ಮೊಳಕಾಲ್ಮೂರು ಕ್ಷೇತ್ರಕ್ಕೆ ಸಾರ್ವಜನಿಕರ ಕೆಲಸಗಳನ್ನು ಮಾಡಲು ಮತ್ತು ಅಭಿವೃದ್ದಿ ಕಾರ್ಯಗಳ ಯೋಜನೆ ರೂಪಿಸುವಲ್ಲಿ ಶಾಸಕರು ನಿಸ್ಸೀಮರು.

ಎರನಳ್ಳಿ ಆಗಷ್ಟ.4

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕು ವಸತಿ ಶಾಲೆಗಳ ಬಗ್ಗೆ ಗಮನಹರಿಸಿದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಎನ್. ವೈ. ಗೋಪಾಲಕೃಷ್ಣ ಶಾಸಕರು ಎರನಳ್ಳಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಶಾಸಕರು ಭೇಟಿಕೊಟ್ಟು ಬಡ ವಿದ್ಯಾರ್ಥಿಗಳ ಸಮಸ್ಯೆಗಳು ಆಲಿಸಿ ಈ ವಸತಿ ಶಾಲೆಯಲ್ಲಿ ನಿಮಗೆ ಏನಾದರೂ ತೊಂದರೆ ಅಥವಾ ಅನ್ಯಾಯ ಆಗಿದ್ದರೆ ನನ್ನ ಗಮನಕ್ಕೆ ತನ್ನಿ ನಾನು ಈ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ವಸತಿ ಶಾಲೆಯ ವಿದ್ಯಾರ್ಥಿನಿಯರನ್ನು ಸರ್ಕಾರದ ಕಾನೂನಾತ್ಮಕವಾಗಿ ಬಂದಂತಹ ಅನುದಾನವನ್ನು ಸರಿಯಾದ ರೀತಿಯಿಂದ ವಿದ್ಯಾರ್ಥಿನಿಯರಿಗೆ ನೋಡಿಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೂ ಮತ್ತು ವಾರ್ಡನ್ ಗಳಿಗೆ ಎಚ್ಚರಿಕೆ ಕೊಡುತ್ತೇನೆ ಎಂದು ಶಾಸಕರು ಹೇಳಿದರು ಮತ್ತು ಚೆನ್ನಾಗಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿ ನಿಮ್ಮ ತಂದೆ ತಾಯಿಗೆ ಹೆಸರು ಬರುವಂತೆ ವಿದ್ಯಾವಂತರಾಗಬೇಕು ನೀವು ವಿದ್ಯಾವಂತರಾದರೆ ನಿಮ್ಮ ಮನೆಯಲ್ಲಿದ್ದ ಕುಟುಂಬಗಳು ಸಹ ವಿದ್ಯಾವಂತರಾಗುತ್ತಾರೆ ಎಂಬ ಬಯಕೆ ಇರುತ್ತದೆ ಎಂದು ಮಾನ್ಯ ಶಾಸಕರು ವಿದ್ಯಾರ್ಥಿಗೆ ತಿಳುವಳಿಕೆ ಹೇಳಿದರು ಮಾನ್ಯ ಅಭಿವೃದ್ಧಿ ಹರಿಕಾರರಾದ ಎನ್. ವೈ. ಗೋಪಾಲಕೃಷ್ಣ ಶಾಸಕರು ಮೊಳಕಾಲ್ಮೂರು ಕ್ಷೇತ್ರಕ್ಕೆ ಟೈಮು ವೇಷ್ಟ್ ಮಾಡದೆ ವಸತಿ ಶಾಲೆಗಳ ಬಗ್ಗೆ ಗಮನಹರಿಸಿ ಮತ್ತು ಕ್ಷೇತ್ರದ ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಮತ್ತು ಮೊಳಕಾಲ್ಮೂರು ಬಹಳ ಹಿಂದುಳಿದ ತಾಲೂಕು ಬರದ ನಾಡು ಎಂದು ಹೆಸರುವಾಸಿಯಾಗಿದೆ.

