ರಸ್ತೆ ಅಪಘಾತ ಯುವಕ ಸಾವು ಇನ್ನಾದರೂ – ಪಿ.ಡಬ್ಲ್ಯೂ.ಡಿ ಇಲಾಖೆಯವರು ಎಚ್ಚೆತ್ತು ಕೊಳ್ಳಲು ಸಾರ್ವಜನಿಕರಿಂದ ಆಗ್ರಹ.
ಯಂಕಂಚಿ ನ.18

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಯಿಂದ ಗೊಲಗೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗೊಲಗೇರಿ ಗ್ರಾಮದ ಯುವಕ ಶಿವರಾಜ್.ಮಲ್ಲಪ್ಪ. ನಾಯ್ಕೊಡಿ 31 ಸಾವಿಗೀಡಾಗಿದ್ದಾನೆ ..ಭಾನುವಾರ ಬೆಳಿಗ್ಗೆ 7 ಗಂಟೆಗೆ ಶಿವರಾಜನು ಡಂಬಳ ಗ್ರಾಮದ ಗೊಲ್ಲಳಪ್ಪನ ಮಾಲೀಕತ್ವದ KA – 29 A – 2973 ಆಟೋದಲ್ಲಿ ಸಿಂದಗಿ ಸಂತೆಯಲ್ಲಿ ಕುರಿಗಳನ್ನು ತೆಗೆದುಕೊಂಡು ಮರಳಿ ಊರಿಗೆ ಬರುತ್ತಿರುವಾಗ ಗೊಲಗೇರಿ ಕಡೆಯಿಂದ ಯಾದಗಿರಿ ಡಿಪೋವಿನ KA – 33 F – 0604 ಯಾದಗಿರಿ to ಸಾತಾರ ಬಸ್ಸು ಮತ್ತು ಆಟೋದ ಮಧ್ಯ ಅಪಘಾತ ನಡೆದಿದೆ.

ಅಪಘಾತದಲ್ಲಿ ಇನ್ನುಳಿದ 4 ಜನ ಪ್ರಾಣಾಪಾಯದಿಂದ ಪಾರಾಗಿದ್ದು. ಸಣ್ಣ ಪುಟ್ಟ ಗಾಯಗಳಾಗಿವೆ ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಂದು ತಿಳಿದು ಬಂದಿದೆ ಈ ಕುರಿತು ಸಿಂದಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕೆಲವು ತಿಂಗಳ ಹಿಂದೆ ಯಂಕಂಚಿ ಗ್ರಾಮದ ಹತ್ತಿರ ಇಂತಹದೇ ಅಪಘಾತ ಪ್ರಕರಣ ನಡೆದಿತ್ತು ಆ ಸಮಯದಲ್ಲಿ ಕೂಡ ಗೋಲಗೇರಿ ಗ್ರಾಮದ ಒಬ್ಬ ಯುವಕ ಸಾವಿಗೀಡಾಗಿದ್ದು.

ಸಿಂದಗಿಯಿಂದ ಶಹಾಪುರ ಹೋಗುವ ರಾಜ್ಯ ಹೆದ್ದಾರಿ ಮನ್ನಾಪುರ ಗ್ರಾಮ ದಿಂದ ಗೊಲಗೇರಿ ಸುಮಾರು 14 ಕಿಲೋಮೀಟರ ರಾಜ್ಯ ಹೆದ್ದಾರಿ ರಸ್ತೆ ಸಂಪೂರ್ಣ ಹಾಳಾಗಿದ್ದು ಇನ್ನಾದರು ಪಿ.ಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಕೊಂಡು ಆದಷ್ಟು ಬೇಗ ರಸ್ತೆ ಸುಧಾರಣೆ ಮಾಡಬೇಕು ಇನ್ನಾದರು ಅಪಘಾತಗಳನ್ನು ಆಗದಂತೆ ನೋಡಿ ಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ ದೇವರ ಹಿಪ್ಪರಗಿ