್ತು ಉತ್ತಮ ಅಧ್ಯಯನವನ್ನು ರೂಢಿಸಿಕೊಳ್ಳಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಬಹಳ ಮಹತ್ವದ್ದು : ಶಾಸಕ ಕಾಶಪ್ಪನವರ..
ಹುನಗುಂದ ಆಗಷ್ಟ.2

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಬಹಳ ಮಹತ್ವವನ್ನು ಪಡೆದುಕೊಂಡಿದ್ದು.ಜನರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವಂತೆ ಕಾಲೇಜು ಒಕ್ಕೂಟಕ್ಕೆ ನಿಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮೂಲಕ ಚುನಾವಣೆಯ ಬಗ್ಗೆ ಅರಿತುಕೊಂಡಿದ್ದೀರಿ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.ಬುಧವಾರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ೨೦೨೩-೨೪ ನೆಯ ಸಾಲಿನ ಕಾಲೇಜು ಒಕ್ಕೂಟ ಮತ್ತು ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಚಟುವಟಿಕೆಗಳ ಉದ್ಘಾಟಿನೆ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿ ಜೀವನದಲ್ಲಿ ದುಶ್ಚಟಗಳಿಗೆ ಬಲಿಯಾಗದೇ ಒಳ್ಳೆಯ ಶಿಸ್ತು ಬದ್ದತೆ ಮತ್ತು ಉತ್ತಮ ಅಧ್ಯಯನ ಮಾಡುವ ಮೂಲಕ ಕಾಲೇಜನ ಘನತೆ ಗೌರವ ತರಬೇಕು.ಕಳೆದ ಶಾಸಕ ಅವಧಿಯಲ್ಲಿ ಪಿಯು ಕಾಲೇಜಿಗೆ ಎರಡು ಕೊಠಡಿಗಳ ನಿರ್ಮಾಣ ಮಾಡಲಾಗಿದೆ.ಸಧ್ಯ ಕಾಲೇಜನಲ್ಲಿ ವಿದ್ಯಾರ್ಥಿಗಳ ಮೂಲಭೂತ ಸೌಲಭ್ಯ ಸೇರಿದಂತೆ ಏನೆಲ್ಲಾ ಕೊರತೆಗಳಿವೆಯೋ ಅವುಗಳ ಬಗ್ಗೆ ಸರ್ಕಾರ ಮತ್ತು ಶಿಕ್ಷಣ ಸಚಿವರಿಗೆ ಗಮನಕ್ಕೆ ತಂದು ಶೀಘ್ರದಲ್ಲಿಯೇ ಸೌಲಭ್ಯಗಳನ್ನು ಒದಗಿಸಿಕೊಡುವ ಪ್ರಾಮಾಣಿಕ ಕೆಲಸವನ್ನು ಮಾಡುತ್ತೇನೆ ಎಂದರು.ಸರ್ಕಾರ ಪ್ರಥಮ ದರ್ಜೆ ಕಾಲೇಜ ಪ್ರಾಚಾರ್ಯ ಪ್ರೋ.ನಾಗರಾಜ ಮುದಗಲ್ಲ ಮಾತನಾಡಿ ಮಾಜಿ ಸಚಿವ ಲಿಂ.ಎಸ್.ಆರ್.ಕಾಶಪ್ಪನವರ ಹುನಗುಂದದಲ್ಲಿ ಶಿಕ್ಷಣ ಕ್ರಾಂತಿಯ ಕನಸ್ಸು ಕಂಡು ಸರ್ಕಾರಿ ಪ್ರೌಢ ಶಾಲೆಯ ಆರಂಭಕ್ಕೆ ನೀಲನಕ್ಷೆಯನ್ನು ಹಾಕುವ ಮೂಲಕ ಇಂದು ಇಷ್ಟು ದೊಡ್ಡ ಮಟ್ಟದಲ್ಲಿ ಶಿಕ್ಷಣ ವ್ಯವಸ್ಥೆ ಬೆಳೆಯಲು ಕಾರಣವಾಗಿದ್ದಾರೆ.ವಿದ್ಯಾರ್ಥಿಗಳು ಓದಿಗೆ ಒಂದು ಗುರಿ ಮತ್ತು ಛಲ ಅದರ ಜೊತೆಗೆ ಪ್ರಯತ್ನಬೇಕು ಮತ್ತು ನಿಮ್ಮಲ್ಲಿ ಕಲಿಯಬೇಕೆನ್ನುವ ಆತ್ಮವಿಶ್ವಾಸವಿದ್ದರೇ ಮಾತ್ರ ಉಜ್ವಲ ಭವಿಷ್ಯವನ್ನು ಪಡೆಯಲು ಸಾಧ್ಯ ಎಂದರು.ಈ ಸಂದರ್ಭದಲ್ಲಿ ೨೦೨೩-೨೪ ನೆಯ ಸಾಲಿನ ಕಾಲೇಜು ಒಕ್ಕೂಟ ಮತ್ತು ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಬೋರ್ಡ್ನ್ನು ಅನಾವರಣಗೊಳಿಸಿದರು ಮತ್ತು ಕನ್ನಡ ಸಾಹಿತ್ಯ ಪರಿಷತ್‌ನ ದತ್ತಿ ಉಪನ್ಯಾಸ ಪ್ರಶಸ್ತಿಗೆ ಆಯ್ಕೆಯಾದ ಶರಣಪ್ಪ ಹೂಲಗೇರಿ ಅವರನ್ನು ಸನ್ಮಾನಿಸಲಾಯಿತು.ಕಾಲೇಜು ಒಕ್ಕೂಟಕ್ಕೆ ಆಯ್ಕೆಯಾದ ಪ್ರತಿನಿಧಿಗಳಿಗೆ ಉಪನ್ಯಾಸಕಿ ಛಾಯಾ ಪುರಂದರೆ ಅವರು ಪ್ರತಿಜ್ಞಾವಿಧಿ ಬೋಧಿಸಿದರು.ವೇದಿಕೆಯಲ್ಲಿ ಶಿಕ್ಷಕ ಹಾಗೂ ಸಾಹಿತಿ ಎಸ್.ಕೆ,ಕೊನೆಸಾಗರ,ಬಸವರಾಜ ಶಿರೂರ,ಸಿದ್ದಲಿಂಗಪ್ಪ ಬೀಳಗಿ ಸೇರಿದಂತೆ ಅನೇಕರು ಇದ್ದರು,ಪ್ರಾಚಾರ್ಯ ಎ,ಎಚ್.ಮೋಮಿನ್ ಸ್ವಾಗತಿಸಿದರು.ಉಪನ್ಯಾಸಕ ಶರಣಪ್ಪ ಹೂಲಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು,ಉಪನ್ಯಾಸಕ ಡಾ.ಎನ್.ವಾಯ್,ನದಾಫ್ ನಿರೂಪಿಸಿ ಉಪನ್ಯಾಸಕ ಎಚ್.ಟಿ.ಅಗಸಿಮುಂದಿನ ವಂದಿಸಿದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ. ಬಂಡರಗಲ್ಲ