ಜನ ಸಾಮಾನ್ಯರಿಗೆ ನರೇಗಲ್ಲ ಇಂದಿರಾ ಕ್ಯಾಂಟಿನ್ ಕಡಿಮೆ ದರದಲ್ಲಿ ಹಸಿವು ನೀಗಿಸುವ ವರದಾನವಾಗಲಿದೆ – ಶಾಸಕ ಜಿ.ಎಸ್ ಪಾಟೀಲ್.
ಅಬ್ಬಿಗೇರಿ ಮೇ.14





ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಅಬ್ಬಿಗೇರಿ ರಸ್ತೆ ಮಾರ್ಗದಲ್ಲಿ ನೂತನವಾಗಿ ನಿರ್ಮಿಸಲಾದ ಇಂದಿರಾ ಕ್ಯಾಂಟಿನ್ ಕಟ್ಟಡವನ್ನು ಶಾಸಕ ಜಿ.ಎಸ್ ಪಾಟೀಲ್ ಉದ್ಘಾಟನೆ ಮಾಡಿ ಮಾತನಾಡಿದರು.ಹಸಿವು ಮುಕ್ತ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಧೈಯವಾಗಿದೆ. ‘ಯೋಜನೆಯಡಿ ಕಡಿಮೆ ದರದಲ್ಲಿ ಜನರಿಗೆ ಊಟ, ಉಪಹಾರವನ್ನು ಇಂದಿರಾ ಕ್ಯಾಂಟೀನ್ನಲ್ಲಿ ನೀಡಲಾಗುತ್ತದೆ’ ಎಂದು ರೋಣ ಶಾಸಕ ಜಿ.ಎಸ್ ಪಾಟೀಲ ಹೇಳಿದರು.ನಗರಾಭಿವೃದ್ಧಿ ಪೌರಾಡಳಿತ ಇಲಾಖೆ, ನಿರ್ದೇಶನಾಲಯ, ಜಿಲ್ಲಾಡಳಿತ ಗದಗ ಹಾಗೂ ಪಟ್ಟಣ ಪಂಚಾಯಿತಿ ಕಾರ್ಯಾಲಯ ನರೇಗಲ್ ಆಶ್ರಯದಲ್ಲಿ ಪಟ್ಟಣದ ಅಬ್ಬಿಗೇರಿ ರಸ್ತೆ ಮಾರ್ಗದ ರೈತ ಸಂಪರ್ಕ ಕೇಂದ್ರದ ಸಮೀಪದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಇಂದಿರಾ ಕ್ಯಾಂಟೀನ್ ಕಟ್ಟಡವನ್ನು ಮಂಗಳವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದರು. ‘ನರೇಗಲ್ ಪಟ್ಟಣದಲ್ಲಿ ಶಿಕ್ಷಣವನ್ನು ಪಡೆಯಲು ಕಲ್ಯಾಣ ಕರ್ನಾಟಕ ಸೇರಿದಂತೆ ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಬರುತ್ತಾರೆ. ಕೂಲಿ ಕಾರ್ಮಿಕರಿಗೆ, ಬಡವರಿಗೆ, ಆಸ್ಪತ್ರೆಗೆ ಬರುವ ರೋಗಿಗಳಿಗೆ, ಜನ ಸಾಮಾನ್ಯರಿಗೆ ಕಡಿಮೆ ದರದಲ್ಲಿ ಹಸಿವು ನೀಗಿಸುವ ಮೂಲಕ ವರದಾನವಾಗಲಿದೆ.

ಬೆಳಗಿನ ಉಪಹಾರ ₹5 ದರದಲ್ಲಿ, ಮಧ್ಯಾಹ್ನ ಹಾಗೂ ಸಂಜೆ ಊಟ ₹10 ದರದಲ್ಲಿ ನೀಡಲಾಗುತ್ತದೆ’ ಎಂದರು.ಸಂಜೆ ವೇಳೆ ಸುರಿದ ಮಳೆಯಿಂದಾಗಿ ಸಭಾ ಕಾರ್ಯಕ್ರಮ ನಡೆಯದ ಕಾರಣ ಉದ್ಘಾಟನೆ ನೆರವೇರಿಸಿದ ಶಾಸಕರು ಹಾಗೂ ಮುಖಂಡರು ಪಲಾವ, ಮಂಡಕ್ಕಿ ಚೂಡಾ, ಮಿರ್ಜಿ ಸವಿದರು. ನಂತರ ಶಾಸಕರನ್ನು ಸ್ಥಳೀಯರು ಸನ್ಮಾನಿಸದರು. ಈ ಸಮಯದಲ್ಲಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಕ್ಷಯ ಐ. ಪಾಟೀಲ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಸ್ಥಾಯಿ ಸಮಿತಿ ಅಧ್ಯಕ್ಷ ಮುತ್ತಪ್ಪ ನೂಲ್ಕಿ, ನರೇಗಲ್ ಶಹರ ಘಟಕ ಕಾಂಗ್ರೆಸ್ ಅಧ್ಯಕ್ಷ ಶಿವನಗೌಡ ಪಾಟೀಲ, ವೀರಣ್ಣಶೆಟ್ಟರ, ಕೆ. ಬಿ. ಧನ್ನೂರ, ಮೈಲಾರಪ್ಪ. ಚಳ್ಳಮರದ, ಅಲ್ಲಾಬಕ್ಕಿ ನದಾಫ್, ಹನಮಂತಪ್ಪ ಅಬ್ಬಿಗೇರಿ, ನಿಂಗನಗೌಡ ಲಕ್ಕನಗೌಡ್ರ, ಸಂತೋಷ ಹನಮಸಾಗರ, ಸದ್ದಾಂ ನಶೇಖಾನ್, ಎ. ಸಿ. ಪಾಟೀಲ, ರಾಚಯ್ಯ ಮಾಲಗಿತ್ತಿಮಠ, ದಾವುದ್ ಅಲಿ ಕುದರಿ, ಎ. ಎ. ನವಲಗುಂದ, ಸಕ್ರಪ್ಪ ಹಡಪದ, ಕಳಕನಗೌಡ ಪೊಲೀಸ್ ಪಾಟೀಲ, ಶೇಖಪ್ಪಕೆಂಗಾರ, ವೀರೇಶ ಜೋಗಿ, ಎಂ. ತರ ಎಸ್. ಧಡೆಸೂರಮಠ, ಯಚ್ಚರಗೌಡ ಗೋವುಂದಗೌಡ್ರ, ಮುಖ್ಯಾಧಿಕಾರಿ ಮಹೇಶ ಬಿ. ನಿಡಶೇಶಿ, ಶೇಖಪ್ಪ ಜುಟ್ಲ, ಗುಡದಪ್ಪ ಗೋಡಿ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