ಗ್ರಾಂ.ಪಂ. ಕಾರ್ಯದರ್ಶಿಗಳಿಗೆ ಹೊಸ ಪಿಂಚಣಿಯನ್ನು ರದ್ದುಪಡಿಸಿ : ಹಳೆಯ ಪಿಂಚಣಿಯನ್ನು ಜಾರಿಗೊಳಿಸುವಂತೆ — ಸಿಇಓ ಗೆ ಮನವಿ ಸಲ್ಲಿಸಿಕ್ಕೆ.

ಹುನಗುಂದ ಆಗಷ್ಟ. 4

ಗ್ರಾಮ ಪಂಚಾಯತ ಕಾರ್ಯದರ್ಶಿಗಳಿಗೆ ಹೊಸ ಪಿಂಚಣೆಯನ್ನು ರದ್ದುಪಡಿಸಿ ಹಳೆ ಪಿಂಚಣೆ ವ್ಯವಸ್ಥೆಯನ್ನು ಪುನರಾರಂಭಿಸಬೇಕು ಮತ್ತು ಕಾರ್ಯದರ್ಶಿ ಗ್ರೇಡ್-೧ ಹುದ್ದೆಯಿಂದ ಪಂಚಾಯತ ಅಭಿವೃದ್ದಿ ಅಧಿಕಾರಿ ಹುದ್ದೆಗೆ ಜಿಲ್ಲೆ ಮಟ್ಟದಲ್ಲಿ ನೀಡುತ್ತಿದ್ದ ಮುಂಬಡ್ತಿಯನ್ನು ರದ್ದುಪಡಿಸಿದ ಸರ್ಕಾರದ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕೆಂದು ಒತ್ತಾಯಿಸಿ ಇತ್ತೀಚಿಗೆ ಕರ್ನಾಟಕ ರಾಜ್ಯ ಗ್ರಾ.ಪಂ ಕಾರ್ಯದರ್ಶಿಗಳ ಸಂಘದಿಂದ ಬಾಗಲಕೋಟ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಅವರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ವೇಳೆ ಕರ್ನಾಟಕ ರಾಜ್ಯ ಗ್ರಾ.ಪಂ ಕಾರ್ಯದರ್ಶಿಗಳ ಸಂಘದ ಜಿಲ್ಲಾಧ್ಯಕ್ಷ ಈಶ್ವರಪ್ಪ ಹುದ್ದಾರ ಮಾತನಾಡಿ ಮಂಡಳ ಪಂಚಾಯತಯಿಂದ ಹಿಡಿದು ಸಧ್ಯ ಗ್ರಾ.ಪಂಯಲ್ಲಿ ಹಲವಾರು ವರ್ಷಗಳಿಂದ ಕಡಿಮೆಯ ಸಂಬಳದಲ್ಲಿ ಗ್ರಾ.ಪಂ ಯಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿರುವ ರಾಜ್ಯದ ಸಾವಿರಾರು ಗ್ರಾ.ಪಂ ಕಾರ್ಯದರ್ಶಿಗಳು ಮತ್ತು ಅವರನ್ನೇ ನಂಬಿಕೊಂಡ ಅವರ ಕುಟುಂಬ ಸಧ್ಯದ ಹೊಸ ಪಿಂಚಣೆ ವ್ಯವಸ್ಥೆಯಿಂದ ಬಹಳಷ್ಟು ಶೋಷಣೆಯನ್ನು ಅನುಭವಿಸುವಂತಾಗಿದೆ.ಹೊಸ ಪಿಂಚಣೆಯಲ್ಲಿ ನಿವೃತ್ತಿಗೊಂಡ ಪಂಚಾಯತ ಕಾರ್ಯದರ್ಶಿಗಳು ಪ್ರತಿ ತಿಂಗಳ ೧೦೦೦ ಮತ್ತು ೧೫೦೦ ಪಿಂಚಣೆ ಬರುತ್ತಿದ್ದು ಇದರಲ್ಲಿ ಕುಟುಂಬವನ್ನು ನಿರ್ವಹಣೆ ಮಾಡುವುದು ಕಷ್ಟ ಸಾಧ್ಯವಾಗಿದೆ.