ಬಿಜೆಪಿ ಮಾಜಿ ಸಚಿವ ಅರಗ ಜ್ಞಾನೇಂದ್ರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು ಮಾಡುವಂತೆ ಬಾಬಾ ಸಾಹೇಬ ಡಾll ಬಿ.ಆರ್.ಅಂಬೇಡ್ಕರ್ ಸಂಘದಿಂದ ಒತ್ತಾಯಿಸಿ ತಹಶೀಲ್ದಾರ್ ಮುಖಾಂತರ ಗೃಹ ಸಚಿವರಿಗೆ ಮನವಿ.
ಹೊಸಪೇಟೆ ಆಗಷ್ಟ. 3

ಅಂಬೇಡ್ಕರ್ ಸರ್ಕಲ್ ನಿಂದ ಕಾಲ್ನಾಡಿಗೆ ಮುಖಾಂತರ ತಾಲೂಕು ಕಚೇರಿಗೆ ಆಗಮಿಸಿ ತಹಸಿಲ್ದಾರ್ ಅವರ ಮುಖಾಂತರ ಮಾನ್ಯ ಗೃಹ ಮಂತ್ರಿಗಳು ಜಿ.ಪರಮೇಶ್ವರ, ಅವರಿಗೆ ಮನವಿ ಪತ್ರ ನೀಡಲಾಯಿತು.ವಿಜಯನಗರ ಜಿಲ್ಲಾ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಸಂಘ ಸೋಮಶೇಖರ್ ಬಣ್ಣದಮನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ. ಬಿ.ಜೆ.ಪಿ ಮಾಜಿ ಸಚಿವ ಅರಗ ಜ್ಞಾನೇಂದ್ರ, ಅತ್ಯಂತ ಹಿರಿಯ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ಡಾ. ಮಲ್ಲಿಕಾರ್ಜುನ ಖರ್ಗೆಯವರಿಗೆ ವರ್ಣಬೇದ ಮಾಡುವುದರ ಮೂಲಕ ದ್ರಾವಿಡರ ಅಸ್ಮಿತೆಯ ಬಣ್ಣವಾದ ಕಪ್ಪು ಬಣ್ಣವನ್ನು ಹಿಯ್ಯಾಳಿಸುವುದರ ಜೊತೆಗೆ ಜನಾಂಗೀಯ ನಿಂದನೆ ಮಾಡಿದ್ದಾನೆ. ಇದು ಸಂವಿಧಾನದ ಅಣಕವಾಗಿದೆ. ನಮ್ಮ ಸಂವಿಧಾನದಲ್ಲಿ ಧರ್ಮ, ಜನಾಂಗ, ಜಾತಿ, ಲಿಂಗ ಅಥವಾ ಜನಾಂಗೀಯ ಆಧಾರದ ಮೇಲೆ ಮಾತಾಡುವುದನ್ನು ನಿಷೇಧಿಸಿದೆ. ಆದರೂ ಮನುವಾದವನ್ನು ಹೊತ್ತಿರುವ ಜ್ಞಾನೇಂದ್ರನ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸಿ ಬಂಧಿಸುವುದರ ಜೊತೆಗೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲು ವಿಜಯನಗರ ಜಿಲ್ಲಾ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಸಂಘವು ಒತ್ತಾಯಿಸುತ್ತದೆ ಎಂದು ಹೇಳಿದರು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು ಈ ಸಂದರ್ಭದಲ್ಲಿಟಿ.ವಾಸುದೇವ್,ಸೋಮಶೇಖರ್ ಬಣ್ಣದ ಮನೆ,ಜೆ.ಶಿವಕುಮಾರ್ ಇನ್ನು ಹಲವಾರು ಮುಖಂಡರು ಪಾಲ್ಗೊಂಡಿದ್ದರು ಮತ್ತು ಈ ಸಂದರ್ಭದಲ್ಲಿ ಮತ್ತೊಂದು ಮನವಿ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಹೆಚ್.ಸಿ. ಮಹದೇವಪ್ಪ, ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರು ಇವರಿಗೆ ಸುಲ್ತಾನ್ ಮುಖಾಂತರ ಮನವಿ ನೀಡಲಾಯಿತುಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ ಇರುವ ವಿಶೇಷ ಅನುದಾನದಲ್ಲಿ (ಎಸ್.ಸಿ.ಪಿ / ಟಿ.ಎಸ್.ಪಿ) ಅಡಿಯಲ್ಲಿನ ಹನ್ನೊಂದು ಸಾವಿರ ಕೋಟಿಯನ್ನು 5 ಗ್ಯಾರಿಂಟಿಗಳ ಜಾರಿಗಾಗಿ ಬಳಕೆ ಮಾಡುವ ರಾಜ್ಯ ಸರ್ಕಾರದ ತೀರ್ಮಾನವನ್ನು ವಾಪಸ್ಸು ಪಡೆಯಬೇಕೆಂದು ಪರಿಶಿಷ್ಠಾದ ಅಭಿವೃದ್ಧಿಗೆ ಮೀಸಲಿಟ್ಟ ಹನ್ನೊಂದು ಸಾವಿರ ಕೋಟಿಯಷ್ಟು ಹಣವನ್ನು ಅನ್ಯ ಉದ್ದೇಶಕ್ಕೆ ಬಳಸುವುದು ಕಾನೂನು ಬಾಹಿರ ತೀರ್ಮಾನ, ಎಸ್.ಸಿ.ಪಿ & ಟಿ.ಎಸ್.ಪಿ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸಲು ಅವಕಾಶ ಒದಗಿಸುತ್ತಿದ್ದ ಕಾಯ್ದೆಯ ಸೆಕ್ಷನ್ ?ಡಿ ಯನ್ನು ರದ್ದುಗೊಳಿಸುವ ಸರ್ಕಾರದ ತೀರ್ಮಾನಕ್ಕೆ ಎಳ್ಳು ನೀರು ಬಿಟ್ಟಂತೆ, ಈ ಸೆಕ್ಷನ್ ರದ್ದಾದ ನಂತರವು ಉಪಯೋಜನೆಗಳ ಅನುದಾನವನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಸುವುದು ದಲಿತ ಸಮುದಾಯವನ್ನು ವಂಚಿಸುವ ಪ್ರಯತ್ನವಾಗಿದೆ. ಎಂದು ವಿಜಯನಗರ: ಜಿಲ್ಲಾ ದಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಸಂಘವು ಒತ್ತಾಯಿಸುತ್ತದೆ.
ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್. ಹೊಸಪೇಟೆ