ವಿಶ್ವ ಕಲಾರತ್ನ ಶ್ರೀ ಸಿ.ಆರ್.ಸಿಂಹ ಪ್ರಶಸ್ತಿಗೆ ಬಣಕಾರ ಮೂಗಪ್ಪ ಆಯ್ಕೆ.

ಕೂಡ್ಲಿಗಿ ಆಗಷ್ಟ.5

ಕರ್ನಾಟಕದ ನಾಡಿನಲ್ಲಿ ಗಣನೀಯವಾಗಿ ರಂಗಭೂಮಿಯಲ್ಲಿ ಸಲ್ಲಿಸುತ್ತಿರುವ ಶ್ರೀ ಬಣಕಾರ ಮೂಗಪ್ಪ ಹಿರೇಹೆಗ್ಡಾಳ್ ಇವರು ಸುಮಾರು ವರ್ಷಗಳಿಂದ ರಂಗಭೂಮಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ಇವರಿಗೆ ಆಗಸ್ಟ್-20-2023 ರಂದು ಬೆಂಗಳೂರಿನ ಹೆಬ್ಬಾಳದ ಅಲುಮ್ನಿ ಅಸೋಸಿಯೇಷನ್ ಸಭಾಂಗಣದಲ್ಲಿ ವಿಶ್ವ ಕನ್ನಡ ಕಲಾ ಸಂಸ್ಥೆ ಇವರ ವತಿಯಿಂದ ರಂಗ ಭೂಮಿ, ವಿಶ್ವ ಕಲಾರತ್ನ ಶ್ರೀ ಸಿ‌.ಆರ್ ಸಿಂಹ ರಾಜ್ಯ ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಾಗುವುದು ಎಂದು ಶ್ರೀ ಸಿ.ಆರ್ ಸಿಂಹ ರವರ ತಮ್ಮನಾದ ಶ್ರೀ ಶ್ರೀನಾಥ್ ಪ್ರಣಯರಾಜ ಮತ್ತು ಮಗ ಪೃತ್ವಿಕ್ ಸಿಂಹರವರ ಸಮಕ್ಷಮದಲ್ಲಿ ವಿಶ್ವಕಲಾ ಶ್ರೀ ಸಿ.ಆರ್ ಸಿಂಹ ಪ್ರಶಸ್ತಿ ನೀಡಿ ಗೌರವಿಸುತ್ತೇವೆ ಎಂದು ಡಾ ಈ ರವೀಶ ಅಕ್ಕರ್ ಸಂಸ್ಥಾಪಕ ಅಧ್ಯಕ್ಷರು ಆಯ್ಕೆ ಪತ್ರ ನೀಡಿದ್ದಾರೆ.

ಇವರು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಬಣ್ಣ ಹಚ್ಚಿ ಸುಮಾರು ವರ್ಷಗಳಿಂದ ರಂಗಭೂಮಿಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಇವರ ಕಲೆಯನ್ನು ಗುರುತಿಸಿ ಯಾವುದೇ ಸರ್ಕಾರಿ ಪ್ರಶಸ್ತಿ ಕೊಟ್ಟಿರುವುದಿಲ್ಲ, ಇಂಥಹಾ ಕಲಾವಿದರನ್ನು ಗುರುತಿಸ ಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಅಂದಿನ ಕಲೆ ಹಾಗೂ ಸಂಸ್ಕೃತಿಯ ಪರಂಪರೆ ಉಳಿಸಲು ಇಂದಿನ ಯುವ ಪೀಳಿಗೆಗೆ ಅವುಗಳನ್ನು‌ ಪರಿಚಯಿಸುವ ಮೂಲಕ ಭಾರತೀಯ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಬೇಕು, ರಂಗಭೂಮಿ ಕೀರ್ತಿಯನ್ನು ತಂದುಕೊಟ್ಟಿರೋದು ನಿಜವಾಗಿ ದೊಡ್ಡ ಸಾಧನೆ ಇದಾಗಿದೆ. ಇವರಲ್ಲಿ ಸಾಮಾಜಿಕ ಕಳಕಳಿ, ನಮ್ಮ ಭಾರತೀಯ ಪರಂಪರೆಯ, ನಮ್ಮನಾಡಿನ ಉತ್ತಮ ಗುಣಮಟ್ಟದ, ಸಂಸೃತಿಯನ್ನು, ಬೆಳಸುತ್ತಾ ಹಾಗೂ ಉಳಿಸುತ್ತಾ ಬಂದಿದ್ದಾರೆ.

ಇವರಿಗೆ ರಾಜ್ಯ ಪ್ರಶಸ್ತಿ ಎಂಬ ಬಿರುದಿಗೆ ಪಾತ್ರರಾಗಿರುವುದು ನಮಗೆಲ್ಲಾ ಸಂತೋಷದ ವಿಷಯವಾಗಿದೆ ಎಂದು ಕೂಡ್ಲಿಗಿ ತಾಲೂಕಿನ ಕಲಾವಿದರು ಹಾಗೂ ಸಂಘ-ಸಂಸ್ಥೆಯ ಪದಾಧಿಕಾರಿಗಳು ಅಭಿನಂದಿಸಿದ್ದಾರೆ. j

ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನೆ. ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button