ಏಪ್ರೀಲ್ ೧ ೨೦೦೬ರ ಮುಂಚೆ ನೇಮಕಗೊಂಡು ನಂತರ ಪದೋನ್ನತಿ ಹೊಂದಿದ ಕಾರ್ಯದರ್ಶಿ ಮತ್ತು ದ್ವಿತೀಯ ಲೆಕ್ಕಸಹಾಯಕರಿಗೆ ಕೆಸಿಎಸ್‌ಆರ್ ೨೩೫ ರ ಪ್ರಕಾರ ಹಳೆಯ ಪಿಂಚಣೆಯನ್ನು ನೀಡಬೇಕು.ಕಳೆದ ಜೂನ್ ೧೫ ೨೦೨೩ರಂದು ಜಿಲ್ಲಾ ಮಟ್ಟದಲ್ಲಿ ನೀಡುತ್ತಿದ್ದ ಮುಂಬಡ್ತಿಯನ್ನು ರದ್ದು ಪಡಿಸಿ ರಾಜ್ಯ ಮಟ್ಟದ ಜೇಷ್ಠತೆ ಆಧಾರ ಮೇಲೆ ಮುಂಬಡ್ತಿ ನೀಡುವ ಆದೇಶವನ್ನು ತಕ್ಷಣವೇ ಹಿಂಪಡೆದು ಮತ್ತೇ ಜಿಲ್ಲಾ ಮಟ್ಟದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಅಧಿಕಾರಿಗಳಿಗೆ ಅಧಿಕಾರ ನೀಡಬೇಕು.೨೦೧೧ ರ ಜನಗಣತೆಯ ಪ್ರಕಾರ ಗ್ರಾ.ಪಂ ಗ್ರೇಡ್೨ ರಿಂದ ಗ್ರೇಡ್-೧ಗೆ ಮೇಲ್ದರ್ಜೆಗೆರಿಸಬೇಕು.ಗ್ರೇಡ್-೧ ಕಾರ್ಯದರ್ಶಿಯಿಂದ ಪದೋನ್ನತಿ ಪಡೆದು ಪಿಡಿಓ ಆಗಿರುವ ನೌಕರರಿಗೆ ಸಹಾಯಕ ಉಪನಿರ್ದೇಶಕರ ಹುದ್ದೆಗೆ ಪದೋನ್ನತಿ ನೀಡುವಾಗ ಶೇ ೩೦ ರ ಅನುಪಾತದಡಿಯಲ್ಲಿ ಮುಂಬಡ್ತಿ ನೀಡಬೇಕು.ಗ್ರೇಡ್-೧ ಹುದ್ದೆಯನ್ನು ನೇರವಾಗಿ ನೇಮಕಾತಿ ಮಾಡುವ ಬದಲು ಗ್ರೇಡ್-೨ ಗಳಿಗೆ ಪದೋನ್ನತಿಯನ್ನು ನೀಡುವಂತಾಗಬೇಕು.ಏಪ್ರೀಲ್ ೧೭ ೨೦೧೫ರ ಗ್ರಾ.ಪಂ ಆದೇಶದಂತೆ ಕಾರ್ಯದರ್ಶಿಗಳಿಗೆ ಇಂಧನದ ವೆಚ್ಚವನ್ನು ನೀಡಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷ ರಾಘು ಕೋಲಾರ,ಪ್ರಧಾನ ಕಾರ್ಯದರ್ಶಿ ಹನಮಂತ ಭಜಂತ್ರಿ,ಶೇಖಪ್ಪ ಚಂದ್ರಗಿರಿ,ರಾಮಪ್ಪ ದೊಡಮನಿ,ಇಮಾಮಸಾಬ ಮುಲ್ಲಾ,ಹುಸೇನಸಾಬ ಪಿಂಜಾರ,ಪಾರ್ವತೆವ್ವ ಹುನಗುಂದ,ಶಿವಯ್ಯ ಬೂದಿಹಾಳ,ರಾಜೇಸಾಬ ಅಕ್ಕೋಜಿ,ಪಿ.ಬಿ.ಮೇಟಿ,ಸಿ.ಟಿ.ಚಲವಾದಿ,ಎಂ.ಎ.ಕಟಗೇರಿ,ಕೆ.ಎಫ್.ಕರಿಪ್ಪನವರ,ಬಿ.ಟಿ.ವಡ್ಡರ,ಪ್ರಶಾಂತ ಶಿರೂರ,ಎಸ್.ಎಂ.ತಿಮ್ಮನಗೌಡರ,ಎಸ್.ವಾಯ್.ಬಿದರಿ ಸೇರಿದಂತೆ ಅನೇಕರು ಇದ್ದರು. ‌.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ. ಬಂಡರಗಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button