ಇಂಥ ಬರದ ನಾಡು ಹಸಿರು ಕ್ರಾಂತಿಯನ್ನಾಗಿ ಮಾಡಬೇಕೆಂಬುದೇ ಶಾಸಕರ ಒಂದು ದೊಡ್ಡ ಗುಣವಾಗಿದೆ ಇಂತಹ ಶಾಸಕರು ಮೊಳಕಾಲ್ಮೂರು ಕ್ಷೇತ್ರಕ್ಕೆ ಮರಳಿ ಬಂದಿರುವುದು ಇಡೀ ಕ್ಷೇತ್ರದ ನಾಗರಿಕರು ಹೆಮ್ಮೆ ಎಂದು ವ್ಯಕ್ತಪಡಿಸಿದ್ದಾರೆ. ಇವರ ಅವಿರತ ಶ್ರಮ ಚಾಕಚಕ್ಯತೆ ಕ್ರಿಯಾತ್ಮಕ ಸಂಘಟನೆ ಬಲಪಡಿಸುವುದು ಮತ್ತು ದೂರದೃಷ್ಟಿಯ ವಿಚಾರ. ಆಯಾ ಊರು. ಗ್ರಾಮ. ನಗರ. ಹೋಬಳಿಗಳನ್ನು ಗಮನದಲ್ಲಿಟ್ಟುಕೊಂಡು ಆಯಾ ಪ್ರದೇಶಕ್ಕೆ ಯಾವುದು ಅವಶ್ಯ ಇದೆ ಎಂದು ಗ್ರಹಿಸಿಕೊಂಡು ಕೆಲಸ ಕಾರ್ಯಗಳನ್ನು ಮಾಡುವುದೇ ಇವರ ಹುಟ್ಟು ಗುಣ. ಎಲ್ಲಾ ನಾಗರಿಕರಿಗೆ ಸರ್ಕಾರದ ಸವಲತ್ತುಗಳು ಅಭಿವೃದ್ಧಿಗಳು ಯೋಜನೆಗಳು ತಲುಪಿಸುವುದೇ ಇವರ ಉದ್ದೇಶ ಕರ್ನಾಟಕದ ಇತಿಹಾಸದಲ್ಲಿ ನೋಡಿರಲಿಲ್ಲ ಇಂಥ ಒಬ್ಬ ನಿಜವಾದಂತ ಶಾಸಕರನ್ನ ಇವರು ಶಾಸಕರಾಗಿ ಎರಡು ತಿಂಗಳು ಆಗಿಲ್ಲ ಆದರೆ ನಾಯಕನಹಟ್ಟಿ ಹತ್ತಿರ ಒಂದು ಕೋಟಿ 50 ಲಕ್ಷ ಬ್ರಿಡ್ಜ್ ಭೂ ಪೂಜೆ ಉದ್ಘಾಟನೆ ಮಾಡಿದರು ಮತ್ತು ನಾಯಕನಹಟ್ಟಿ ಪಟ್ಟಣ ಪಂಚಾಯತಿಗೆ ಬಸ್ಟ್ಯಾಂಡ್ ಯೋಜನೆ ಸಂತೆ ಮಾರ್ಕೆಟ್ ಮಳಿಗೆಗಳನ್ನು ಯೋಜನೆ ರೂಪಿಸಿರುತ್ತಾರೆ ಮತ್ತು ಮೊಳಕಾಲ್ಮೂರು ತಾಲೂಕು ಪಂಚಾಯಿತಿ ಆಫೀಸನ್ನು ಸಹ ಮಿನಿ ವಿಧಾನಸೌಧ ಪಕ್ಕಕ್ಕೆ ಹೊಸ ಯೋಜನೆ ರೂಪಿಸಿರುತ್ತಾರೆ ಮತ್ತು ಮೊಳಕಾಲ್ಮೂರು ಸಂತೆ ಮೈದಾನವನ್ನು ಸಹ ಹೊಸ ಜಾಗಕ್ಕೆ ಯೋಜನೆ ರೂಪಿಸಿರುತ್ತಾರೆ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡನ್ನು ಸಹ ಯೋಜನೆ ರೂಪಿಸಿರುತ್ತಾರೆ ಗ್ರಾಮಗಳ ರಸ್ತೆ ಬಗ್ಗೆ ಸಹ ಗಮನಹರಿಸಿದ್ದಾರೆ ಮತ್ತು ರೈತರ ಕೃಷಿಕರ ಬಗ್ಗೆ ಸಹ ಮಾನ್ಯ ಅಭಿವೃದ್ಧಿ ಹರಿಕಾರರಾದ ಎನ್ ವೈ ಗೋಪಾಲಕೃಷ್ಣ ಶಾಸಕರು ಗಮನ ಹರಿಸಿದ್ದಾರೆ ಇನ್ನು ಹಲವಾರು ಯೋಜನೆಗಳು ಮೊಳಕಾಲ್ಮೂರು ಕ್ಷೇತ್ರಕ್ಕೆ ಸಾರ್ವಜನಿಕರ ಸೇವೆ ಮಾಡಲು ಮುಂದಾಗಿದ್ದಾರೆ ಎಂದು ತಿಳಿದು ಬರುತ್ತದೆ ಎಂದು ವರದೆಯಾಗಿದೆ.

ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button