ಉತ್ತಮ ಸೇವೆ ಒದಗಿಸಿರುವ ತೃಪ್ತಿ ನನಗಿದೆ — ತಹಸೀಲ್ದಾರ್ ಎಂ.ಕುಮಾರಸ್ವಾಮಿ.

ಕೊಟ್ಟೂರು ಆಗಷ್ಟ.3

ತಾಲೂಕು ಕಚೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಸರ್ಕಾರ ಯೋಜನೆಗಳ ಅನುಷ್ಠಾನ, ಆನ್ ಲೈನ್ ಸೇವೆ, ಸಾರ್ವಜನಿಕರ ಸಮಸ್ಯೆಗೆ ಸ್ಪಂದನೆ ಜಿಲ್ಲೆಯಲ್ಲಿ ಕೊಟ್ಟೂರು ತಾಲೂಕು ಮಾದರಿ ಆಗಿದೆ ನಾನು ಒಂದೂವರೆ  ವರ್ಷದಲ್ಲಿ ನಿರ್ಗತಿಕ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಅಸಹಾಯಕರಿಗೆ ಉತ್ತಮ ಸೇವೆ ಒದಗಿಸಿದ್ದೇನೆ ಎಂಬ ತೃಪ್ತಿಯಿದೆ ಎಂದು ಕಾರಟಗಿಗೆ ವರ್ಗಾವಣೆಗೊಂಡ ತಹಸೀಲ್ದಾರ್ ಎಂ. ಕುಮಾರಸ್ವಾಮಿ ಮಾತನಾಡಿದರು.ತಾಲೂಕಿನಲ್ಲಿ ಖಾಸಗಿ ಒಡೆತನದಲ್ಲಿದ್ದ 35 ಎಕರೆ ಸರ್ಕಾರಿ ಭೂಮಿಯನ್ನು ಕಂದಾಯ ಇಲಾಖೆಗೆ ಸೇರ್ಪಡೆಗೊಳಿಸಿದ್ದೇನೆ ಎಂದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೊಟ್ಟೂರು ತಾಲೂಕು ಅಧ್ಯಕ್ಷ ಕೆ ಕೊಟ್ರೇಶ್ ಹಾಗೂ ಹಿರಿಯ ಪತ್ರಕರ್ತರಾದ ಜಿ ಸೋಮಶೇಖರ್, ದೇವರ ಮನೆ ಸುರೇಶ್, ಕೆ ಎಂ ಚಂದ್ರಶೇಖರ್ ,ರವಿಕುಮಾರ್, ತಗ್ಗಿನಕೇರಿ ಕೊಟ್ರೇಶ್,ಬಂದಾತರ ಕೊಟ್ರೇಶ್, ಪರಶುರಾಮ್ ಸುಲೇಕೆ, ಉತ್ತಂಗಿ ಕೊಟ್ರೇಶ್,ಇವರಗಳೆಲ್ಲರೂ ಸಂಘದ ವತಿಯಿಂದ ನೆನಪಿನ ಕಾಣಿಕೆ, ಹಾರ ಶಾಲುವದಿಸಿ  ಸನ್ಮಾನಿಸಿದರು ಹಾಗೂ ಬೀಳ್ಕೊಡುಗೆಯ ಅಭಿನಂದನೆಗಳು ತಿಳಿಸಿದರುಈ ಸಂದರ್ಭದಲ್ಲಿ ಕೊಟ್ಟೂರು ಪ್ರಭಾರಿ ತಹಸೀಲ್ದಾರ್ ಅಮರೀಶ ಜಾಲಹಳ್ಳಿ, ವರ್ಗಾವಣೆಗೊಂಡ ತಹಸೀಲ್ದಾರ್ ಎಂ. ಕುಮಾರಸ್ವಾಮಿ, ಆರ್ ಐ ಹಾಲಸ್ವಾಮಿ, ಸಿರಾಜುದ್ದೀನ್, ವಿಎ ಕೊಟ್ರೇಶ್, ವಿಎ ಹರೀಶ್, ಹರಪನಹಳ್ಳಿ ರವಿ, ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ವರ್ಗದವರು ಹಾಗೂ ಪಪಂ ಮುಖ್ಯಾಧಿಕಾರಿ ನಸರುಲ್ಲಾ ಇತರರಿದ್ದರು.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button