ಕೂಡಲ ಸಂಗಮ ಪಿ.ಕೆ.ಪಿ.ಎಸ್.ಅಧ್ಯಕ್ಷರಾಗಿ ಕಾಂಗ್ರೇಸ್ ಪಕ್ಷದ ಮಹಾಂತೇಶ ಲಗಮಣ್ಣವರ ಅವಿರೋಧ ಆಯ್ಕೆ.
ಕೂಡಲ ಸಂಗಮ ಆಗಷ್ಟ.4

ಬಸವಣ್ಣನವರ ಐಕ್ಯ ಭೂಮಿ, ಅಂತರಾಷ್ಟ್ರೀಯ ಕೇಂದ್ರವಾದ ಪ್ರತಿಷ್ಠಿತ ಕೂಡಲಸಂಗಮ ಪಿ.ಕೆ.ಪಿ.ಎಸ್ ಅಧ್ಯಕ್ಷರಾಗಿ ಖಜಗಲ್ ಗ್ರಾಮದ ಮಹಾಂತೇಶ ಲಗಮನ್ನವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ..ಕೂಡಲಸಂಗಗಮ ಪಿ.ಕೆ.ಪಿ.ಎಸ್ ಕಛೇರಿಯಲ್ಲಿ ಜರುಗಿದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ವಿರೋಧವಿಲ್ಲದೇ ಕಾಂಗ್ರೆಸ್ ಬಾವುಟ ಹಾರಿದ್ದು ಮಹಾಂತೇಶ ಲಗಮನ್ನವರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ..ನಂತರ ಮಾತನಾಡಿದ ಅವರು, ಕೂಡಲ ಸಂಗಮದಂತಹ ಅಂತರಾಷ್ಟ್ರೀಯ ಸ್ಥಾನಮಾನ ಹೊಂದಿರುವ ಪುಣ್ಯ ಕ್ಷೇತ್ರದ ಪಿ.ಕೆ.ಪಿ.ಎಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಸಂತಸ ತಂದಿದೆ,

ನಮ್ಮ ಭಾಗದ ರೈತರ ಕಷ್ಟ ಕಾರ್ಪಣ್ಯಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿ ರೈತರ ಏಳಿಗೆಗಾಗಿ ನಿರಂತರ ಶ್ರಮಿಸುತ್ತೇನೆ ಎಂದರು..ನೂತನ ಅಧ್ಯಕ್ಷರಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗಂಗಾಧರ ದೊಡಮನಿ, ಮುಖಂಡರಾದ ವಸಂತ ದೇಶಪಾಂಡೆ, ನಿರ್ಗಮಿತ ಪಿ.ಕೆ.ಪಿ.ಎಸ್ ಅಧ್ಯಕ್ಷರಾದ ಶೇಖರಗೌಡ ಗೌಡರ ಸೇರಿದಂತೆ ಅನೇಕ ಮುಖಂಡರು ಉಪಸ್ಥತರಿದ್ದು ಶುಭ ಹಾರೈಸಿದ್ದಾರೆ.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ. ಬಂಡರಗಲ್ಲ